ಗಣಪನಿಗೆ ಹಲವಾರು ತಿಂಡಿ ತಿನಿಸಿಗಳು ಅಂದರೆ ತುಂಬಾನೇ ಪ್ರೀತಿ ಮತ್ತು ಅಸೆ ಅದರಲ್ಲೂ ಈ ಮೋದಕ ಸಿಹಿ ಕಡುಬು ಅಂದ್ರೆ ಗಣಪನಿಗೆ ತುಂಬಾನೇ ಪ್ರೀತಿ ಮತ್ತು ಅಸೆ ಹಾಗಾಗಿ ಗಣಪನ ಹಬ್ಬಕೆ ಪ್ರತಿಯೊಬ್ಬರೂ ಸಹ ಸಿಹಿ ಕಡುಬು ಮಾಡುತ್ತಾರೆ ಆದರೆ ಕೆಲವರಿಗೆ ಈ ಮೋದಕ ಸಿಹಿ ಕಡುಬು ಮಾಡುವುದು ಗೊತ್ತಿಲ್ಲದಿರಬಹುದು ಹಾಗಾಗಿ ನಾವು ಈ ದಿನ ನಿಮಗೆ ಗಣಪನ ಪ್ರಿಯವಾದ ಮೋದಕ ಅಂದರೆ ಸಿಹಿ ಕಡುಬು ಮಾಡುವ ಸುಲಭ ವಿಧಾನವನ್ನು ಹೇಳಿಕೊಡುತ್ತವೆ ನೋಡಿ ನೀವು ಸುಲಭವಾಗಿ ನಿಮ್ಮ ಮನೆಯಲ್ಲಿ ಇದನ್ನು ಮಾಡಬಹುದು, ಯಾವ ರೀತಿಯಾಗಿ ಮಾಡಬೇಕು ಮತ್ತು ಇದಕ್ಕೆ ಏನೆಲ್ಲಾ ಬೇಕು ಅನ್ನೋದು ಇಲ್ಲಿದೆ ನೋಡಿ.
ಈ ಸಿಹಿ ಮೋದಕ ಕಡುಬು ಮಾಡಲು ಬೇಕಾಗಿರುವ ಸಾಮಗ್ರಿಗಳು ಇಲ್ಲಿವೆ ನೋಡಿ. ಅಕ್ಕಿ ಹಿಟ್ಟು ಹಾಗು ಗೋದಿ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಮತ್ತು ತೆಂಗಿನಕಾಯಿ ತೂರಿ ಹಾಗೆ ಬೆಲ್ಲ ಮತ್ತು ಹುರಿಗಡಲೆ ಏಲಕ್ಕಿ ಗಸಗಸೆ ಹಾಗೆ ನೀವು ತೆಗೆದುಕೊಳ್ಳುವಾಗ ಅಕ್ಕಿ ಹಿಟ್ಟು ಮತ್ತು ಗೋದಿ ಹಿಟ್ಟು ಹಾಗು ತೆಂಗಿನ ತೂರಿ ಎಲ್ಲ ಒಂದೇ ಪ್ರಮಾಣದಲ್ಲಿ ಇರಬೇಕು, ಇವುಗಳನ್ನು ಎಲ್ಲ ಸೇರಿಸಿ ಹೇಗೆ ಮಾಡಬಹುದು ಅನ್ನೋದು ಇಲ್ಲಿದೆ ನೋಡಿ.
ಗಸಗಸೆ ಹಾಗು ಏಲಕ್ಕಿಯನ್ನು ಮೊದಲೇ ಹುರಿದುಕೊಳ್ಳಿ ನಂತರ ಅದಕ್ಕೆ ಹುರಿಗಡಲೆ ಹಾಕಿ ಒಂದು ನಾಲ್ಕು ಸೆಕೆಂಡ್ ಹುರಿದುಕೊಳ್ಳಿ ನಂತರ ಸ್ವಲ್ಪ ತಣ್ಣಗಾದ ಮೇಲೆ ಇವನ್ನೆಲ್ಲ ಸೇರಿಸ್ಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ನಂತರ ಬೆಲ್ಲವನ್ನು ಒಂದು ಬಾಣೆಯಲ್ಲಿ ಬೆಲ್ಲ ಹಾಗು ಅದಕ್ಕೆ ಒಂದು ಎರಡು ಸ್ಫೂನ್ ನೀರು ಹಾಕಿಕೊಂಡು ಬೆಲ್ಲ ಕರಗಿಸ್ಕೊಳ್ಳಿ ನಂತರ ಅದಕ್ಕೆ ನೀವು ಮೊದಲೇ ಮಿಕ್ಸಿ ಮಾಡಿಕೊಂಡಿದ್ದ ಪುಡಿಯನ್ನು ಅದಕ್ಕೆ ಮಿಶ್ರಣ ಮಾಡಿ ನಂತರ ಏನು ಮಾಡಬೇಕು ಅನ್ನೋದು ಇಲ್ಲಿದೆ ನೋಡಿ.
ನೀವು ಬೆಲ್ಲದ ಪಾಕವನ್ನು ಮೊದಲೇ ನಾವು ಹೇಳಿದ ಹಾಗೆ ಮೊದಲೇ ಮಾಡಿಕೊಳ್ಳಿ ಅದನ್ನು ಒಂದು ಕಡೆ ಇಟ್ಟುಕೊಳ್ಳಿ ನಂತರ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಹಾಗು ಗೋದಿ ಹಿಟ್ಟು ಮತ್ತು ಒಂದು ಚಮಚ ತುಪ್ಪ ಆಗು ಒಂದು ಚಮಚ ಉಪು ಹಾಕಿ ಬಿಸಿ ಮಾಡಿಕೊಳ್ಳಿ ನಂತರ ಒಂದು ಮುಚ್ಚಳ ಮುಚ್ಚಿ ಕುದಿಯಲು ಇಡಬೇಕು. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ತಿರುಗಿಸಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮತ್ತೆ ಮುಚ್ಚಳ ಮುಚ್ಚಿ ಐದು ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. ನಂತರ ಕೈ ಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ಆ ಹಿಟ್ಟನ್ನು ತೆದುಕೊಂಡು ಸ್ವಲ್ಪ ಸಣ್ಣ ಉಂಡೇ ಮಾಡಿಕೊಂಡು ಅದನ್ನು ಉಜ್ಜಿಕೊಂಡು ಅದಕ್ಕೆ ಮೊದಲೇ ಮಾಡಿಕೊಂಡಿರುವ ಹುರುಣವನ್ನು ತುಂಬಿಕೊಳ್ಳಿ ನಂತರ ಅದನ್ನು ಕ್ಲೋಸ್ ಮಾಡಿ ಅವುಗಳನ್ನು ನೀರಿನ ಹವೆಯಲ್ಲೇ ಬೇಯಿಸಬೇಕು ನೀವು ನೀರಿನ ಹವೆಯಲ್ಲಿ ಬೇಯಿಸಬೇಕು ಅಂದ್ರೆ ಇಡ್ಲಿ ಕುಕ್ಕರ್ ನಲ್ಲಿ ಮೂರೂ ವಿಶಾಲ್ ಕೂಗಿಸಿದರೆ ಸಾಕು ನಿಮ್ಮ ಸಿಹಿ ಮೋದಕ ತಯಾರಾಗಿರುತ್ತದೆ.