ಸಕ್ಕರೆ ಕಾಯಿಲೆ ಇರುವವರ ಆರೋಗ್ಯ ಇತರರಿಗೆ ಹೋಲಿಸಿದರೆ ಅಷ್ಟೇನು ಚೆನ್ನಾಗಿಲ್ಲ ಎನಿಸುತ್ತದೆ. ಏಕೆಂದರೆ ಅವರ ದೇಹದಲ್ಲಿ ಕ್ರಮೇಣವಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ಬೇರೆ ಬೇರೆ ಕಾಯಿಲೆಗಳಿಗೆ ಆಹಾರ ಕೊಟ್ಟಂತೆ ಆಗುತ್ತದೆ. ಜೊತೆಗೆ ಮಧುಮೇಹ ಕೂಡ ಒಳಗಿನ ಅಂಗಾಂಗಗಳಿಗೆ ಸಹಕಾರಿಯಾಗಿರುವುದಿಲ್ಲ ಹೃದಯ ಕಿಡ್ನಿ ಹೀಗೆ ಪ್ರಮುಖವಾದ ಅಂಗಾಂಗಗಳು ತನ ಹಿಡಿತದಲ್ಲಿ ಇಟ್ಟುಕೊಂಡು ಆಟವಾಡಿಸುತ್ತದೆ.

ನೈಸರ್ಗಿಕವಾಗಿ ಕಂಟ್ರೋಲ್ ಮಾಡಿಕೊಳ್ಳಬೇಕು ಎಂದರೆ ಕೆಲವೊಂದು ಎಲೆಗಳನ್ನು ಜಗಿದು ತಿನ್ನುವುದರಿಂದ ಈ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ಬಿಲ್ವಪತ್ರೆಗಳಲ್ಲಿ ಮಧುಮೇಹ ವಿರೋಧಿ ಲಕ್ಷಣಗಳು ಕಂಡುಬರುತ್ತವೆ ಎಂದು ಸಾಬೀತು ಆಗಿದೆ. ಇಂದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವಲ್ಲಿ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚು ಮಾಡುವಲ್ಲಿ ಬಿಲ್ವಪತ್ರೆ ಹೈ ಪೋಕ್ಲೆಮಿಕಿಸ್ ಆಗಿದ್ದು ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಲಕ್ಷಣಗಳನ್ನು ಹೇರಳವಾಗಿ ಹೊಂದಿದೆ. ಇದು ಸಕ್ಕರೆಯ ಮಟ್ಟವನ್ನು ಸಾಮಾನ್ಯವಾಗಿರಿಸುತ್ತದೆ. ಬಿಲ್ವದ ಎಲೆಗಳು ಒಬ್ಬರ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ನಮಗೆಲ್ಲ ಗೊತ್ತಿರುವ ಹಾಗೆ ಯಾವ ಆಹಾರ ಪದಾರ್ಥಗಳು ಅಥವಾ ಗಿಡಮೂಲಿಕೆಗಳು ಐಕ್ಳು ಲಸಿಮಿಕ್ ಆಗುತ್ತೆ ಅಥವಾ ಅವುಗಳಲ್ಲಿ ಕಡಿಮೆ ಸೂಚ್ಯಂಕಗಳು ಇರುತ್ತವೆ ಅಂತಹವು ಸಕ್ಕರೆ ಕಾಯಿಲೆಯ ನಿಯಂತ್ರಣದಲ್ಲಿ ಕೆಲಸ ಮಾಡುತ್ತವೆ. ಮುಖ್ಯವಾಗಿ ಪ್ಯಾಂಕ್ರಿಯಾಸ್ ಗ್ರಂಥಿಗಳಲ್ಲಿ ಗುಣಪಡಿಸಿ ಇಂಥ್ರೂಲಿಯನ್ ಉತ್ಪತ್ತಿಯನ್ನು ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ.ಚರ್ಮದ ದುರ್ಗಂಧವನ್ನು ಹೋಗಲಾಡಿಸಲು ಬಿಲ್ವಪತ್ರೆ ಬಳಕೆಯಾಗುತ್ತದೆ.

ಕೆಲವು ಜನರು ತಮ್ಮ ದುರ್ಗಂಧವನ್ನು ಹೋಗಿಸಲು ಹಣವನ್ನು ಕೊಟ್ಟು ಸುಗಂಧ ದ್ರವ್ಯವನ್ನು ಖರೀದಿ ಮಾಡುತ್ತಾರೆ ಆದರೆ ತಾಜಾ ಬಿಲ್ವಪತ್ರೆಯನ್ನು ತಂದು ಅದರ ರಸವನ್ನು ಮೈಗೆ ಲೇಪಿಸಿಕೊಂಡು ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮೈಯಲ್ಲಿನ ದುರ್ಗಂಧ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಕೆಲವು ಜನರಿಗೆ ಅತಿಯಾಗಿ ಹೊಟ್ಟೆ ಹಸಿವು ಆಗುವುದಿಲ್ಲ ಬೆಳಗ್ಗೆ ಏನು ತಿನ್ನುತ್ತಾರೋ ಅದರ ಮೇಲೆ ತುಂಬಾ ದಿನನಿತ್ಯ ಕೆಲಸವನ್ನು ಸಾಗಿಸುತ್ತಾರೆ.

ಯಾರಿಗೆ ಹಸಿವಾಗುವುದಿಲ್ಲವೋ ಅಂತಹವರು ಬಿಲ್ವದ ಎಲೆಗಳನ್ನು ಒಣಗಿಸಿ 1 ಚಮಚ ಪುಡಿಯನ್ನು ಒಂದು ಲೋಟ ಮಜ್ಜಿಗೆಗೆ ಬೆರೆಸಿ ಪ್ರತಿದಿನ 3 ದಿನಗಳವರೆಗೆ ಸೇವಿಸಬೇಕು. ಹೀಗೆ ಮಾಡುವುದರಿಂದ ಹಸಿವು ಹೆಚ್ಚಾಗುತ್ತದೆ. ಅತಿಯಾಗಿ ಹೊರಗಡೆ ಆಹಾರವನ್ನು ತಿನ್ನುವುದರಿಂದ ನಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಮಾಮೂಲಿ ಇದು ಗ್ಯಾಸ್ಟ್ರಿಕ್ ವಿರುದ್ಧ ಹೋರಾಡುತ್ತದೆ.

ಬಿಲ್ವಪತ್ರೆಯಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್ ಇದೆ. ನಮ್ಮ ದೇಹದ ಅನೇಕ ಕಾರ್ಯಗಳ ನಿರ್ವಹಣೆಗೆ ಇದು ಅವಶ್ಯಕವಾಗಿದೆ. ಇದು ದೀರ್ಘಕಾಲದ ಅತಿಸಾರ ಮತ್ತು ಅಲ್ಸರೇಟಿವ್ ಕೊಲೈಟಿಸ್‌ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಬಿಲ್ವದ ಹಣ್ಣನ್ನು ಒಣಗಿಸಿ ಸಾಮಾನ್ಯವಾಗಿ ಪುಡಿಯಾಗಿ ಮಾಡಲಾಗುದೆ ಮತ್ತು ಇದನ್ನು ತೀವ್ರ ಭೇದಿಗೆ ಬಳಸಬಹುದು.

Leave a Reply

Your email address will not be published. Required fields are marked *