ಸ್ನೇಹಿತರೆ ನಮ್ಮ ಹಿಂದೂ ಧರ್ಮದ ಪ್ರಕಾರ ನಾವು ಹಲವಾರು ರೀತಿಯಾದಂತಹ ರೀತಿ ವಿವಾದಗಳನ್ನು ಪಾಲನೆ ಮಾಡಿಕೊಂಡು ಬರುತ್ತಾ ನಮ್ಮ ನಂಬಿಕೆ ಪ್ರಕಾರ ಇವನು ಮಾಡಿದರೆ ನಾವು ಏಳಿಗೆಯನ್ನು ಕಾಣುತ್ತೇವೆ. ನಾವು ಯಾವುದೇ ಒಂದು ಶುಭಕಾರ್ಯವನ್ನು ಶುರು ಮಾಡಬೇಕು ಎಂದುಕೊಂಡರೆ ಅದಕ್ಕೆ ಹಲವಾರು ರೀತಿಯಾದಂತಹ ಪೂಜೆಯನ್ನು ಮಾಡುವ ಮೂಲಕ ಶುರು ಮಾಡುತ್ತೇವೆ ಇದರಿಂದ ನಮಗೆ ಬಹಳ ಸುಖ ಕೊಡುವಂತಹ ಫಲಿತಾಂಶ ದೊರೆತಿದೆ.
ಇದು ನಮ್ಮ ಹಿರಿಯರ ಕಾಲದಿಂದಲೂ ಪಾಲನೆ ಯಾಗಿ ಬರುತ್ತಾ ಇದೆ ಅದಕ್ಕಾಗಿ ಈಗಿನ ಕಾಲದ ವ್ಯಕ್ತಿಗಳು ಇದನ್ನು ಬಿಡಲು ಮನಸ್ಸು ಒಪ್ಪೋದಿಲ್ಲ. ಇವತ್ತಿನ ಮಾಹಿತಿಯಲ್ಲಿ ಅದೇ ರೀತಿಯಾಗಿ ಮನೆಯ ಗ್ರಹಪ್ರವೇಶ ಇದ್ದ ಸಮಯದಲ್ಲಿ ಮೊದಲಿಗೆ ನಾವು ಗೋಮಾತೆಯನ್ನು ಯಾಕೆ ಮನೆ ಒಳಗೆ ಬಿಡುತ್ತೇವೆ ಎಂಬುದನ್ನು ತಿಳಿದುಕೊಳ್ಳೋಣ. ನಮಗೆ ತಿಳಿದ ಪ್ರಕಾರ ನಾವು ಆಕಳನ್ನು ದೇವರ ರೂಪದಲ್ಲಿ ನೋಡುತ್ತೇವೆ ಇದರಲ್ಲಿ ಮುಕ್ಕೋಟಿ ದೇವರು ನೆಲೆಸಿದ್ದಾರೆ ಎಂಬುದು ನಮ್ಮ ನಂಬಿಕೆ ಇದೆ.
ನಮಗೆಲ್ಲರಿಗೂ ನಮ್ಮ ಸ್ವಂತ ಮನೆಯಲ್ಲಿ ವಾಸಿಸಬೇಕೆಂಬ ಕನಸು ಕಾಣುತ್ತಾ ಇರುತ್ತೇವೆ. ಇದಕ್ಕಾಗಿ ಕಷ್ಟಪಟ್ಟು ನಮಗೆ ಬೇಕಾದ ರೀತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತೇವೆ . ಎಷ್ಟು ವರ್ಷಗಳ ಕೂಡಿಟ್ಟ ಹಣವನ್ನು ಇದರ ಮೇಲೆ ಖರ್ಚು ಮಾಡಿ ಮನೆಯನ್ನು ಬಹಳ ಅಲಂಕಾರದಿಂದ ಮಾಡಬೇಕು ಎಂಬ ಕನಸು ನಮಗೂ ಎಲ್ಲರಿಗೂ ಇರುತ್ತದೆ ಹಾಗಾಗಿ ನಾವು ಅದನ್ನು ಯಶಸ್ಸು ಕೂಡ ಮಾಡಿರುತ್ತೇವೆ.ಆ ಮನೆಯ ಕನಸು ನನಸು ಆದಾಗ ಸ್ನೇಹಿತರನ್ನು ಬಂಧುಗಳನ್ನು ಕರೆದು ಗೃಹಪ್ರವೇಶ ಸಮಾರಂಭವನ್ನು ಪೂಜಿಸುತ್ತೇವೆ.
