ಕೆಲವೊಂದು ಸಲ ಗ್ಯಾಸ್ಟ್ರಿಕ್ ನೋವು ಬಂದರು ಹಾರ್ಟ್ ಅಟ್ಯಾಕ್ ಬಂದೆದೆಯೇನೋ ಎಂದು ತುಂಬಾ ಭಯ ಪಡುತ್ತಿರುತ್ತೇವೆ ಆದರೆ ಕೆಲವೊಂದು ಸಲ ನಿಜವಾಗಿ ಹಾರ್ಟ್ ಅಟ್ಯಾಕ್ ಬಂದರು ಗ್ಯಾಸ್ಟ್ರಿಕ್ ನೋವು ಎಂದುಕೊಂಡು ಅಜಾಗ್ರತೆಯಿಂದ ಇರುತ್ತವೆ. ಕೆಲವೊಂದು ಸಲ ಪ್ರಾಣ ಹೋಗುವ ಸಂಭವ ಇರುತ್ತದೆ ಆದ್ದರಿಂದ ಗ್ಯಾಸ್ಟ್ರಿಕ್ ನೋವಿಗೂ ಹೃದಯಾಘಾತಕ್ಕೂ ಏನು ವ್ಯತ್ಯಾಸ ಇದೆ ಎಂಬುವುದನ್ನು ಈಗಲೇ ನಾವು ತಿಳಿದುಕೊಳ್ಳೋಣ. ಹೊಟ್ಟೆಯಲ್ಲಿ ಉಬ್ಬರ, ಹೊಟ್ಟೆನೋವು, ತಿಂದಿದ್ದು ಜೀರ್ಣ ಆಗದೆ ಇರುವುದು, ಮಲಬದ್ಧತೆ, ಎದೆಯಲ್ಲಿ ನೋವು, ವಾಕರಿಕೆ, ತೇಗು, ದುರ್ವಾಸನೆಯಿಂದ ಕೂಡಿದ ಗ್ಯಾಸ್ ಬಿಡುಗಡೆ ಆಗುವುದು ಇವುಗಳನ್ನು ಗ್ಯಾಸ್ಟ್ರಿಕ್ ಆಗಿದೆ ಎಂದು ಹೇಳಿಕೊಳ್ಳುತ್ತಾ ಇರುತ್ತವೆ.
ಅಸಿಡಿಟಿ ಎಂದರೆ ನಾವು ತಿಂದಂತಹ ಆಹಾರ ಜೀರ್ಣ ಆಗುವುದಕ್ಕೆ ಬೇಕಾದಂತಹ ಜೀರ್ಣರಸಗಳು ತಯಾರಾಗುತ್ತಿರುತ್ತವೆ ಜೀರ್ಣ ರಸಗಳು ನಮಗೆ ಸಾಕಾಗುವಷ್ಟು ಅಂದರೆ ತಯಾರಾಗುವುದರಿಂದ ಜೀರ್ಣಶಯದ ಪೊರೆಯನ್ನು ತೆಗೆದು ಹಾಕುತ್ತವೆ ಇದನ್ನು ಅಸಿಡಿಟಿ ಎನ್ನುತ್ತಾರೆ. ಅಲ್ಸರ್ ಕೂಡ ಬರುತ್ತದೆ ಜೀರ್ಣ ರಸಗಳು ಸರಿಯಾಗಿ ತಯಾರಾದರು ಕೂಡ ಅಸಿಡಿಟಿ ಬರುತ್ತದೆ. ಮಾನಸಿಕ ಒತ್ತಡ ಹೆಚ್ಚಾಗಿ ಆಗುವುದರಿಂದ ಆಸಿಡ್ಸ್ ಹೆಚ್ಚಾಗಿ ಬಿಡುಗಡೆ ಆಗುತ್ತದೆ ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳುವುದರಿಂದ ಕೂಡ ಆಸಿಡ್ಸ್ ಬಿಡುಗಡೆ ಆಗುತ್ತದೆ.
ನಾವು ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳದೆ ಹೋಗುವುದರಿಂದ ಮತ್ತೆ ಆಹಾರ ತೆಗೆದುಕೊಂಡರು ಆಸಿಡ್ಸ್ ಬಿಡುಗಡೆ ಆಗುತ್ತದೆ ಹೊಟ್ಟೆಯಲ್ಲಿ ಆಹಾರ ಇಲ್ಲದೆ ಹೋಗುವುದರಿಂದ ಆಸಿಡ್ಸ್ ಕರುಳಿನಲ್ಲಿರುವ ಪೊರೆಯನ್ನು ತೆಗೆದುಹಾಕುತ್ತವೆ. ಹೊಟ್ಟೆನೋವು, ಉರಿ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದನ್ನು ಕೂಡ ಅಸಿಡಿಟಿ ಎನ್ನುತ್ತಾರೆ ಕೆಲವೊಬ್ಬರಿಗೆ ಆಸಿಡ್ಸ್ ಸರಿಯಾಗಿ ಬಿಡುಗಡೆ ಆದರೂ ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಂಡರು ಹೃದಯದ ಬಾಗದಲ್ಲಿ, ಎದೆ ಬಾಗದಲ್ಲಿ, ಹೊಟ್ಟೆಯ ಬಾಗದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ ಇದನ್ನು ರಿಪ್ಲೆಕ್ಟ್ ಡಿಸಿಜ್ ಎನ್ನುತ್ತಾರೆ.
