ನಮಸ್ತೆ ಪ್ರಿಯ ಓದುಗರೇ, ಪ್ರಕೃತಿ ಕಾಲಗಳಿಗೆ ತಕ್ಕಂತೆ ಬದಲಾಗುತ್ತದೆ ಇದು ಸೃಷ್ಟಿಯ ನಿಯಮ ಕೂಡ ಆಗಿದೆ. ಒಂದೊಂದು ಕಾಲದಲ್ಲಿ ಕೂಡ ಹವಾಮಾನ ವಾತಾವರಣ ವಾಯುಗುಣ ತುಂಬಾನೇ ವಿಚಿತ್ರವಾಗಿ ಇರುತ್ತದೆ. ಅದರಲ್ಲಿ ಹೇಳಬೇಕಾದರೆ ಚಳಿಗಾಲ ಬಂದ್ರೆ ಅಂತೂ ಹೇಳತೀರದು. ಈ ಚಳಿಗಾಲದಲ್ಲಿ ಜನರು ಹೆಚ್ಚಾಗಿ ಅಸ್ತವ್ಯಸ್ತ ಗೊಳ್ಳುತ್ತಾರೆ. ಈ ಚಳಿಗಾಲದಲ್ಲಿ ಬರುವ ರೋಗ ರೂಜಿನಗಳಲ್ಲಿ ಶೀತ ನೆಗಡಿ ಕೆಮ್ಮು ಗಂಟಲು ನೋವು ಅಂತ ಬರುತ್ತಾನೆ ಇರುತ್ತದೆ.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಗಂಟಲಿನ ನೋವನ್ನು ಹೋಗಲಾಡಿಸಲು ನಿಮಗೆ ಸುಲಭವಾದ ಮನೆಮದ್ದು ತಿಳಿಸಿ ಕೊಡುತ್ತೇವೆ. ನಮ್ಮ ದೇಶದಲ್ಲಿ ಎಲ್ಲ ಬಗೆಯ ರೋಗಗಳಿಗೆ ಎಲ್ಲ ಥರದ ಔಷಧವನ್ನು ಕಂಡು ಹಿಡಿದಿದ್ದಾರೆ. ಆದರೆ ಈ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ರೋಗವು ಪೂರ್ತಿಯಾಗಿ ಕಡಿಮೆ ಆಗದೇ ಇರುವುದರ ಜೊತೆಗೆ ಇದರ ಅಡ್ಡ ಪರಿಣಾಮಗಳೂ ಬೀರುತ್ತವೆ. ಜೊತೆಗೆ ಮಾತ್ರೆಗಳು ತಿನ್ನಲು ಕೆಲವರು ಮುಖವನ್ನು ಸಿಂಡರಿಸಿ ಕೊಳ್ಳುತ್ತಾರೆ.
ಮುಖ ಮೂಗು ಕಿವುಚಾಡುತ್ತಾರೆ. ಅವರಿಗೆ ಮಾತ್ರೆಗಳನ್ನು ನುಂಗುವುದು ಅಂದ್ರೆ ಗಂಟಲಿನಲ್ಲಿ ಕಡಲೇ ಕಾಳು ಇಟ್ಟ ಹಾಗೆ ಆಗುತ್ತದೆ ಈಕಡೆ ಉಗುಳಲು ಸಾಧ್ಯವಿಲ್ಲ ತಿನ್ನಲು ಕೂಡ ಆಗುವುದಿಲ್ಲ. ಅದರಲ್ಲೂ ಚಿಕ್ಕ ಮಕ್ಕಳಿಗೆ ಮಾತ್ರೆಗಳನ್ನು ತಿನ್ನಿಸುವುದು ಒಂದು ದೊಡ್ಡ ಹರಸಾಹಸ ಮಾಡಿದ ಹಾಗೆ ಮಿತ್ರರೇ. ಹಾಗಾದ್ರೆ ಈ ಗಂಟಲು ನೋವಿಗೆ ಚಿಕ್ಕದಾದ ಮನೆಮದ್ದು ಕಂಡುಕೊಳ್ಳುವುದು ಉತ್ತಮ ಅಲ್ವಾ ಹಾಗಿದ್ದರೆ ತಡ ಏಕೆ ಶುರು ಮಾಡೋಣ ಬನ್ನಿ.
