ಅಡುಗೆಮನೆಯಲ್ಲಿರುವ ಗಸಗಸೆ ಎಲ್ಲರಿಗೂ ಚಿರಪರಿಚಿತ. ಆದರೆ, ಗಸಗಸೆ ಅಡಿಗೆಗೆ ಮಾತ್ರವಲ್ಲದೇ, ಹೃದಯ ರೋಗ, ಜೀರ್ಣಕ್ರಿಯೆ, ಕೂದಲು ಮತ್ತು ಚರ್ಮದ ಸಮಸ್ಯೆಗಳು, ನಿದ್ರಾಹೀನತೆ, ಮಧುಮೇಹ, ಮೂಳೆಗಳ ಅಸಹಜತೆ ಮತ್ತು ನರ ಸಮಸ್ಯೆಗಳಂತಹ ಅನೇಕ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ.. ಗಸ ಗಸೆ ಬೀಜಗಳೊಂದಿಗೆ ಸಂಬಂಧಿಸಿದ ಆರೋಗ್ಯ ಪ್ರಯೋಜನಗಳು ಮತ್ತು ಪೌಷ್ಟಿಕಾಂಶದ ಮಾಹಿತಿಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಕೆಳಗೆ ಓದಿ.ಗಸಗಸೆಯಲ್ಲಿ ಮುಖ್ಯವಾಗಿ 3 ವಿಧಗಳಿವೆ, ಅವುಗಳೆಂದರೆ ಬಿಳಿ ಗಸಗಸೆ ಇದನ್ನು ಏಷ್ಯನ್ ಅಥವಾ ಭಾರತೀಯ ಗಸಗಸೆ ಎಂದು ಕರೆಯಲಾಗುತ್ತಿದ್ದು, ಅಡಿಗೆಗೆ ಬಳಸಲಾಗುತ್ತದೆ ನೀಲಿ ಗಸಗಸೆ ಇದನ್ನು ಯೂರೋಪಿಯನ್ ಗಸಗಸೆ ಎಂದು ಕರೆಯಲಾಗುತ್ತಿದ್ದು.
ಬ್ರೆಡ್ ಹಾಗೂ ಇತರ ಕನ್ಫೆಕ್ಷನರಿ ಆಹಾರಗಳಲ್ಲಿ ಬಳಸಲಾಗುತ್ತದೆ ಹಾಗೂ ಓರಿಯೆಂಟಲ್ ಗಸಗಸೆ ಇದನ್ನು ಅಫೀಮು ಗಸಗಸೆ ಎಂದು ಕರೆಯಲಾಗುತ್ತಿದ್ದು, ವಾಣಿಜ್ಯ ಬಳಕೆಗೆ ಪ್ರಯೋಜನಕಾರಿಯಾಗಿದೆ. ಗಸಗಸೆಯಲ್ಲಿ ಮೆಗ್ನೀಷಿಯಂ ಅಂಶ ಸಮೃದ್ಧವಾಗಿದ್ದು, ಇದು ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಒತ್ತಡ ನಿವಾರಣೆಯಾಗಿ, ಒಳ್ಳೆಯ ಗುಣಮಟ್ಟದ, ಶಾಂತ ನಿದ್ರೆ ಮಾಡಬಹುದು. ಮಲಗುವ ಮೊದಲು ಗಸಗಸೆಯ ಟೀ ಅಥವಾ ಗಸಗಸೆಯ ಪೇಸ್ಟ್ ಅನ್ನು ಹಾಲಿನೊಂದಿಗೆ ಸೇರಿಸಿ, ಕುಡಿಯುವುದರಿಂದ ಶರೀರದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ನಿದ್ರಿಸಲು ಪ್ರಚೋದಿಸುತ್ತದೆ. ಈ ಮೂಲಕ ನಿದ್ರಾಹೀನತೆಯಂತಹ ಸಮಸ್ಯೆಯನ್ನು ಗುಣಪಡಿಸುತ್ತದೆ.
