ಪರಿಶ್ರಮ ಅನ್ನೋದು ಯಾರಿಗೂ ಕೈ ಕೊಡಲ್ಲ ಅನ್ನೋದಕ್ಕೆ ಈ ಹುಡುಗನೇ ಸಾಕ್ಷಿ ಹೌದು ಸಾಧಿಸಬೇಕು ಮತ್ತು ಏನಾದದರು ಮಾಡಬೇಕು ಅಂದರೆ ಅದಕ್ಕೆ ಪರಿಶ್ರಮ ಇರಲೇಬೇಕು ಈ ಹುಡುಗ ಸಹ ಅಷ್ಟೇ ಒಂದು ಬಡ ಕುಟುಂಬದಲ್ಲಿ ಜನಿಸಿದ ಈ ಹುಡುಗ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ತನ್ನ ರಾಜಾ ದಿನಗಳಲ್ಲಿ ಕೂಲಿ ಕೆಲಸ ಮಾಡುತಿದ್ದಾ ಈ ಹುಡುಗ ಇದೀಗ ಪಿಎಸ್ಐ ಆಗಿದ್ದಾನೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಪೂಜಿ ನಗರದ ತಾಂಡಾದ ಗುಪ್ಯನಾಯಕ್ಕ ಹಾಗು ಚಿಚಾಲೀಬಾಯಿ ದಂಪತಿಯ ಮಗ ಈ ಮುರುಳೀಧರ ನಾಯ್ಕ ಈ ಹುಡುಗ ಇದೀಗ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಹುಡುಗ ಪಿಎಸ್ಐ ಆಗಿದ್ದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ ಯಾಕೆ ಅಂದರೆ ಅವರ ಕುಟುಂಬ ಅಷ್ಟು ಬಡ ಕುಟುಂಬವಾಗಿತ್ತು.
ಈ ಮುರುಳೀಧರ ನಾಯ್ಕ ತಮ್ಮ ತಂಡದಲ್ಲೇ ಇರುವ ಹಲುವಾಗಲು ಮುರಾರ್ಜಿ ವಸತಿ ಶಾಲೆಯಲ್ಲೇ ತನ್ನ ೧ ರಿಂದ ೧೦ ತರಗತಿವರೆಗೆ ಅಲ್ಲೇ ಓದಿದ್ದ ನಂತರ ಮುರುಳೀಧರ ನಾಯ್ಕ ತನ್ನ ಪಿಯುಸಿಯನ್ನು ಹರಪನಳ್ಳಿಯ ಎಸ ಎಸ ಎಚ್ ಜೈನ ಕಾಲೇಜಿನಲ್ಲಿ ಓದಿದ ನಂತರ ಬಿಇ ಸಿವಿಲ್ ಎಂಜಿನಿಯರಿಂಗ್ ಓದಿದ್ದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿದ ನಂತರ ಈ ಮುರುಳೀಧರ ನಾಯ್ಕ ಆಯ್ಕೆ ಇಂಜಿನಿಯರಿಂಗ್ ಆದರೂ ತನ್ನ ಸಹೋದರ ಸಂತೋಷ್ ಆಗಲೇ ಪೊಲೀಸ್ ಇಲಾಖೆ ಸೇರಿದ್ದ ಹಾಗಾಗಿ ತಮ್ಮನ ಸಲಹೆಯಂತೆ ಪಿಎಸ್ಐ ಪರೀಕ್ಷೆ ಬರೆಯಲು ಸಿದ್ದನಾದ ಆದರೆ ಮೊದಲ ಬಾರಿ ಪಿಎಸ್ಐ ಪರೀಕ್ಷೆ ಕೈ ಹಿಡಿಯಲಿಲ್ಲ ಮತ್ತೆ ಛಲ ಬಿಡದೆ ಮರಳಿ ಪ್ರಯತ್ನ ಮಾಡಿ ಎರಡನೇ ಬಾರಿ ತನ್ನ ಗುರಿ ಮುಟ್ಟಿದ ಮುರುಳೀಧರ ನಾಯ್ಕ ಈ ಬಾರಿಯ ೩೦೦ ಹುದ್ದೆಗಳಲ್ಲಿ ೧೮೪ ನೇ ಕ್ರಮದಲ್ಲಿ ಮುರುಳೀಧರ ನಾಯ್ಕ ಆಯ್ಕೆಯಾಗಿದ್ದಾರೆ.
ಇನ್ನು ತಂದೆ ತಾಯಿಗೆ ಮೂರೂ ಎಕರೆ ಜಾಮೀನು ಇದ್ದರು ನೀರಾವರಿ ಇಲ್ಲದೆ ಬೆಳೆ ಬೆಳೆಯಲು ಸಾಧ್ಯವಾಗದೆ ಪ್ರತಿ ಬೆಸೆಗಿಯಲ್ಲಿ ಕಾಫೀ ನಾಡಿನ ಕಡೆ ಕೂಲಿ ಕೆಲಸ ಮಾಡಲು ಹೋಗುತಿದ್ದರು ಇನ್ನು ಈ ರಾಜ ಸಮಯದಲ್ಲಿ ಮುರುಳೀಧರ ನಾಯ್ಕ ಸಹ ತಂದೆ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುತಿದ್ದ ಇಷ್ಟೊಂದು ಕಷ್ಟದಲ್ಲೂ ಇಂತಹ ಸಾಧನೆ ಮಾಡಿರುವುದು ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದ್ದಾನೆ ಮುರುಳೀಧರ ನಾಯ್ಕ.