ಸಸ್ಯಹಾರಿ ಅಡುಗೆ ಆಗಿರಲಿ ಮಾಂಸಾಹಾರಿ ಅಡುಗೆ ಆಗಿರಲಿ ಬೆಳ್ಳುಳ್ಳಿ ಬಳಸದೆ ಇದ್ದರೆ ಹೆಚ್ಚು ಕಮ್ಮಿ ಆಗುತ್ತದೆ, ಈ ಪದಾರ್ಥ ರುಚಿಗೆ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯುಕ್ತ ಅನ್ನುವುದು ಅನೇಕರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಹಲವಾರು ಸಮಸ್ಯೆಗಳಿಗೆ ಮನೆಮದ್ದು ಎಂದು ಪರಿಗಣಿಸುತ್ತಾರೆ. ಬೆಳ್ಳುಳ್ಳಿ ತಿನ್ನುವುದರಿಂದ ಹೊಟ್ಟೆ ಗ್ಯಾಸ್ ಮತ್ತು ಕೀಲು ನೋವು ಉಂಟಾಗುವುದಿಲ್ಲ ಅಂತ ವೈದ್ಯರು ಹೇಳುತ್ತಾರೆ. ಇದರ ಜೊತೆಗೆ ಅಧಿಕ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಿಸಲಾಗುತ್ತದೆ.
ಹಾಗೆ ರಕ್ತ ಪರಿಚಲನೆ ಹೆಚ್ಚು ಮಾಡುವುದಕ್ಕೆ ಸಹಾಯಕವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಬೆಳ್ಳುಳ್ಳಿ ತಿನ್ನುವುದಕ್ಕೆ ವೈದ್ಯರು ಶಿಫಾರಸು ಮಾಡುತ್ತಾರೆ ಆದರೆ ಗರ್ಭ ವ್ಯವಸ್ಥೆಯಲ್ಲಿ ಒಬ್ಬರು ಬೆಳ್ಳುಳ್ಳಿಯನ್ನು ಸೇವಿಸಬೇಕಾ ಬೆಳ್ಳುಳ್ಳಿಯ ಔಷಧಿ ಗುಣಗಳು ಗರ್ಭಾವಸ್ಥೆಯಲ್ಲಿ ರೋಗಗಳ ವಿರುದ್ಧ ಹೋರಾಡುವುದಕ್ಕೆ ಸಹಾಯ ಮಾಡುತ್ತದ. ಇದರಿಂದ ಗರ್ಭಧಾರಣೆಯ ಮೇಲೆ ಪ್ರಭಾವ ಬೀರುತ್ತದೆ ಇತರ ಪ್ರಶ್ನೆಗಳು ಹಲವರಲ್ಲಿ ಮೂಡುತ್ತಾ ಇದೆ. ಇದಕ್ಕೆ ಉತ್ತರ ನಾವು ಕೊಡುತ್ತೇವೆ
ನೀವು ಆಹಾರದಲ್ಲಿ ಸಣ್ಣ ಪ್ರಮಾಣದ ಬೆಳ್ಳುಳ್ಳಿಯನ್ನು ಸೇವಿಸಬಹುದು ಅಂತ ವೈದ್ಯರು ಹೇಳುತ್ತಾರೆ ಗರ್ಭಾವಸ್ಥೆಯಲ್ಲಿ ಪ್ರತಿದಿನ ಕೇವಲ ಒಂದು ಬೆಳ್ಳುಳ್ಳಿ ಮಗು ತಿನ್ನುವುದರಿಂದ ಯಾವುದೇ ಹಾನಿ ಆಗುವುದಿಲ್ಲ. ಗರ್ಭ ವ್ಯವಸ್ಥೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಹಾಗೆ ಆರೋಗ್ಯಕ್ಕೂ ಒಳ್ಳೆಯದು. ಕೊಲೆಸ್ಟ್ರಾಲ್ ಮಟ್ಟವನ್ನು ಸಮಂತನಗೊಳಿಸುತ್ತದೆ ಇದು ಫಂಗಲ್ ಮತ್ತು ಬ್ಯಾಕ್ಟೀರಿಯದ ಸೋಂಕುಗಳಿಂದ ಗರ್ಭ ವ್ಯವಸ್ಥೆಯಲ್ಲಿ ಉಂಟಾಗುವ ಅಧಿಕಾರ ಒತ್ತಡದಂತಹ ಸಮಸ್ಯೆಗೆ ಪರಿಹಾರವನ್ನು ಕೊಡುತ್ತದೆ.
ಹಾಗಿದರ ಹೆಚ್ಚಿನ ಸೇವನೆ ಕೂಡ ಗರ್ಭಿಣಿಯರಿಗೆ ಪರಿಣಾಮ ಬೀರುತ್ತದೆ ಅಂತಾನೂ ಎಚ್ಚರಿಸಿಕೊಡುತ್ತಾರೆ. ಮಹಿಳೆಯರಲ್ಲಿ ಗರ್ಭಧಾರಣೆಯಲ್ಲಿ ಅಧಿಕ ರಕ್ತದ ಒತ್ತಡ ಸಮಸ್ಯೆ ಕಾಣಿಸುತ್ತದೆ. ಇಂತಹ ಸಮಯದಲ್ಲಿ ಬೆಳ್ಳುಳ್ಳಿ ಸೇವನೆ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಗರ್ಭ ವ್ಯವಸ್ಥೆಯಲ್ಲಿ ಸೋಂಕಿನ ಅಪಾಯ ಹೆಚ್ಚು ಮತ್ತು ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಇಂತಹ ಸಮಯದಲ್ಲಿ ಬೆಳ್ಳುಳ್ಳಿಯ ಸೇವನೆ ಬ್ಯಾಕ್ಟೀರಿಯಾ ಗಳು ವಿರುದ್ಧ ಹೋರಾಡುತ್ತದೆ.
ಗರ್ಭವಸ್ಥೆಯಲ್ಲಿ ಅನೇಕ ಮಹಿಳೆಯರು ಕೂದಲು ದುರುವಿಕೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಆದರೆ ಬೆಳ್ಳುಳ್ಳಿಯ ಬಳಕೆ ಈ ಸಮಸ್ಯೆಯನ್ನು ತಡೆಯುತ್ತದೆ. ಬೆಳ್ಳುಳ್ಳಿ ಅಥವಾ ಇನ್ನಾವುದೇ ಆಹಾರವನ್ನು ಸೇವಿಸುವಾಗ ಅದು ನಿಮ್ಮ ಆರೋಗ್ಯದ ಮೇಲೆ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಗರ್ಭಿಣಿಯಾಗಿದ್ದಾಗ ಊಟದಲ್ಲಿ ಯಾವುದೇ ಹೊಸ ಆಹಾರ ಅಥವಾ ಗಿಡಮೂಲಿಕೆಗಳನ್ನು ಸೇರಿಸುವ ಮೊದಲು ನೀವು ಜಾಗರೂಕರಾಗಿರಬೇಕು.