ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಸ್ವಂತ ಸೂರು ಒದಗಿಸುವ ನಿಟ್ಟಿನಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಪಿ.ಏಮ್ ಆವಾಸ್ ಯೋಜನೆಯನ್ನು ಜಾರಿಗೊಳಿಸಿದೆ. ಇದನ್ನು 2015 ರ ಜೂನ್ 25 ರಂದು ಜಾರಿಗೆ ತರಲಾಗಿದೆ. 2022 ರ ಅವಧಿಯಲ್ಲಿ ಈ ದೇಶದ ಪ್ರತಿಯೊಬ್ಬರಿಗೂ ಮನೆ ಕಲ್ಪಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರು ಕೋಟಿಗಳಷ್ಟು ಮನೆಗಳನ್ನು ನಿರ್ಮಾಣ ಮಾಡಿ ಸೂರು ಇಲ್ಲದವರಿಗೆ ಸೂರು ಒದಗಿಸುವ ಸಲುವಾಗಿ ಇಂತಹ ಒಂದು ಮಹತ್ವದ ಗುರಿಯನ್ನು ಇರಿಸಿಕೊಂಡು ಕೇಂದ್ರ ಸರ್ಕಾರ ಈ ಯೋಜನೆಯ ಮೂಲಕ ಕಾರ್ಯ ಮುಖವಾ ಗಿದೆ. ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಬಡವರು, ಕೆಳ ವರ್ಗದ ಜನರು, ಮಾಧ್ಯಮ ವರ್ಗದ ಜನರು, ಕಡಿಮೆ ಆದಾಯ ಹೊಂದಿರುವವರು ಮನೆಯನ್ನು ಪಡೆಯಬಹುದು. ಕೇಂದ್ರ ಸರ್ಕಾರದ ಸಹಯೋಗದ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳು ಬೆನೆ ಫಿಸಿಯರಿ ಲ್ಯಾಂಡ್, ಕನ್ ಸ್ಟ್ರಾಕ್ಷನ್, ಹೌಸಿಂಗ್ ಬ್ಯಾಂಕ್ ಅಥಾವ ಹುಡ್ಕೋ ಗಳು ಮನೆ ನಿರ್ಮಾಣದ ಕಾರ್ಯಕ್ಕೆ ನೆರವಾಗಲಿ ವೆ. ಒಟ್ಟಾರೆಯಾಗಿ 2022 ರ ವೇಳೆಗೆ ಭಾರತ ಸೂರು ರಹಿತ ಬಡ ಜನರಿಗೆ ಸೂರನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರ ಈ ಮಹತ್ವದ ಯೋಜನೆಯ ರೂಪು ರೇಷೆಗಳನ್ನು ಸಿದ್ಧ ಪಡಿಸಿದ್ದಾರೆ. ಈಗಾಗಲೇ ಈ ಯೋಜನೆ ಮೂಲಕ ಹಲವು ನಾಗರೀಕರು ಸ್ವಂತ ಸೂರು ಹೊಂದುವಂತೆ ಆಗಿದೆ ಎನ್ನುವುದು ಈ ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.

ಎರಡನೆಯದಾಗಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ. ಈ ದೇಶದ ಯುವ ಪೀಳಿಗೆಯನ್ನು ಉದ್ಯಮ ಶೀಲದತ್ತ ಆಕರ್ಷಿಸುವ ಹಿನ್ನೆಲೆಯಲ್ಲಿ ಮತ್ತು ಸಣ್ಣ ಹಾಗೂ ಅತಿ ಸಣ್ಣ ಉದ್ಯಮಗಳಿಗೆ ಹಣಕಾಸಿನ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ನು 2015 ರ ಏಪ್ರಿಲ್ 8 ರಂದು ಚಾಲನೆ ನೀಡಲಾಯಿತು. ಯಾವುದೇ ಭಾರತೀಯ ನಾಗರಿಕರಿಗೆ ಕೃಷಿಯೇತರ ಆದಾಯದ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಉತ್ಪಾದನೆ, ಪರಿಷ್ಕರಣೆ, ವ್ಯಾಪಾರ ಅಥವಾ ಸೇವಾ ವಲಯಗಳಲ್ಲಿ ತೊಡಗಲು ಹತ್ತು ಲಕ್ಷ ರೂಪಾಯಿ ಗಳ ವರೆಗೆ ಸಾಲ ಪಡೆಯಲು ಸಾಧ್ಯ ಇದೆ. ಬ್ಯಾಂಕ್ , ಫೈನಾನ್ಸಿಯಲ್ ಕಂಪೆನಿ, ಹಾಗೆ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪೆನಿ ಗಳನ್ನ ಸಂಪರ್ಕಿಸಿ ಮುದ್ರಾ ಯೋಜನೆ ಅಡಿ ಸಾಲ ಪಡೆಯುವುದು ಸಾಧ್ಯ ಇದೆ. ಮುದ್ರಾ ಯೋಜನೆ ಅಡಿಯಲ್ಲಿ 50,000 ವರೆಗೆ ಶಿಶು ಸಾಲ, 50,000 ದಿಂದ 5,00,000 ವರೆಗೆ ಕಿಶೋರ ಸಾಲ ಹಾಗೆ 5,00,000 ಧಿಂದಾ 10,00,000 ವರೆಗೆ ತರುಣ ಸಾಲ ಪಡೆಯುವ ಅವಕಾಶವನ್ನು ಸಹ ನೀಡಲಾಗಿದೆ.

