ನಮಸ್ತೆ ನಮ್ಮ ಆತ್ಮೀಯ ಓದುಗರೇ, ಎಲೆಕೋಸು ಅಥವಾ ಕ್ಯಾಬೇಜ್ ಒಂದು ಜನಪ್ರಿಯ ತರಕಾರಿ , ಈ ತರಕಾರಿ ಇಂದ ಪಲ್ಯ, ಸಾಂಬಾರ್, ವಿಧ ವಿಧವಾದ ಸ್ನಾಕ್ಸ್, ಗೋಬಿ ಮಂಚೂರಿ, ಬರ್ಗರ್ ನಂತಹ ವಿವಿಧ ಮತ್ತು ರುಚಿಯಾದ ತಿಂಡಿಗಳನ್ನು ಮಾಡಲು ಬಳಸುತ್ತಾರೆ. ಈ ತರಕಾರಿಯೂ ವರ್ಷದ ಎಲ್ಲಾ ಕಾಲದಲ್ಲೂ ಸಿಗುತ್ತದೆ. ಹೆಸರಿಗೆ ತಕ್ಕಂತೆ ಕ್ಯಾಬೇಜ್ ಎಲೆಗಳು ಪದರ ಪದರವಾಗಿ ಬಿಚ್ಚಿಕೊಳ್ಳುತ್ತದೆ. ಈ ತರಕಾರಿಯೂ ಬರಿ ಆರೋಗ್ಯದ ದೃಷ್ಟಿಯಿಂದ ಅಲ್ಲದೇ ಮುಖದ ಸೌಂದರ್ಯಕ್ಕೋ ಅತಿ ಉಪಯಕ್ತವಾದ ತರಕಾರಿ ಆಗಿದೆ. ಇಂದಿನ ಈ ಲೇಖನದಲ್ಲಿ ನಿಯಮಿತವಾಗಿ ಕ್ಯಾಬೇಜ್ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗಗಳಿವೆ ಎಂದು ತಿಳಿಸಿ ಕೊಡಲಿದ್ದೇವೆ. ನಮ್ಮ ದೇಹಕ್ಕೆ ವಿಟಮಿನ್ಸ್ ಮತ್ತು ಮಿನರಲ್ಸ್ ಗಾಳನ್ನೂ ಒದಗಿಸುವಲ್ಲಿ ಕ್ಯಾಬೇಜ್ ಒಂದು ಉತ್ತಮ ಪಾತ್ರ ವಹಿಸುತ್ತದೆ. ಇದರಲ್ಲಿ ನಾರಿನಂಶ, ಕಾರ್ಬೋಹೈಡ್ರೇಟ್ಸ್, ಮಗ್ನೆಸಿಯಂ,ಸೋಡಿಯಂ, ಪೊಟ್ಯಾಸಿಯಂ,ಕಬ್ಬಿಣ ಇನ್ನೂ ಹಲವಾರು ಪೋಷಕಾಂಶಗಳನ್ನು ಹೇರಳವಾಗಿ ಹೊಂದಿದೆ. ಜೀವಕೋಶ ಮತ್ತು ಶರೀರದಲ್ಲಿರುವ ದ್ರವಗಳು ಬಹು ಮುಖ್ಯ ಪಾತ್ರ ವಹಿಸಿದೆ. ಇದರಲ್ಲಿರುವ ಪೊಟ್ಯಾಸಿಯಂ ದೇಹದ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಎಲೇಕೊಸಲ್ಲಿ ಬೀಟಾ ಕೆರೋಟಿನ್ ಅಂಶಗಳಿದ್ದು ಕಣ್ಣಿನ ರಕ್ಷಣೆಗೆ ಉಪಯುಕ್ತವಾಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ಪೊರೆ ಮೂಡುವುದು ಕಡಿಮೆ ಆಗುತ್ತದೆ ಇನ್ನೂ ಮಲಬದ್ದತೆ ಸಮಸ್ಯೆ ಇದ್ದವರಿಗೂ ಇದು ತುಂಬಾನೇ ಒಳ್ಳೆಯದು.
