WhatsApp Group Join Now

ramya ಸ್ಯಾಂಡಲ್ ವುಡ್ ನ ಮೋಹಕ ತಾರೆ, ಬ್ಯೂಟಿ ಕ್ವೀನ್ ರಮ್ಯಾ . ವಜ್ರೇಶ್ವರಿ ಕಂಬೈನ್ಸ್ ಮೂಲಕ ಸಿನಿ ಜರ್ನಿ ಅರಂಭಿಸಿದ ದಿವ್ಯಾ ಸ್ಪಂದನ ಸಿನಿಮಾದಲ್ಲಿ ಹೆಸರನ್ನು ರಮ್ಯಾ ಎಂದು ಬಲಾಯಿಸಿಕೊಂಡರು. ಅಭಿನಯದ ಮೂಲಕ ಯಶಸ್ಸಿನ ದಾರಿತುಳಿದು ಜನಮನ ಗೆದ್ದರು‌. ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ 1 ನಟಿಯಾಗಿ ಮೆರೆದರು ರಮ್ಯಾ

ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಿನಿಮಾರಂಗದಿಂದ ದೂರ ಉಳಿದರು. ಕೆಲವು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ರಮ್ಯಾ ಈಗ ಅಭಿಮಾನಿಗಳ ಒತ್ತಡಕ್ಕೆ ಮಣಿದು ಸಿಬಿಮಾಗೆ ಕಂಬ್ಯಾಕ್ ಆಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ ರಮ್ಯಾ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ.

ಇತ್ತೀಚೆಗೆ ರಮ್ಯಾ ವಿಷಯವಾಗಿ ಗಾಳಿಸುದ್ದಿಯೊಂದು ಭರದಲ್ಲಿ ಸಾಗುತ್ತಿತ್ತು. ರಮ್ಯಾ ಯುವಕನ ಜೊತೆ ಆಪ್ತವಾಗಿರುವ ಫೋಟೋವನ್ನು ಶೇರ್ ಮಾಡಿದ್ದರು. ಈ ಫೋಟೋ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ರಮ್ಯಾ ಜೊತೆ ಸೆಲ್ಫಿಗೆ ಪೋಸ್ ನೀಡಿದ ಯುವಕ ಯಾರೆಂಬ ಸುದ್ದಿ ಉಹಾಪೋಹ ಎಲ್ಲೆಡೆ ಹರಿದಾಡಿತ್ತು‌ . ಇದೀಗ ಗಾಳಿಸುದ್ದಿಗೆ ಗುದ್ದು ಕೊಟ್ಟಿದ್ದಾರೆ ಚಂದನವನದ ಚಂದದ ನಟಿ ರಮ್ಯಾ

ಎಲ್ಲೆಡೆ viral ಆದ ಸೆಲ್ಫಿ ಫೋಟೊ ಜೊತೆಯಲ್ಲಿರುವ ವ್ಯಕ್ತಿ ಯಾರೆಂದು ಬಹಿರಂಗ ಪಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ನಾನು ಕುತೂಹಲವನ್ನು ತುಂಬಾ ಇಷ್ಟಪಡುತ್ತೇನೆ ಎಂದು ನೇರವಾಗಿ ಒಂದೇ ಮಾತಿನ‌ ಛಾಟಿ ಬೀಸಿ ರಮ್ಯಾ ಇವರು ವಿಹಾನ್. ನನ್ನ ಸ್ಟೈಲಿಸ್ಟ್ ಎಂದು ಹೇಳಿದ್ದಾರೆ.

WhatsApp Group Join Now

Leave a Reply

Your email address will not be published. Required fields are marked *