ಇತ್ತೀಚಿನ ದಿನಗಳಲ್ಲಿ ನಾವು ತಿನ್ನುವ ಆಹಾರ ಪದಾರ್ಥಗಳು ನಮಗೆ ಹೆಚ್ಚಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ನಿಮ್ಮ ಮನೆಯಲ್ಲಿ ಸಿಗಲಿದೆ ಸುಲಭ ಪರಿಹಾರ, ಆದ್ದರಿಂದ ಈ ರೀತಿಯಾಗಿ ಬಳಸಿ.
ಹಸಿ ಶುಂಠಿಯನ್ನು ಅಗತ್ಯವಾಗಿ ಬಳಸುವುದು ಅಡಿಗೆಗಳಲ್ಲಿ ಮಾಮೂಲಿಯಾಗಬೇಕು. ಹೆಚ್ಚು ಖಾರದ ಅಡಿಗೆಯನ್ನು ಊಟದಲ್ಲಿ ಬಳಸಬಾರದು. ಕಡಿಮೆ ಬಳಸಿದರೆ ಗ್ಯಾಸ್ಟ್ರಿಕ್ ಬರುವ ತೀವ್ರತೆ ಕಡಿಮೆ.
ಪ್ರತಿ ನಿತ್ಯದ ಅಡಿಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸುವುದರಿಂದ ಸಹ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯಬಹುದಾಗಿದೆ. ಪ್ರತಿನಿತ್ಯದ ಊಟದಲ್ಲಿ ಮಜ್ಜಿಗೆಯನ್ನು ಬಳಸುವುದರಿಂದಲೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿಯಂತ್ರಿಸಬಹುದು.
ಊಟದಲ್ಲಿ ಹಿಂಗನ್ನು ಮಿತವಾಗಿ ಬಳಸುವುದರಿಂದ ಸಹ ಗ್ಯಾಸ್ಟ್ರಿಕ್ ಬರದಂತೆ ತಡೆಯಬಹುದಾಗಿದೆ. ಹಸಿ ಶುಂಠಿಯನ್ನು ಅರೆದು ದಿನಕ್ಕೆರಡು ಸರಿ ಜೇನುತುಪ್ಪದೊಂದಿಗೆ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ ಅಲ್ಲದೆ ಬರದಂತೆ ಸಹ ತಡೆಯಬಹುದಾಗಿದೆ.