ನಮಸ್ತೇ ಪ್ರಿಯ ಓದುಗರೇ, ದೇಹಕ್ಕೆ ತಂಪು ನೀಡುವ ಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್ ಅಂತ ಹೇಳಬಹುದು. ಸಾಮಾನ್ಯವಾಗಿ ಪಾನ್ ಅನ್ನು ಎಲ್ಲರೂ ತಿಂದಿರುತ್ತಾರೆ ಅದರಲ್ಲಿ ಇನ್ನೂ ಸ್ವಲ್ಪ ಸಿಹಿ ಇಷ್ಟ ಪಡುವವರು ಪಾನ್ ನಲ್ಲಿ ಹೆಚ್ಚಾಗಿ ಗುಲ್ಕನ್ ಅನ್ನು ಸೇರಿಸಿ ತಿನ್ನುತ್ತಾರೆ. ಗುಲ್ಕನ್ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದು ದೇಹದ ಉಷ್ಣತೆಯನ್ನು ನಿಯಂತ್ರಣ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೂ ದೇಹವನ್ನು ತಂಪಾಗಿಸುತ್ತದೆ. ಜೊತೆಗೆ ಉಷ್ಣ ದೇಹವುಳ್ಳವರಿಗೆ ಇದು ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು. ಗುಲ್ಕನ್ ಅನ್ನು ಗುಲಾಬಿ ಬಣ್ಣದ ಗುಲಾಬಿ ದಳಗಳಿಂದ ಮಾಡಿರುತ್ತಾರೆ ಹೀಗಾಗಿ ಇದು ಆಯುರ್ವೇದದ ದೃಷ್ಟಿಯಿಂದ ಇದರ ಸೇವನೆಯು ಆರೋಗ್ಯಕ್ಕೆ ಒಳಿತು. ಹಾಗೂ ಇದನ್ನು ತಿನ್ನುವುದರಿಂದ ದೇಹವು ಪುನರ್ಚೇತನ ಆಗುತ್ತದೆ.
ನಮ್ಮ ಭಾರತ ದೇಶವನ್ನೊಳಗೊಂಡಂತೆ ಇನ್ನಿತರ ದೇಶಗಳು ಈ ಗುಲ್ಕನ್ ಸೇವನೆಯನ್ನು ಜೀರ್ಣ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಋತುಚಕ್ರ ಸಮಸ್ಯೆಯನ್ನು ಹೋಗಲಾಡಿಸಲು ಬಳಕೆ ಮಾಡುತ್ತಾ ಇದ್ದರು. ಅಷ್ಟೇ ಅಲ್ಲದೇ ಇದು ಅಸಿಡಿಟಿ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುತ್ತದೆ. ಗರ್ಭಿಣಿಯರು ಗುಲ್ಕನ್ ಸೇವಿಸಿದರೆ ಹೆಚ್ಚು ಉತ್ತಮ. ಇನ್ನೂ ಋತು ಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ಕಾಡುವ ಹೊಟ್ಟೆ ನೋವು ಬೆನ್ನು ನೋವು ಅತಿಯಾದ ರಕ್ತಸ್ರಾವವನ್ನು ಈ ಗುಲ್ಕನ್ ಸೇವನೆಯಿಂದ ಸುಲಭವಾಗಿ ತಡೆಯಬಹುದು. ಆದ್ದರಿಂದ ಈ ಸಮಸ್ಯೆ ಇರುವವರು ನಿಯಮಿತವಾಗಿ ಗುಲ್ಕನ್ ತಿನ್ನಿ. ಇನ್ನೂ ನಿಮ್ಮ ದೇಹವೂ ತುಂಬಾನೇ ಉಷ್ಣದಿಂದ ತತ್ತರಿಸಿ ನಿಮ್ಮ ಮೂಗಿನಿಂದ ರಕ್ತಸ್ರಾವ ಆಗುತ್ತಿದ್ದರೆ ಹಾಗೂ ಅತಿಯಾದ ಉಷ್ಣದಿಂದ ಮೊಡವೆಗಳು ಆಗುತ್ತಿದ್ದರೆ ಕಾಲಿನಲ್ಲಿ ಉರಿ ಬರುತ್ತಿದ್ದರೆ ನಿಯಮಿತವಾಗಿ ಗುಲ್ಕನ್ ಸೇವಿಸುತ್ತಾ ಬನ್ನಿ. ಇದು ತಂಪು ಕಾರಕ ಸೂಪರ್ ಫುಡ್ ಅಂತ ಹೇಳಬಹುದು. ಹಾಗೂ ರಕ್ತದಲ್ಲಿ ಅಡಗಿರುವ ವಿಷಕಾರಿ ಅಂಶಗಳನ್ನು ಈ ಗುಲ್ಕನ್ ಹೊರಹಾಕುತ್ತದೆ.