ನಾವು ತಿಂದ ಆಹಾರ ನೇರವಾಗಿ ಜರ್ಣಾಶಯಕ್ಕೆ ಹೋಗಿ ರಸಗಳ ಜೊತೆಗೆ ಜೀರ್ಣವಾಗಬೇಕು ಆದರೆ ಆಹಾರ ಜಿರ್ಣಾಶಯಕ್ಕೆ ಹೋದ ತಕ್ಷಣ ಅನ್ನನಾಳಕ್ಕೆ ವಾಪಸ್ಸು ಬರುವುದರಿಂದ ಉರಿ ಬರುತ್ತದೆ ಸಣ್ಣ ಸಣ್ಣ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ ಅನ್ನನಾಳದಲ್ಲಿ ಏನಾದರೂ ಅಡೆತಡೆಗಳು ಇದ್ದಾಗ ಆಸಿಡ್ಸ್ ಈಗೆ ವಾಪಸ್ಸು ಬರುತ್ತವೆ ಇದರಿಂದ ಕೂಡ ಉರಿ ಬರುತ್ತದೆ. ಅನ್ನನಾಳ ಹೃದಯದ ಹಿಂಬಾಗದಲ್ಲಿ ಇರುವುದರಿಂದ ಹೃದಯದಲ್ಲಿ ಉರಿ ಬರುವ ಹಾಗೆ ಅನಿಸುತ್ತದೆ ಆಸಿಡ್ಸ್ ಹೆಚ್ಚಾಗಿ ತಯಾರಾಗುವುದರಿಂದ ಕೂಡ ಅಸಿಡಿಟಿ ಬರುತ್ತದೆ.
ಕಾರ, ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರಿಂದ ಜೀರ್ಣ ವ್ಯವಸ್ತೆಯನ್ನು ಕುಂಠಿತಮಾಡಿ ಏನೇ ಆಹಾರ ತೆಗೆದುಕೊಂಡರು ಅಸಿಡಿಟಿ ಬರುತ್ತದೆ ಮಾನಸಿಕ ಒತ್ತಡ ಒಬಿಸಿಟಿ ಅಂದರೆ ಬೊಜ್ಜು ಇದ್ದರೂ ಅಸಿಡಿಟಿ ಬರುತ್ತದೆ. ಬೊಜ್ಜು ಇರುವವರಿಗೆ ಅಸಿಡಿಟಿ ಸಮಸ್ಯೆ ಹೆಚ್ಚಾಗಿ ಇರುತ್ತದೆ ಆದ್ದರಿಂದ ಎತ್ತರಕ್ಕೆ ಸರಿಯಾಗಿ ತೂಕ ಇರಬೇಕು ಎನ್ನುತ್ತಾರೆ ಜಲಸ್ ಫೀಲಿಂಗ್ ಇದ್ದರೂ ಕರುಳಿನಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ ನಮ್ಮ ಹೃದಯದ ಮೇಲೆ ಯಾರೋ ಕುಳಿತು ಗಟ್ಟಿಯಾಗಿ ಒತ್ತುತ್ತಿರುವ ಹಾಗೆ ಅನ್ನಿಸಿದರೆ ಅದನ್ನು ಹಾರ್ಟ್ ಅಟ್ಯಾಕ್ ಎನ್ನುತ್ತಾರೆ.
ಗ್ಯಾಸ್ ಸ್ಟ್ರಬಲ್ ಆದರೆ ಎದೆಯ ಬಾಗದಲ್ಲಿ ಉರಿ ಬಂದಹಾಗೆ ಆಗುತ್ತದೆ, ಹೃದಯದ ನೋವಾದರೆ ಹೊಡಾಡುವಾಗ ಹೆಚ್ಚಾಗಿ ಇರುತ್ತದೆ ಕುಳಿತುಕೊಂಡಾಗ ಕಡಿಮೆಯಾದ ಹಾಗೆ ಅನಿಸುತ್ತದೆ ಅಂತಹ ಸಮಯದಲ್ಲಿ ನೈಟ್ರೇಟ್ ಎನ್ನುವ ಮಾತ್ರೆಯನ್ನು ನಾಲಿಗೆಯ ಮೇಲೆ ಇಟ್ಟ ತಕ್ಷಣ ಹಾರ್ಟ್ ಅಟ್ಯಾಕ್ ಆದರೆ ಕಡಿಮೆಯಾಗುತ್ತದೆ. ಗ್ಯಾಸ್ಟ್ರಿಕ್ ಆದರೆ ಕಡಿಮೆಯಾಗುವುದಿಲ್ಲ ಮುಖ್ಯವಾಗಿ ಹಾರ್ಟ್ ಅಟ್ಯಾಕ್ ನಲವತ್ತು ವರ್ಷದ ಒಳಗಿನವರಲ್ಲಿ, ದೂಮಪಾನ ಮದ್ಯಪಾನ ಮಾಡುವವರಲ್ಲಿ, ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಬಿಪಿ ಶುಗರ್ ಅತಿಯಾದ ತೂಕ, ಬೊಜ್ಜು ಸಮಸ್ಯೆಯಿಂದ ಬಳಲುತ್ತಿರವವರು ಕೂಡ ಇಂತಹ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.