ಪ್ರತಿಯೊಬ್ಬರ ಮನೆಯಲ್ಲಿ ಈ ಜಿರಳೆಗಳ ಕಾಟ ತಪ್ಪಿದ್ದಲ್ಲ ನೋಡಿ ಕೆಲವೊಮ್ಮೆ ಈ ಮನೆಗಳಲ್ಲಿ ಜೀರೆಲೆಗಳ ಕಾಟಕ್ಕೆ ಏನು ಮಾಡಬೇಕು ಅನ್ನೋದೇ ಗೊತ್ತಾಗಲ್ಲ ಅಷ್ಟೊಂದು ತೊಂದರೆ ಕೊಡುತ್ತವೆ ಅದರಲ್ಲೂ ಅಡುಗೆ ಮನೆಯಲ್ಲಿ ಹೆಚ್ಚು ಕಾಟ ಕೊಡುತ್ತವೆ ಜಿರಳೆಗಳು ಮನೆಯಲ್ಲಿದ್ದರೆ ಇದರಿಂದ ಅನಾರೋಗ್ಯದ ಸಮಸ್ಯೆ ಕೂಡ ಬರಬಹುದು ಹಾಗಾಗಿ ಕೆಲವೊಮ್ಮೆ ಮನೆಯನ್ನು ಎಷ್ಟು ಸ್ವಚ್ಛವಾಗಿ ಇಟ್ಟರು ಕೂಡ ಇವುಗಳು ಮನೆಯಲ್ಲಿ ಹೆಚ್ಚಾಗಿರುತ್ತವೆ ಇದರಿಂದ ಹಲವಾರು ರೀತಿಯಾದ ರೋಗಗಳು ಮತ್ತು ಹಲವು ರೀತಿಯಾದ ಸಾಂಕ್ರಾಮಿಕ ರೋಗಗಳು ಬರುತ್ತವೆ ಹಾಗಾಗಿ ಈ ಜಿರಳೆಗಳ ಕಾಟಕ್ಕೆ ಯಾವುದೇ ಕೆಮಿಕಲ್ ಇಲ್ಲದೆ ನಿಮ್ಮ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಜಿರಲೆಗಳನ್ನು ಸೂಲಬವಾಗಿ ಓಡಿಸಬಹುದು, ಹೇಗೆ ಅನ್ನೋದು ಇಲ್ಲಿದೆ ನೋಡಿ.
ಮೊದಲೇ ಸುಲಭ ಮಾರ್ಗ ನಿಮ್ಮ ಮನೆಯಲ್ಲಿ ಯಾವ ಯಾವ ಜಾಗದಲ್ಲಿ ಈ ಜೆರಳೆಗಳು ಓಡಾಡುತ್ತವೋ ಅಂತಹ ಜಾಗಳಲ್ಲಿ ಸಕ್ಕರೆ, ಮೈದಾ, ಬೋರಿಕ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಚಿಕ್ಕ ಉಂಡೆಗಳನ್ನು ಮಾಡಿ ಅಲ್ಲಿ ಅಲ್ಲಿ ಇಡೀ ಇದರ ವಾಸನೆಯಿಂದ ಜಿರಳೆಗಳು ಹತ್ತಿರ ಬರುವುದಿಲ್ಲ ಇದನ್ನ ಒಮ್ಮೆ ಟ್ರೈ ಮಾಡಿ ನೋಡಿ.
ಇನ್ನು ಎರಡನೇ ಸುಲಭ ವಿಧಾನ ಸೌತೆಕಾಯಿ ಬಳಸಿ ಜಿರಳೆ ಹೋಗಲಾಡಿಸವುದು ಹೇಗೆ ಗೊತ್ತಾ ಸೌತೆಕಾಯಿಯನ್ನು ಸಿಪ್ಪೆ ತೆಗೆಯದೆ ಹಾಗೆ ಕತ್ತರಿಸಿ ಸಣ್ಣ ಸಣ್ಣ ರೌಂಡ್ ಆಗಿ ಕತ್ತರಿಸಿ ಮನೆಯ ಮೂಲೆ ಮೂಲೆಗಳಲ್ಲಿ ಇಡಿ ಹಾಗು ಯಾವ ಯಾವ ಕಡೆ ಈ ಜಿರಳೆ ಓಡಾಡುತ್ತವೋ ಆ ಕಡೆ ಇಡಿ ಮತ್ತು ಈ ಸೌತೆಕಾಯಿಗಳನ್ನು ವಾರದಲ್ಲಿ ಮೂರೂ ಅಥವಾ ಎರಡು ಬಾರಿ ಬಲಾಯಿಸಿ ಇಡುವುದು ಒಳ್ಳೆಯದು.
ಇನ್ನೊಂದು ಮೂರನೇ ವಿಧಾನ ಇದು ತುಂಬಾ ಸುಲಭ ಮತ್ತು ಸರಳ ವಿಧಾನ ಏನು ಅಂದರೆ ನಿಂಬೆ ಹಣ್ಣಿನ ರಸ ಮತ್ತು ಪುದಿನ ಎಣ್ಣೆಯನ್ನು ಎರಡು ಚನ್ನಾಗಿ ಮಿಶ್ರಣ ಮಾಡಿ ಒಂದು ಲೋಟ ನೀರು ಹಾಕಿ ಅದನ್ನು ಒಂದು ಬಾಟಲ್ ಅಥವಾ ಸ್ಪ್ರೇ ಬಾಟಲಿಗೆ ಹಾಕಿ ಎಲ್ಲ ಕಡೆ ಸಿಂಪಡಿಸಿ ಇದರಿಂದ ಸಹ ಜಿರಳೆಗಳು ದುರುವಾಗುತ್ತವೆ.
ಇನ್ನು ಕೊನೆಯದಾಗಿ ಮನೆಯಲ್ಲಿ ಇರುವ ಬಿರಿಯಾನಿ ಎಲೆಗಳನ್ನು ಪುಡಿ ಮಾಡಿ ಮನೆಯ್ಲಲಿ ಮೂಲೆ ಮೂಲೆಗಳಲ್ಲಿ ಹಾಕುವುದರಿಂದ ಇದರ ವಾಸನೆಗೆ ಜಿರಳೆಗಳು ಬರುವುದಿಲ್ಲ ಮತ್ತು ಕಾಫೀ ಪುಡಿಯನ್ನು ಮನೆಯಲ್ಲಿರುವ ಸಂದಿಗಳಲ್ಲಿ ಹಾಕಿ ನಂತರ ಮನೆ ಸ್ವಚ್ಛ ಮಾಡಿ ಹೀಗೆ ವಾರದಲ್ಲಿ ನಾಲ್ಕು ದಿನ ಮಾಡಿ ನಿಮ್ಮ ಮನೆಯಲ್ಲಿ ಯಾವುದೇ ತರಹದ ಜಿರಳೆಗಳು ಬರುವುದಿಲ್ಲ.