ಇದರಿಂದ ಕಪ್ಪು ಕಲೆಗಳು ಡಾರ್ಕ್ ಸರ್ಕಲ್ ಗುಳ್ಳೆಗಳು ಎಲ್ಲವೂ ಕ್ರಮೇಣ ಉಪಶಮನ ಆಗುತ್ತದೆ.ಗುಲ್ಕನ್ ತಿನ್ನುವುದರಿಂದ ಮೂಗಿನಿಂದ ಆಗುವ ರಕ್ತಸ್ರಾವ ಕೂಡ ತಡೆಯಬಹುದು. ಹಾಗೂ ಮೂಲವ್ಯಾಧಿ ಮತ್ತು ಮಲಬದ್ಧತೆ ಸಮಸ್ಯೆ ಇರುವವರು ಚಿಂತೆ ಇಲ್ಲದೆ ಇದನ್ನು ಸೇವಿಸಬಹುದು. ಕಾರಣ ಇದರಲ್ಲಿ ಅಧಿಕವಾದ ಫೈಬರ್ ಅಂಶ ಇರುವ ಕಾರಣ ಇದು ಈ ಎರಡು ಸಮಸ್ಯೆಗಳನ್ನು ದೂರ ಮಾಡುತ್ತದೆ. ಗುಲ್ಕನ್ ಅನ್ನು ಮಕ್ಕಳಿಗೆ ಪ್ರತಿನಿತ್ಯ ನೀಡುವುದರಿಂದ ಮಲಬದ್ಧತೆ ದೂರಾಗುತ್ತದೆ. ಗುಲ್ಕನ್ ದೇಹಕ್ಕೆ ತಂಪು ನೀಡುವುದಲ್ಲದೇ ದೇಹದಲ್ಲಿನ ನರಗಳ ಮೇಲೆ ಬೀಳುವ ಒತ್ತಡವನ್ನು ನಿವಾರಿಸಿ ಪೋಷಿಸುತ್ತದೆ. ಇನ್ನೂ ಈಗುಲ್ಕನ್ ಯಾರು ಸೇವನೆ ಮಾಡಬಾರದು ಅಂದರೆ ಮಧುಮೇಹಿಗಳು ಇದನ್ನು ಸೇವಿಸಬಾರದು. ಕಾರಣ ಇದನ್ನು ಸಿದ್ದಪಡಿಸುವಾಗ ಸಕ್ಕರೆಯನ್ನು ಬಳಕೆ ಮಾಡಿರುತ್ತಾರೆ. ಮಧುಮೇಹಿಗಳು ಇದರಿಂದ ದೂರವಿರುವುದು ಒಳಿತು. ಆದರೆ ಗರ್ಭಿಣಿಯರಿಗೆ ಇದು ತುಂಬಾನೇ ಒಳ್ಳೆಯದು. ಇದರಿಂದ ಮಗು ಆರೋಗ್ಯವಾಗಿ ಹುಟ್ಟುತ್ತದೆ. ಮಗುವಿನ ಬೆಳವಣಿಗೆ ಕೂಡ ಚೆನ್ನಾಗಿ ಆಗುತ್ತದೆ. ಶುಭದಿನ.