ಬಿಳಿ ತೊನ್ನುರೋಗಕ್ಕೆ: ಬಲಿತ ಅರಿಶಿನ ಕೊಂಬು ಮತ್ತು ಬಲಿತಎಕ್ಕದ ಬೇರನ್ನು ತಣ್ಣೀರಿನಲ್ಲಿ ತೇದು ತೊನ್ನಿರುವ ಸ್ಥಳದಲ್ಲಿ ಹಚ್ಚುವುದು. ಶರೀರದ ಸ್ವಲ್ಪ ಭಾಗದಲ್ಲಿ ಪ್ರಥಮವಾಗಿ ಲೇಪಿಸುವುದು. ಗುಣಕಂಡ ಮೇಲೆ ಚಿಕಿತ್ಸೆಯನ್ನು ಮುಂದುವರಿಸುವುದು.
ಕಾಲಾರಾ ಬೇನೆಯಲ್ಲಿ: ಎಕ್ಕದ ಬೇರಿನತೊಗಟೆ ಮತ್ತುಮೆಣಸಿನ ಕಾಳು ಸಮತೂಕ ನುಣ್ಣಗೆ ಚೂರ್ಣಮಾಡಿ, ಹಸಿರು ಶುಂಠಿರಸದಲ್ಲಿ ಮರ್ದಿಸಿ ಕಡಲೆಗಾತ್ರ ಗುಳಿಗೆಯನ್ನು ಮಾಡಿ ನೆರಳಲ್ಲಿ ಒಣಗಿಸುವುದು.ಪ್ರತಿಎರಡು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು.
ಬಿಳಿ ತೊನ್ನು ಹೋಗಲಾಡಿಸಲು ಗೋರೆಂಟಿ: 10ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ, ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹೊರಗೆ ಲೇಪಿಸುವುದು, ಇದರ ಜೊತೆಗೆ ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ (ಒಂದು ಬಟ್ಟಲು) ಕದಡಿ ಸೇವಿಸುವುದು.
ಉದರ ಬೇನೆ, ಅಜೀರ್ಣದಲ್ಲಿ: ಇನ್ನೊ ಬಿರಿಯದಿರುವ 20 ಮೊಗ್ಗುಗಳನ್ನು ತಂದು ಶುಂಠಿ ,ಓಮದ ಕಾಳು ಮತ್ತುಕರಿಯ ಲವಣವನ್ನು ಸಮಪ್ರಮಾಣದಲ್ಲಿ ಸೇರಿಸಿ, ಶುದ್ಧ ನೀರಿನಲ್ಲಿಅರೆದುಕಡಲೆಗಾತ್ರ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ದಿವಸಕ್ಕೆ ಎರಡು ಸಾರಿಒಂದೊಂದು ಮಾತ್ರೆಯನ್ನು ಸೇವಿಸಿ ನೀರುಕುಡಿಯುವುದು.
ವಾಯು ನೋವುಗಳಿಗೆ: ಎಕ್ಕದಎಲೆಯರಸ 20 ಗ್ರಾಂ, ಬೊಂತೆ ಕಳ್ಳಿ ರಸ 20ಗ್ರಾಂ, ಲಕ್ಕಿ ಎಲೆ ರಸ, 20 ಗ್ರಾಂ, ಉಮ್ಮತ್ತಿ ಎಲೆ ರಸ 20 ಗ್ರಾಂ, ಹಸುವಿನ ಹಾಲು 60ಮಿ, ಲಿ. ಎಳ್ಳಣ್ಣೆ 120 ಗ್ರಾಂ ಸೇರಿಸಿ ಕಾಯಿಸುವಾಗ, ರಾಸ್ಮಿ, ವಿಳಂಗ, ದೇವದಾರು, ಗಜ್ಜುಗದ ತಿರುಳು ಪುಡಿಎರಡೆರಡುಟೀ ಚಮಚ ಹಾಕಿ ಇಳಿಸುವಾಗ 20 ಗ್ರಾಂಆರತಿಕರ್ಪೂರ ಹಾಕುವುದು. ತಣ್ಣಗಾದ ಮೇಲೆ ಕೀಲು, ಕಾಲು ನೋವುಗಳಿಗೆ ಹಚ್ಚುವುದು.