ಕರುವಿನೊಂದಿಗೆ ಹಸವನ್ನು ಕರೆದುಕೊಂಡು ಮಂತ್ರವನ್ನು ಪಠಿಸುತ್ತಾ ಮನೆ ಒಳಗಡೆ ತಿರುಗಿಸಿಕೊಂಡು ಸಮಾರಂಭದ ಮೊದಲ ಆಚರಣೆ ಆಗಿದೆ .ಹಸು ಮತ್ತು ಕರು ಪ್ರವೇಶಿಸಿದ ನಂತರವೇ ಮನೆಯ ಮಾಲೀಕರು ಮತ್ತು ಇತರ ಕುಟುಂಬ ಸದಸ್ಯರು ಒಳಗೆ ಹೋಗುತ್ತಾರೆ ಈ ಪದ್ಧತಿಯ ಹಿಂದಿನ ಅರ್ಥವಿರೋ ಎನು ಗೊತ್ತಾ ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ವೈಜ್ಞಾನಿಕ ಕಾರಣವಿದೆ ಪುರಾಣಗಳು ಮತ್ತು ದಂತ ಕಥೆಗಳ ಪ್ರಕಾರ ಹಸುವನ್ನು ಎಲ್ಲ ದೇವತೆಗಳ ವಾಸಸ್ಥಾನ ಅಂತ ತಿಳಿದುಕೊಂಡಿದ್ದೇವೆ.
ಹಸುವಿನ ಒಂದೊಂದು ಭಾಗದಲ್ಲಿ ಒಂದೊಂದು ದೇವರುಗಳನ್ನು ಇರುತ್ತಾರೆ ಎಲ್ಲಿ ಗೋವಿರುತ್ತದೆ ಅಲ್ಲಿ ಎಲ್ಲಾ ದೇವತೆಗಳು ಇರುತ್ತಾರೆ ಎಂದು ಪುರಾಣಗಳು ಹೇಳುತ್ತದೆ ಹಾಗಾಗಿ ಹಸುವನ್ನು ಕರೆತಂದರೆ ದೇವರುಗಳು ಮನೆಗಳಿಗೆ ಪ್ರವೇಶಿಸುತ್ತಾರೆ ಎಂದು ಹೇಳಲಾಗಿದೆ ಅದಕ್ಕಾಗಿಯೇ ಮನೆಯಲ್ಲಿ ಹಸುವನ್ನು ಕರ ತರುತ್ತೇವೆ ಆ ಸಮಯದಲ್ಲಿ ಗೋಮೂತ್ರ ಅಥವಾ ಸಗಣಿಯನ್ನು ಇಟ್ಟರೆ ಅದಕ್ಕೆ ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗಿದೆ.
ಈ ದಿನ ಕಾಲದಲ್ಲಿ ಗೋವನ್ನು ಮನೆ ಒಳಗೆ ತಿರುಗಿಸುವ ಸಾಧ್ಯವಿಲ್ಲದ ಕಾರಣ ಹಸು ಮತ್ತು ಕರುಗಳನ್ನು ಮನೆಯ ಆವರಣದಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ ಮನೆಯಲ್ಲಿ ಗೋಮಯ ಮತ್ತು ಗೋಮೂತ್ರವನ್ನು ಸಿಂಪಡಿಸಲಾಗುತ್ತದೆ ಗೃಹಪ್ರವೇಶದ ಸಮಯದಲ್ಲಿ ಹಸು ಮತ್ತು ಕರು ವನ್ನು ಮನೆಗೆ ಏಕೆ ಕರೆಯುತ್ತಿರುತ್ತಾರೆ ಎಂಬುವ ಮಾಹಿತಿ ನೀಡುವುದು ಅರ್ಥವಾಗಿದೆ ಅಂದುಕೊಳ್ಳುತ್ತೇವೆ ಮಾಹಿತಿ ಇಷ್ಟವಾದಲ್ಲಿ ಒಂದು ಮೆಚ್ಚುಗೆ ನೀಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಮರೆಯದೆ ಹಂಚಿಕೊಳ್ಳಿ .