ಹೌದು ಈ ಅಣ್ಣೇಸೊಪ್ಪು ಎಲ್ಲರಿಗು ಚಿರಪರಿಚಿತ ಈ ಮುಲಿಕೆಯು ಹುಲ್ಲು ಗಾವಲಿನಲ್ಲಿ,ಬೀಳು ಭೂಮಿಯಲ್ಲಿ ಬೆಳೆಯುತ್ತದೆ.ರಾಗಿಯ ಹೊಲದಲ್ಲಿ ಕಳೆಯಂತೆ ಬೆಳೆಯುತ್ತದೆ.ಈ ಗಿಡವನ್ನು ಸೊಪ್ಪು ತರಕಾರಿಯಂತೆ ಬಳಸುತ್ತಾರೆ.ಇದು ೧-೩ ಅಡಿ ಎತ್ತರ ಬೆಳೆಯುತ್ತದೆ.ಕಾಂಡವು ವಿರಳವಾಗಿ ಕವಲೊಡೆದಿರುತ್ತದೆ. ಸರಳವಾದ, ನೀಳ ಅಥವಾ ಕರ್ನೆಯಾಕಾರದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ.
ಉದ್ದನೆಯ ಪುಷ್ಪಮಂಜರಿಯು ಕಾಂಡದ ತುದಿ ಮತ್ತು ಎಲೆಯ ಕಂಕುಳಲ್ಲಿರುತ್ತವೆ.ಹೂಗಳು ಮೊದಲು ಕೆಂಪಾಗಿರುತ್ತವೆ ಬಲಿತಂತೆ ಬಿಳಿ ಬಣ್ಣಕ್ಕೆ ತಿರುಗುತ್ತವೆ.ಹೂಗಳನ್ನು ಕಾಪಾಡುವ ಹೂಸೂಚಿಗಳು ಬೆಳ್ಳಗೆ ಹೊಳಪಿರುವ ಪೊರೆಯಂತಿರುತ್ತವೆ.ಹಣ್ಣುಗಳಲ್ಲಿ ಕಪ್ಪಾದ ಹೊಳಪಿನಿಂದ ಕೂಡಿದ ಸಣ್ಣ ಬೀಜಗಳಿರುತ್ತವೆ.
ಅಣ್ಣೇಸೊಪ್ಪಿನ ಲಾಭಗಳು: ಅಣ್ಣೆಸೊಪ್ಪು ಬೇರನ್ನು ಅರೆದು ಕುಡಿಸುವುದರಿಂದ ಭಂಗಿಸೊಪ್ಪಿನ ಸೇವನೆಯಿಂದುಂಟಾದ ದೋಷ ಪರಿಹಾರವಾಗುತ್ತದೆ.
ಎಲೆಯ ರಸ,ಕಷಾಯ ಅಥವಾ ಚೂರ್ಣ ಸೇವನೆಯಿಂದ ಪಿತ್ತಕೋಶ(ಲಿವರ್) ಬಲಗೊಳ್ಳುತ್ತದೆ ಹಾಗೂ ಗೊನ್ಹೊರಿಯ ರೋಗವು ವಾಸಿಯಾಗುತ್ತದೆ.
ಈ ಸೊಪ್ಪಿನ ಬೀಜಗಳನ್ನು ಅರೆದು ಕುಡಿಸಿದರೆ ಭೇದಿ ನಿಲ್ಲುತ್ತದೆ. ಬೀಜದ ಚೂರ್ಣ ಅಥವಾ ಬೀಜಗಳನ್ನು ಅರೆದು ಸೇವಿಸುವುದರಿಂದ ವೀರ್ಯವೃದ್ಧಿಯಾಗುತ್ತದೆ.
ಬೀಜವನ್ನು ಅರೆದು ಗಂಧ ಮಾಡಿಕೊಂಡು ಕಣ್ಣಿಗೆ ಕಣ್ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ರೋಗಗಳು ವಾಸಿಯಾಗುತ್ತವೆ.