ಗಣೇಶನಿಗೆ ಪ್ರಿಯವಾದ ಗರಿಕೆ ಹುಲ್ಲು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು ಹಾಗೆ ಎಂದು ಬೇಕಾಗಿಲ್ಲ. ಇಷ್ಟಕ್ಕೂ ಏನು ಮಾಡಬೇಕು ಅಂತ ಕೇಳುತ್ತೀರಾ ಹೇಳುತ್ತೇವೆ ಬನ್ನಿ ಹಲವು ತೊಂದರೆಗಳಿಗೆ ಡಾ. ಹೇಳಿದ ಮಾತ್ರೆಯನ್ನು ತೆಗೆದುಕೊಳ್ಳುತ್ತೇವೆ ಖಾಯಿಲೆ ವಾಸಿಯಾದರೂ ಮಾತ್ರೆಯ ಅಡ್ಡ ಪರಿಣಾಮ ಸ್ವಲ್ಪವಾದರೂ ಕಂಡುಬರುತ್ತದೆ. ಇಂತ ಸಮಯದಲ್ಲಿ ಬಂದು ಇಡೀ ಗರಿಕೆಯನ್ನು ಎರಡು ಲೋಟ ನೀರಿನಲ್ಲಿ ಹಾಕಿ ಆ ನೀರು ಸ್ವಲ್ಪ ಪಕ್ವವರೆಗೆ ಕುದಿಸಿ ನಂತರ ಆ ನೀರನ್ನು ಕುಡಿದರೆ ಎಲ್ಲ ತರಹದ ಸಾಮಾನ್ಯ ಕಾಯಿಲೆ ಮಾಯವಾಗುತ್ತದೆ.
ಒಂದು ತಿಂಗಳವರೆಗೆ ಆ ಕಷಾಯವನ್ನು ಕುಡಿಯಬೇಕಾಗುತ್ತದೆ ಇನ್ನು ಗರಿಕೆ ಮತ್ತು ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ಕುಡಿದರೆ ವಾಯುವಿನಿಂದ ಆಗುವ ಬೆನ್ನು ಸೊಂಟ ನೋವು ಕಡಿಮೆಯಾಗುತ್ತದೆ. ಈ ಕಷಾಯ ಒಂದು ತಿಂಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣ ಹಸಿವು ಇಲ್ಲದಿರುವುದು ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ. ಇನ್ನು ತೆಂಗಿನ ಎಲೆಯಲ್ಲಿ ಗರಿಕೆ ಹುಲ್ಲನ್ನು ಕುದಿಸಿ ಆರಿಸಿ ತಲೆಗೆ ಹಚ್ಚಿದರೆ ಶರೀರದಿಂದ ಉಷ್ಣತೆ ಆಗುವ ತಲೆ ಹೊತ್ತು ಕಡಿಮೆಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ನಡೆಸಿದ ಅನೇಕ ಸಂಶೋಧನಾ ಅಧ್ಯಯನಗಳು ಗರಿಕೆ/ದುರ್ವಾ ಹುಲ್ಲು ಸಮೃದ್ಧವಾದ ಗ್ಲೈಸೆಮಿಕ್ ಸಾಮಥ್ರ್ಯವನ್ನು ಹೊಂದಿದೆ ಎನ್ನುವುದನ್ನು ಸಾಭೀತು ಪಡಿಸಿದೆ. ಇದು ಮಧುಮೇಹ ಹೊಂದಿರುವವರಿಗೆ ಅದ್ಭುತ ಆರೈಕೆ ಮಾಡುವುದು. ಮಧುಮೇಹ ರೋಗಿಗಳಲ್ಲಿ ಇರುವ ಹೈಪೋಗ್ಲಿಸಿಮಿಕ್ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅವರಲ್ಲಿ ಇರುವ ಇತರ ಅನಾರೋಗ್ಯ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ.
ಗರಿಕೆ ಹುಲ್ಲಿನ ರಸವನ್ನು ನಿಯಮಿತವಾಗಿ ಕುಡಿಯುವುದು ಒಸಡುಗಳ ರಕ್ತಸ್ರಾವಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ, ಕೆಟ್ಟ ಉಸಿರಾಟದ ವಿರುದ್ಧ ಹೋರಾಡುತ್ತದೆ, ಉಸಿರಾಟವನ್ನು ತಾಜಾಗೊಳಿಸುತ್ತದೆ ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ.ಮೂಗಿನಲ್ಲಿ ರಕ್ತ ಸೋರುತ್ತಿದರೆ ತಕ್ಷಣ ಗರಿಕೆ ಹುಲ್ಲಿನ ರಸವನ್ನು ತೆಗದು ಮೂಗಿಗೆ ಹಾಕಬೇಕು. ಹೀಗೆ ಮಾಡದರೆ ಮೂಗಿನಲ್ಲಿ ಸೋರುತ್ತಿರುವ ರಕ್ತ ನಿಲ್ಲುತ್ತದೆ.
ತಲೆಯಲ್ಲಿ ಬಹಳ ಹೊಟ್ಟಾಗಿ ತಲೆ ಕೆರೆದುಕೊಳ್ಳುವಂತಾಗಿದ್ದರೆ ಗರಿಕೆ ಹುಲ್ಲಿನ ರಸವನ್ನು ತೆಗೆದು ಅದನ್ನು ಮೊಸರಿಗೆ ಸೇರಿಸಿಕೊಂಡು ಹಚ್ಚಿಕೊಳ್ಳುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಮತ್ತು ಕೂದಲು ಉದುರುವುದು ನಿಲ್ಲುತ್ತದೆ.ಉರಿ ಮೂತ್ರದ ಸಮಸ್ಯೆ ಇರುವವರು ಗರಿಕೆ ರಸವನ್ನು ತೆಗೆದು ಅದನ್ನು ಒಂದು ಕಪ್ ನೀರಿಗೆ ಹಾಕಿಕೊಂಡು ಕುಡಿದರೆ ಉರಿ ಮೂತ್ರ ನಿವಾರಣೆಯಾಗುತ್ತದೆ. ಮೂತ್ರದ ಸೋಂಕು ನಿವಾರಣೆಯಾಗುತ್ತದೆ.