ನಿರ್ಧಿಷ್ಟ ವ್ಯಾಪಾರ ಚಟುವಟಿಕೆಗಳ ಅಗತ್ಯತೆಯನ್ನು ಪೂರೈಸಲು ಈ ಯೋಜನೆ ಸಹಕಾರಿಯಾಗಿದೆ. ಸಾರಿಗೆ ವಲಯಕ್ಕೆ ಸಂಬಂಧಿಸಿದಂತೆ ಆಟೋರಿಕ್ಷಾ, ಸಣ್ಣ ಸರಕುಗಳಿಗೆ ವಾಹನ, ಕಾರು, ಟ್ಯಾಕ್ಸಿ ಇತ್ಯಾದಿ ವಾಹನಗಳನ್ನು ಖರೀದಿಸಲು ಅವಕಾಶ ಗಳನ್ನ ನೀಡಲಾಗಿದೆ. ಬ್ಯೂಟಿ ಪಾರ್ಲರ್, ಸಲೂನ್, ವ್ಯಾಯಾಮ ಶಾಲೆ, ಅಂಗಡಿಗಳು, ಟೈಲರಿಂಗ್, ಡ್ರೈ ಕ್ಲೀನಿ ಕ್, ಸಣ್ಣ ಪುಟ್ಟ ರೆಪೇರಿ, ಡಿ.ಟಿ.ಪೀ ಮತ್ತು ಜೆರಾಕ್ಸ್ ಶಾಪ್, ಔಷಧಿ ಅಂಗಡಿಗಳು ಹೀಗೆ ಹಲವು ಉದ್ಯಮಗಳಿಗೆ ಮುದ್ರಾ ಯೋಜನೆಯಲ್ಲಿ ಸಾಲ ಪಡೆಯಲು ಅವಕಾಶ ಇದೆ. ಹಪ್ಪಳ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ, ಜಾಮ್ ತಯಾರಿಕೆ, ಗ್ರಾಮೀಣ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಸಂರಕ್ಷಣೆ, ಸಣ್ಣ ಸೇವೆ ಹಾಗೆ ಆಹಾರ ಮಳಿಗೆಗಳು ಮತ್ತು ಅಡುಗೆ ಮತ್ತು ಕ್ಯಾಂಟೀನ್, ಐಸ್ ತಯಾರಿಕೆ ಘಟಕಗಳು, ಐಸ್ ಕ್ರೀಮ್ ಮಾಡುವ ಘಟಕಗಳು, ಬಿಸ್ಕೆಟ್ ಹಾಗೆ ಬ್ರೆಡ್ ಮತ್ತು ಬನ್ ತಯಾರಿಕೆ ಹೀಗೆ ಇತ್ಯಾದಿಗಳಿಗೆ ಬೆಂಬಲವನ್ನು ಒದಗಿಸುತ್ತದೆ. ಕೈ ಮಗ್ಗ , ಸಾಂಪ್ರದಾಯಿಕ ಕಸೂತಿ ಮತ್ತು ಕೈ ಕೆಲಸ, ಸಾಂಪ್ರದಾಯಿಕ ಬಣ್ಣ ಮತ್ತು ಮುದ್ರಣ, ಉಡುಪು ವಿನ್ಯಾಸ, ಹೊಲಿಗೆ ಮತ್ತು ಜವಳಿ ಉಡುಪು ಇತ್ಯಾದಿಗಳ ಆರಂಭಕ್ಕೂ ಈ ಯೋಜನೆ ಮೂಲಕ ಸಾಲವನ್ನು ಪಡೆಯಬಹುದು.

Leave a Reply

Your email address will not be published. Required fields are marked *