ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ತರಕಾರಿ ಎಂದರೆ ಅದು ಕೇಸುವಿನ ಗೆದ್ದೆ. ದಕ್ಷಿಣ ಭಾರತ ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಉತ್ತರಕಾರಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ ಅನೇಕ ಪೋಷಕಾಂಶ ನಾರಿನ ಅಂಶಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಈ ಕೆಸುವಿನ ಗಡ್ಡಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಕೇಸುವಿನ ಗಡ್ಡೆಯಿಂದ ಆರೋಗ್ಯಕ್ಕೆ ಎನಿಲ್ಲ ಲಾಭದನ್ನು ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಕೆಸುವಿನ ಗಡ್ಡೆಯ ಬಳಕೆ ಮಧುಮೇಹಿಗಳಿಗೆ ಬಹಳ ಒಳ್ಳೆಯದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.
ಕೆಸುವಿನ ಗಡ್ಡೆಯನ್ನು ಆಹಾರದ ಫೈಬರ್ ಕಾರ್ಬೋಹೈಡ್ರೇಟ್ ಗಳ ಜೀರ್ಣಕ್ರಿಯೆ ಮತ್ತು ಗ್ಲುಕೋಸ್ ಅನ್ನು ಹೀರಿಕೊಳ್ಳುವಿಕೆಯನ್ನು ನಿಧಾನ ಗೊಳಿಸಲು ಸಹಾಯಮಾಡುತ್ತದೆ. ಕೆಸುವಿನ ಗೆಡ್ಡೆಯಲ್ಲಿ ಪಿಷ್ಠ ಅಂಶ ಅಧಿಕವಿದ್ದರೂ ಇದರಲ್ಲಿ ಎರಡು ಬಗೆಯ ಕಾರ್ಬೋಹೈಡ್ರೇಟ್ಸ್ ಇದ್ದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ನಾರಿನಂಶದ ಕಾರ್ಬೋಹೈಡ್ರೇಟ್ಸ್ ಜೀರ್ಣವಾಗುವುದಿಲ್ಲ, ಆದ್ದರಿಂದಾಗಿ ದೇಹ ಇದನ್ನು ಹೀರಿಕೊಳ್ಳುವುದಿಲ್ಲ,
ಹಾಗಾಗಿ ರಕ್ತದಲ್ಲಿನ ಸಕ್ಕರೆಯಂಶದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ.ಇದರಲ್ಲಿರುವ ಪಿಷ್ಠ ಅಂಶ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೆಸುವಿನ ಗೆಡ್ಡೆ ತಿಂದಾಗ ನಮ್ಮ ದೇಹದವು ಅದರಲ್ಲಿರುವ ನಾರಿನಂಶವನ್ನು ಜೀರ್ಣಿಸಿಕೊಳ್ಳುವುದಿಲ್ಲ, ಶದ್ದರಿಂದ ಅದು ನಮ್ಮ ಜಠರದಲ್ಲಿ ಉಳಿದು ನಂತರ ಕರುಳನ್ನು ತಲುಪಿ ಆರೋಗ್ಯಕರ ಬ್ಯಾಕ್ಟಿರಿಯಾ ಉತ್ಪತ್ತಿಗೆ ಸಹಕಾರಿಯಾಗಿದೆ.
ಇದು ಪ್ರತಿಯಾಗಿ ದೇಹವು ಇನ್ಸುಲಿನ್ ಬಿಡುಗಡೆಯನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಇದರಿಂದಾಗಿ ಉತ್ತಮ ಬ್ಲೆಸ್ಸಿನಿಕ್ ನಿಯಂತ್ರಣವನ್ನು ಒದಗಿಸುತ್ತದೆ. ಹೀಗಾಗಿ ಮಧುಮೇಹಿಗಳು ಕೆಸುವಿನ ಗಡ್ಡೆ ಸೇವನೆ ಮಾಡಬಹುದು. ಇನ್ನು ಕೆಸುವಿನ ಗಡ್ಡೆಯೂ ಪೊಟ್ಯಾಶಿಯಂ ಅಂಶವನ್ನು ಹೊಂದಿರುತ್ತದೆ ಇದು ಸಾಮಾನ್ಯ ಜೀವಕೋಶದ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ದೇಹದ ಅಂಗಾಂಶಗಳಲ್ಲಿರುವ ಅಗತ್ಯವಾದ ಖನಿಜಾಂಶವಾಗಿದೆ. ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿದ್ದರೆ ಕಡಿಮೆ ಮಾಡುತ್ತದೆ.
ಅಲ್ಲದೆ ರಕ್ತನಾಳಗಳು ಮತ್ತು ಅಪಧಮನಿಗಳನ್ನು ವಿಶ್ರಾಂತಿ ಮಾಡುವ ಮೂಲಕ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ನಾರಿನಂಶ ಅಧಿಕವಿರುವ ತರಕಾರಿಗಳು ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಯಾರು ತೂಕ ಕಡಿಮೆಮಾಡಬೇಕೆಂದು ಬಯಸುತ್ತಾರೋ ಅವರು ತಮ್ಮ ಆಹಾರಕ್ರಮದಲ್ಲಿ ಅತ್ಯಧಿಕ ನಾರಿನಂಶವಿರುವ ಆಹಾರ ಸೇರಿಸಬೇಕು. ನಾರಿನಂಶವಿರುವ ಆಹಾರ ನಿಧಾನಕ್ಕೆ ಜೀರ್ಣವಾಗುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ, ಇದರಿಂದ ದಿನದಲ್ಲಿ ತೆಗೆದುಕೊಳ್ಳುವ ಕ್ಯಾಲೋರಿ ಪ್ರಮಾಣವೂ ಕಡಿಮೆಯಾಗುತ್ತದೆ ಹೀಗಾಗಿ ತೂಕ ಇಳಿಕೆಗೆ ಸಹಕಾರಿಯಾಗಿದೆ.