ಸ್ನೇಹಿತರೆ ತಾಯಿಗಿಂತ ಮಿಗಿಲಾದದ್ದು ದೇವರು ಇಲ್ಲ ಎಂದು ಹೇಳುತ್ತಾರೆ. ಮಕ್ಕಳಿಗೋಸ್ಕರ ತಾಯಂದಿರು ತಮ್ಮ ಪ್ರಾಣವನ್ನು ಬೇಕಾದರೂ ಕೊಡುತ್ತಾರೆ. ಇವತ್ತಿನ ಮಾಹಿತಿಯಲ್ಲಿ ಒಬ್ಬರು ಪೊಲೀಸ್ ತಾಯಿ ತನ್ನ ಮಗುವಿಗಾಗಿ ಮಾಡಿದ ತ್ಯಾಗದ ಬಗ್ಗೆ ನಿಮಗೆಲ್ಲ ತಿಳಿಸಿಕೊಡುತ್ತೇನೆ ಬನ್ನಿ. ಈ ತಾಯಿ ಮಾಡಿದ ಕೆಲಸಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯ ಸುರಿಮಳೆ ಆಗುತ್ತಿದೆ. ಚಂಡಿಗರ್ ನಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕೆಲಸ ಮಾಡುತ್ತಿರುವ ಈ ಮಹಿಳೆ ವಿಡಿಯೋ ತುಂಬಾ ವೈರಲಾಗಿದೆ. ಈ ತಾಯಿ ತನ್ನ ಮಗುವನ್ನು ಎತ್ತಿಕೊಂಡು ಮಾಡುತ್ತಿದ್ದ ಟ್ರಾಫಿಕ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಒಬ್ಬ ಮಹಿಳಾ ಕಾನ್ಸ್ಟೇಬಲ್ ತನ್ನ 5 ತಿಂಗಳ ಮಗು ಅನ್ನೋ ಎತ್ತಿಕೊಂಡು ಡ್ಯೂಟಿ ಮಾಡುತ್ತಿದ್ದರು. ಈ ಪೊಲೀಸ್ ತಾಯಿ ತನ್ನ ಮಗುವನ್ನು ಎತ್ತಿಕೊಂಡು ಡ್ಯೂಟಿ ಮಾಡುತ್ತಿರುವುದನ್ನು ಯಾರೋ ಅಪರಿಚಿತರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಪಬ್ಲಿಕ್ ಜನರು ಈ ಕಾನ್ಸ್ಟೇಬಲ್ ಹತ್ತಿರ ಬಂದು ಮೇಡಂ ನೀವು ಮಗುವನ್ನು ಮನೆಯಲ್ಲಿ ಬಿಟ್ಟು ಬರದೇ ಎತ್ತಿಕೊಂಡು ಯಾಕೆ ಡ್ಯೂಟಿಗೆ ಬಂದಿದ್ದೀರಾ ಎಂದು ಕೇಳಿದ್ದಾರೆ . ಪಬ್ಲಿಕ್ ಕೇಳಿದ ಪ್ರಶ್ನೆಗೆ ಕಾನ್ಸ್ಟೇಬಲ್ ಪ್ರಿಯಾಂಕ ಈ ರೀತಿ ಉತ್ತರ ಕೊಟ್ಟಿದ್ದಾರೆ. ನನ್ನ ಮನೆಯಲ್ಲಿ ನಾನು ಮತ್ತು ಗಂಡ ನನ್ನ ಮಗು ಮೂರು ಜನ ಮಾತ್ರ ಇದ್ದೇವೆ ನನಗೆ ಮಗು ಆದಾಗ ನನ್ನ ತಾಯಿ ಕೆಲವು ತಿಂಗಳು ಕಾಲ ಮನೆಯಲ್ಲಿ ಇದ್ದೆ ಈಗ ಡ್ಯೂಟಿಗೆ ಬಂದಿದ್ದೇನೆ. ನನ್ನ ಗಂಡ ಕೂಡ ಡ್ಯೂಟಿಗೆ ಹೋಗಿದ್ದಾರೆ. ಮಗು ನೋಡಿಕೊಡಲು ಯಾರು ಇಲ್ಲ ಹೀಗಾಗಿ ಮಗುವನ್ನು ಎತ್ತಿಕೊಂಡು ಬಂದು ಡ್ಯೂಟಿ ಮಾಡುತ್ತಿದ್ದೇನೆ. ಎಂದು ಕಾನ್ಸ್ಟೇಬಲ್ ಪ್ರಿಯಾಂಕ ಹೇಳಿದ ರು. ಪ್ರಿಯಾಂಕ ಕಳೆದ ಆರು ತಿಂಗಳಿಂದ ಪ್ರೆಗ್ನೆನ್ಸಿ ಲೀವ್ ಮೇಲೆ ಹೋಗಿದ್ದರು ಮೂರು ದಿನಗಳ ಹಿಂದಷ್ಟೇ ಪ್ರಿಯಾಂಕ ಡ್ಯೂಟಿಗೆ ಜಾಯಿನ್ ಆಗಿದ್ದರು. ಮಗುವನ್ನು ಎತ್ತಿಕೊಂಡು ಪ್ರಿಯಾಂಕಾ ಟ್ರಾಫಿಕ್ ಕಂಟ್ರೋಲ್ ಮಾಡುವ ಡ್ಯೂಟಿ ಮಾಡುತ್ತಿದ್ದಾರೆ. ಆದರೆ ಯಾವಾಗ ಪ್ರಿಯಾಂಕ ಅವರ ಈ ವಿಡಿಯೋ ವೈರಲ್ ಆಯ್ತು ಪ್ರಿಯಾಂಕ ಅವರನ್ನು ಈಗ ಟ್ರಾಫಿಕ್ ಕಂಟ್ರೋಲ್ ಡ್ಯೂಟಿ ಬದಲಿಗೆ ಟ್ರಾಫಿಕ್ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಯೂಟರ್ ಆಪರೇಟ್ ಮಾಡುವ ಡ್ಯೂಟಿಗೆ ವರ್ಗಾಯಿಸಿದ್ದಾರೆ.