ಗಂಟಲು ದೋಷ ನಿವಾರಣೆಗೆ ಗಂಟಲು ಶುದ್ದಿಗೆ ಪುದೀನಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ಒಂದು ಚಿಟಕಿ ಉಪ್ಪು ಹಾಕಿ,ಒಂದು ಚಿಟಕಿ ಕಾಳುಮೆಣಸಿನ ಪುಡಿ ಬೆರಸಿ ಗಂಟಲಿಗೆ ತಾಕುವಂತೆ ಬಾಯಿ ಮುಕ್ಕಳಿಸಬೇಕು. ಗಂಡಮಾಲೆ ಗದ್ದೆಗೆ ನುಗ್ಗೆಸೊಪ್ಪು, ನುಗ್ಗೆಚಕ್ಕೆ, ನುಗ್ಗೆಬೀಜ, ಒಟ್ಟಿಗೆ ಗಂಧದಂತೆ ಕುಟ್ಟಿದಪ್ಪನಾಗಿ ಲೇಪ ಮಾಡಬೇಕು.
ದೇವದಾರುಚಕ್ಕೆಯಿಂದ ತಯಾರಿಸಿದ ಗಂಧ ಹಚ್ಚಬೇಕು. ಗಂಟಲುನೋವು ಇರುವವರು ಮಾವಿನ ಎಲೆಯನ್ನು ಚೆನ್ನಾಗಿ ತೊಳೆದು ಕುಡಿಸಿ ಕಷಾಯ ತಯಾರಿಸಿ,ಅದಕ್ಕೆ ನಾಲ್ಕು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಗಂಟಲುನೋವು ಕಡಿಮೆಯಾಗುವುದು.
ವಸಡಿನ ಬಾವು ನೋವು ಇರುವವರು ವಿಲ್ಯೆದೆಲೆಯನ್ನು ಎರಡು ಗ್ಲಾಸ್ ನೀರಿನಲ್ಲಿ ಕುದಿಸಿ ಪ್ರತಿಗಂಟೆಗೊಮ್ಮೆ ಬಾಯಿ ಮುಕ್ಕಳಿಸುತ್ತಿದ್ದರೆ ಬಾವುನೋವು ಕಡಿಮೆಯಾಗುವುದು. ಗಂಟಲಿನ ಎರಡು ಭಾಗದಲ್ಲಿರುವ ಟಾನ್ಸಿಲ್ಗಳಿಗೆ ಒಂದು ಲೋಟ ಬಿಸಿನೀರಿಗೆ ಒಂದು ನಿಂಬೆ ಹಣ್ಣಿನ ರಸ ಪೂರ್ತಿ ಹಿಂದಿ ಹಾಡುಗೆ ಉಪ್ಪು ಬೆರಸಿ ಶುದ್ಧ ಜೇನು ಬೆರಸಿ ಕುಡಿಯುತ್ತ ಬರಬೇಕು.
ಗಂಟಲುಬೇನೆ,ನೆಗಡಿ,ಶೀತ, ಗಂಟಲು ಕೆರತಗಳಿಗೆ ಒಂದು ನಿಂಬೆ ಹಣ್ಣನ್ನು ಕೆಂಡದಮೇಲೆ ಬಿರಿಯುವಂತೆ ಸುತ್ತು ರಸ ಹಿಂದಿ ಅದಕ್ಕೆ ಜೇನು ಬೆರಸಿ ಗಂಟೆಗೊಂದುಸಾರಿ ನೆಕ್ಕುತ್ತಿರಬೇಕು. ನೆಗಡಿ,ಕೆಮ್ಮು, ಪಿತ್ತದಗಂದೆ ಅಜಿರ್ಣ,ಮಕ್ಕಳಾಶೀತ ನಾಗದಿ, ಹೊಟ್ಟೆಯುಬ್ಬರ, ಹೊಟ್ಟೆ ಯುರಿತಗಳಿಗೆ ದೊಡ್ಡೇಪಾತ್ರೆ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಸಬೇಕು.
ಗಂಟಲುನೋವು ಇದ್ದರೆ ಹಸಿ ಶುಂಠಿ ಹಾಗಿದು ರಸ ನುಂಗಿಸಬೇಕು. ಹಸಿ ಶುಂಠಿಯ ಚೂರುಗಳಿಗೆ ಸಕ್ಕರೆ ಬೆರಸಿ ಅಗಿದು ರಸ ಹೀರುತ್ತಿರುವುದು. ಲವಂಗದ ಜೊತೆ ಉಪ್ಪು ಸೇರಿಸಿ ರಸ ನುಂಗುವುದರಿಂದ ಗುಣವಾಗುತ್ತದೆ.