ಹೌದು ಬೇವು ಎಷ್ಟು ಕಹಿ ಅನ್ನೋದು ಎಲ್ಲರಿಗು ಗೊತ್ತಿರುವ ಆದರೆ ಇದು ಎಷ್ಟು ಕಹಿನೊ ಅಷ್ಟೇ ಆರೋಗ್ಯದ ಗುಣಗಳನ್ನು ಹೊಂದಿದೆ ಆಯುರ್ವೇದದಲ್ಲಿ ಇದರ ಉಲ್ಲೇಖವಿದೆ ಬೇವಿನ ಎಲೆ ಯಾವೆಲ್ಲ ರೋಗಗಳನ್ನು ವಾಸಿ ಮಾಡುತ್ತೆ ಅನ್ನೋದು ಈ ಲೇಖನದಲ್ಲಿ ಮೂರೂ ರೋಗಗಳಿಗೆ ಯಾವ ರೀತಿಯಾಗಿ ಬೇವು ರಾಮಬಾಣವಾಗಿದೆ ಅನ್ನೋದು ಇಲ್ಲಿದೆ ನೋಡಿ.
ನೀವು ಆಗಾಗ ಬೇವಿನ ಎಲೆಗಳನ್ನು ತಿನ್ನುವುದರಿಂದ ನಿಮ್ಮ ಕಣ್ಣಿನ ದೃಷ್ಟಿಗೆ ತುಂಬ ಒಳ್ಳೇದು ಮತ್ತು ಕಣ್ಣಿನಲ್ಲಿ ತುರಿಕೆ ಅಥವಾ ನೋವು ಏನಾದರು ಹಾಗು ಕಣ್ಣು ಕೆಂಪಾದರೆ ಬೇವಿನ ಎಲೆಗಳನ್ನು ನೀರಿನಲ್ಲಿ ಬೇಯಿಸಿ ತಣ್ಣಗಾದ ನಂತರ ಸಮಸ್ಯೆ ಇರುವ ಭಾಗದಲ್ಲಿ ಈ ನೀರಿನಂದ ತೊಳೆದುಕೊಂಡರೆ ನೋವು ಹಾಗು ಅಲರ್ಜಿ ಕಡಿಮೆಯಾಗುತ್ತದೆ. ಹಾಗೆ ಬೇವಿನ ಎಲೆಗಳನ್ನು ಆಗಾಗ ಅಗಿದು ತಿಂದರೆ ದೇಹದಲ್ಲಿ ಆಗುವ ಕೆಲವೊಂದು ಚರ್ಮ ರೋಗಗಳು ದುರುವಾಗುತ್ತವೆ.
ಇನ್ನು ಕೆಮ್ಮಿಗೆ ಸಹ ಇದು ಉತ್ತಮ ರಾಮಬಾಣ ಹೆಚ್ಚು ಕೆಮ್ಮು ಇದ್ದಾರೆ ಬೇವಿನ ತೊಗಟೆಯ ತಿರಳು ತೆಗೆದು ಜಜ್ಜಿ ಅದರ ಕಷಾಯವನ್ನು ಸೇವನೆ ಮಾಡುವುದರಿಂದ ಕೆಮ್ಮು ಬೇಗ ವಾಸಿಯಾಗುತ್ತದೆ. ಬೇವಿನ ಎಲೆ ತಿನ್ನುವುದರಿಂದ ನಿಮ್ಮ ಕೂದಲಿಗೆ ಉಪಕಾರಿ. ತಲೆ ಹೊಟ್ಟು ನಿವಾರಿಸಲು ಬೇವಿನ ಎಲೆ ತುಂಬಾ ಸಹಾಯ ಮಾಡುತ್ತದೆ. ಬಿಸಿನೀರಿನೊಂದಿಗೆ ಬೇವಿನ ಎಲೆಗಳನ್ನು ಹಾಕಿ ತಲೆ ಸ್ನಾನ ಮಾಡುವುದರಿಂದ ತಲೆ ಹೊಟ್ಟು, ಕೂದಲು ಉದುರುವಿಕೆಯನ್ನ ತಡೆಗಟ್ಟಬಹುದು.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.