ಈ ಗಂಟಲು ನೋವನ್ನು ಹೋಗಲಾಡಿಸಲು ತಯಾರಿಸಲು ಬೇಕಾದ ಸಾಮಗ್ರಿಗಳನ್ನು ತಿಳಿಯೋಣ. ಮೊದಲಿಗೆ ಅರ್ಧ ಇಂಚು ಈರುಳ್ಳಿ, ಹಸಿ ಶುಂಠಿ, 8-10 ಕಾಳ್ ಮೆಣಸು, ಕಾಲು ಚಮಚ ಅರಿಶಿಣ ಮತ್ತು ಒಂದು ಚಮಚ ಬೆಲ್ಲ. ಇದರ ಜೊತೆಗೆ ಒಂದು ಲೋಟ ನೀರು ಮತ್ತೆ ಕಾಲು ಚಮಚ ಹಾಲು. ಮೊದಲಿಗೆ ಏನು ಮಾಡಬೇಕು ಅಂದ್ರೆ ಈರುಳ್ಳಿ ತೆಗೆದುಕೊಳ್ಳಬೇಕು ಜೊತೆಗೆ ಶುಂಠಿ ಮತ್ತು ಕಾಳ್ ಮೆಣಸು ಈ ಮೂರು ಸಾಮಗ್ರಿಗಳನ್ನು ಚೆನ್ನಾಗಿ ಕುಟ್ಟಿಕೊಳ್ಳಿ. ತದ ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಲು ಇಡೀ ನಂತ್ರ ಅದರಲ್ಲಿ ಒಂದು ಲೋಟ ನೀರು ಹಾಕಿ.
ನೀರು ಕುದಿ ಬಂದ ನಂತರ ಅದಕ್ಕೆ ಜಜ್ಜಿ ಕೊಂಡ ಈರುಳ್ಳಿ ಶುಂಠಿ ಮತ್ತು ಕಾಳ್ ಮೆಣಸು ಪೇಸ್ಟ್ ಅನ್ನು ಹಾಕಿ ಆಮೇಲೆ ಅದಕ್ಕೆ ಬೆಲ್ಲವನ್ನು ಹಾಕಿ ಇದರ ಜೊತೆಗೆ ಅರಿಶಿಣ ಪುಡಿಯನ್ನು ಕೂಡ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಕನಿಷ್ಠ 5-8 ನಿಮಿಷದವರೆಗೆ ಕುದಿಸಿ. ನಂತ್ರ ಸ್ಟೋವ್ ಆಫ್ ಮಾಡಿ ಈ ಕಷಾಯವನ್ನು ಶೋಧಿಸಿ ಕೊಳ್ಳಿ.ಇದನ್ನು ನೀವು ಹಾಗೆ ಬೇಕಾದರೂ ಕುಡಿಯಬಹುದು.
ಇಲ್ಲವಾದ್ರೆ ಸ್ವಲ್ಪ ಇದರಲ್ಲಿ ಹಾಲನ್ನು ಹಾಕಿ ಇದನ್ನು ಸೇವನೆ ಮಾಡಬಹುದು. ಈಗ ಸಿದ್ಧವಾಗಿದೆ ಗಂಟಲು ನೋವು ನಿವಾರಣೆ ಕಷಾಯ. ಇದು ಗಂಟಲು ನೋವನ್ನು ಮಾತ್ರ ವಾಸಿ ಮಾಡುವುದಲ್ಲದೆ ನಿಮ್ಮ ಮೂಗು ಶೀತದಿಂದ ಉಸಿರಾಡಲು ತೊಂದರೆ ಆಗುತ್ತಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ. ನಿಮ್ಮ ಎದೆಯಲ್ಲಿ ಕಫ ಹೆಚ್ಚಾಗಿದ್ದರೆ ಕೂಡ ಅದು ಕೂಡ ಕರಗಿ ಹೋಗುತ್ತದೆ. ಈ ಚಿಕ್ಕ ಕಷಾಯದಿಂದ.
ಈ ಕಷಾಯವನ್ನು ಬಿಸಿ ಇರುವಾಗಲೇ ಕುಡಿಯುವುದರಿಂದ ಸ್ವಲ್ಪ ಮಟ್ಟಿಗೆ ತಲೆನೋವು ಕೂಡ ಕಡಿಮೆ ಆಗುತ್ತದೆ. ಇದನ್ನು ದಿನದಲ್ಲಿ ಎರಡು ಬಾರಿ ಕುಡಿದರೆ ಉತ್ತಮ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.