ಇದರಲ್ಲಿ ಹೇರಳವಾದ ನಾರಿನಂಶ ಅಧಿಕವಿರುವುದರಿಂದ ದೇಹದಲ್ಲಿನ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಮೊದಲೇ ಹೇಳಿದಂತೆ ಕಬ್ಬಿಣ ಅಂಶ ಇರುವುದರಿಂದ ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಮೂಳೆಗಳು ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ನರಗಳ ಸಮಸ್ಯೆ ಇದ್ದರೆ ಎಲೆಕೋಸು ಒಳ್ಳೆಯ ಪರಿಹಾರ. ಇದನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗತ್ತದೆ. ಎಲೆಕೋಸಿನ ಲ್ಲಿ ವಿಟಮಿನ್ ಸಿ ಹೆಚ್ಚಿದ್ದು ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಇದರಲ್ಲಿ ವಿಟಮಿನ್ ಕೆ ಇದ್ದು , ಇದು ನಮ್ಮ ಮರೆವಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದರಲ್ಲಿರುವ ಉತ್ತಮ ಪೌಷ್ಟಿಕಾಂಶಗಳು ಕೂದಲ ಸಮಸ್ಯೆಗೆ ಪರಿಹಾರ ನೀಡಿ, ಕೂದಲಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗೂ ಪರಿಹಾರ ನೀಡುತ್ತದೆ. ಕೂದಲು ಉದ್ದವಾಗಿ ಮತ್ತು ದಟ್ಟವಾಗಿ ಬೆಳೆಯಲು ಸಹಕರಿಸುತ್ತದೆ. ಒಂದು ಕಪ್ ಕ್ಯಾಬೇಜ್ ಲ್ಲೀ ಕೇವಲ 33 ಕ್ಯಾಲೋರಿ ಇರುವುದುದರಿಂದ ಇದು ತೂಕ ಇಳಿಸಲು ತುಂಬಾ ಸಹಕಾರಿ. ಇದಲ್ಲದೇ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ತ್ವಚೆಯನ್ನು ಫ್ರೀ ರಾಡಿಕಲ್ಸ್ ಗಳಿಂದ ರಕ್ಷಿಸಿ ಹೆಚ್ಚು ವಯಸ್ಸಾದಂತೆ ಕಾಣದಂತೆ ನೋಡಿಕೊಳ್ಳುತ್ತದೆ. ನಿಮಗೇ ಗೊತ್ತಿರುವ ಪ್ರಕಾರ ದೇಹಕ್ಕೆ ಬೇಕಾದ ಪೋಷಾಂಶಗಳು ಮತ್ತು ವಿಟಮಿನ್ ಗಳು ದೊರೆತರೆ ಮಾತ್ರ ನಾವು ಆರೋಗ್ಯವಾಗಿರಲು ಆರೋಗ್ಯವಾಗಿ ಕಾಣಲು ಸಾಧ್ಯ.
ಕೆಲವರಿಗೆ ಈ ತರಕಾರಿ ವಾಸನೆ ಎಂದರೆ ಆಗುವುದಿಲ್ಲ ಹಾಗಾಗಿ ಎಲೆಕೋಸು ಎಂದರೆ ಮೂಗು ಮುರಿಯುತ್ತಾರೆ ಆದರೆ ನಾವು ಆರೋಗ್ಯವಾಗಿ ಇರಬೇಕೆಂದರೆ ಎಲ್ಲಾ ವಿಟಮಿನ್ಸ್ ದೊರೆಯಬೇಕು ಅಂದ್ರೆ ನಾವು ಕೆಲವೊಮ್ಮೆ ಇಂತಹ ತರಕಾರಿಗಳನ್ನು ಸೇವಿಸಲೇಬೇಕು. ಅಂದ ಹಾಗೆ ಇನ್ನೊಂದು ಮುಖ್ಯ ವಿಚಾರ ಏನೆಂದರೆ ಈ ಕ್ಯಾಬೇಜ್ ಅಲ್ಲಿ ಆಂಟಿ ತೆಲಕ್ಸಿನ್ ಎಂಬ ಪೋಷಕಾಂಶ ಇದ್ದು ಥೈರಾಯ್ಡ್ ಮತ್ತು ಹೈಪೋಥೈರಾಯ್ಡ್ ಇದ್ದವರು ಇದನ್ನು ಸೇವನೆ ಮಾಡಬಾರದು. ಹಾಗೆಯೇ ಎಲೇಕೊಸನ್ನು ಬಳಸುವ ಮುನ್ನ ಅದನ್ನು ಚೆನ್ನಾಗಿ ಉಪ್ಪು ನೀರಿನಲ್ಲಿ ತೊಳೆಯಬೇಕು. ಇಲ್ಲವೇ ನಿಮ್ಮ ಮನೆಯಲ್ಲಿ ವಿನೆಗರ್ ಇದ್ದರೆ ಅದರಲ್ಲಿ ಚೆನ್ನಾಗಿ ಕಿವುಚಿ ತೊಳೆದು ಕೆಲವು ನಿಮಿಷಗಳ ಕಾಲ ಅದ್ರಲ್ಲೆ ಬಿಟ್ಟು ನಂತರ ಬಳಕೆ ಮಾಡುವುದು ಒಳಿತು. ನೊಡಿದ್ರಲ್ಲ ಎಲೆಕೋಸಿನ ಬಳಕೆಯಿಂದ ಏನೆಲ್ಲಾ ಆರೋಗ್ಯಕರ ಗುಣಗಳು ಸಿಗುತ್ತವೆ ಎಂದು. ಈ ಮಾಹಿತಿ ಇಷ್ಟವಾದರೆ ನೀವು ನಿಮ್ಮ ಮನೆಯಲ್ಲಿ ಈ ತರಕಾರಿಯನ್ನು ಬಳಸಿ ಅದರ ಉಪಯೋಗಗಳನ್ನು ಪಡೆಯಿರಿ. ಶುಭದಿನ.