ಗಸಗಸೆ ಮತ್ತು ಅದರ ಎಣ್ಣೆ ಮಹಿಳೆಯರಲ್ಲಿ ಬಂಜೆತನ ನಿವಾರಣೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಕಟ್ಟಿದ ಫೆಲೋಪಿಯನ್ ನಾಳಗಳು ಫಲವತ್ತಾದ ಅಂಡ ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಗಸಗಸೆ ಬೀಜದಿಂದ ಫೆಲೋಪಿಯನ್ ನಾಳ ಫ್ಲಶ್ ಮಾಡುವುದರಿಂದ, ಯಾವುದೇ ಕಸ ಅಥವಾ ಶ್ಲೇಷ್ಮ ಕಣಗಳು ಕರಗಿ, ಅಡಚಣೆ ನಿವಾರಣೆಯಾಗುತ್ತದೆ, ಈ ಮೂಲಕ ಇದು ಫಲವತ್ತತೆಯ ಸಾಧ್ಯತೆ ಹೆಚ್ಚಿಸುತ್ತದೆ. ಗಸಗಸೆಯಲ್ಲಿ ಲಿನಿನ್ ಎನ್ನುವ ಅಂಶ ಕಾಮೋತ್ತೇಜಕ ಗುಣ ಹೊಂದಿದ್ದು, ಇದು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ.ನಾರಿನಿಂದ ಸಮೃದ್ಧವಾಗಿರುವ ಗಸಗಸೆ ಜೀರ್ಣಕ್ರಿಯೆ ಉತ್ತೇಜಿಸಲು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಇದು ಆಹಾರದಿಂದ ಪೋಷಕಾಂಶಗಳ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನು ಗುಣಪಡಿಸುವುದರೊಂದಿಗೆ ಗುದದ್ವಾರದ ಮೂಲಕ ತ್ಯಾಜ್ಯ ಪದಾರ್ಥಗಳು ಸುಲಭವಾಗಿ ಹೋಗಲು ನೆರವಾಗುತ್ತದೆ.
ಗಸಗಸೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ, ಇದು ಸ್ವಾಭಾವಿಕವಾಗಿ ರಕ್ತ ಶುದ್ಧೀಕರಿಸುತ್ತದೆ ಮತ್ತು ಕೆಂಪುರಕ್ತಕಣಗಳನ್ನು ಹೆಚ್ಚಿಸುತ್ತದೆ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ. ಮೆದುಳಿಗೆ ಆಮ್ಲಜನಕ ಮತ್ತು ಕೆಂಪು ರಕ್ತಕಣಗಳ ಸರಿಯಾದ ಪೂರೈಕೆ ನರವಾಹಕಗಳ ಉತ್ಪಾದನೆ ನಿಯಂತ್ರಿಸಲು ಮತ್ತು ಗ್ರಹಿಕಾ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ಮರೆವು, ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುವುದು.ಗಸಗಸೆಯಲ್ಲಿ ಖನಿಜಾಂಶ ಮತ್ತು ಸತುವಿನಾಂಶ ಹೆಚ್ಚಾಗಿದ್ದು, ಮೂಳೆಗಳ ಖನಿಜ ಸಾಂದ್ರತೆ ಹೆಚ್ಚಿಸಿ, ಮೂಳೆಗಳು ಹಾಗೂ ಸಂಪರ್ಕಿತ ಅಂಗಾಂಶಗಳನ್ನು ದೃಢಪಡಿಸುವ ಮೂಲಕ, ಮೂಳೆಗಳು ಮುರಿಯದಂತೆ ರಕ್ಷಣೆ ನೀಡುತ್ತವೆ. ಇದರಲ್ಲಿರುವ ಮ್ಯಾಂಗನೀಸ್ ಮೂಳೆಗಳಲ್ಲಿ ಕೊಲ್ಯಾಜಿನ್ ಉತ್ಪಾದಿಸಲು ನೆರವಾಗುವ ಮೂಲಕ, ಮೂಳೆಗಳು ಹಾನಿಗೊಳಗಾಗದಂತೆ ರಕ್ಷಿಸುತ್ತವೆ.