ಪರಂಗಿ ಹಣ್ಣು ಎಲ್ಲಾ ಹಣ್ಣುಗಿಂತ ವಿಶಿಷ್ಟ ಹಣ್ಣಾಗಿದ್ದು, ಇದನ್ನು ಹಣ್ಣುಗಳ ರಾಣಿಯೆಂದೇ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಈ ಹಣ್ಣನ್ನು ಕರಿಕ ಪರಂಗಿ ಎಂದು ಕರೆಯುವುದೂ ಉಂಟು. ಪ್ರತೀನಿತ್ಯ ಪರಂಗಿ ಹಣ್ಣು ತಿನ್ನುವುದರಿಂದ ಜೀರ್ಣಾಂಗದ ಅನೇಕ ತೊಂದರೆಗಳನ್ನು ದೂರಾಗಿಸಿಕೊಳ್ಳಬಹುದು. ಅಲ್ಲದೆ, ಇದರಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿರುವುದರಿಂದ ಕಣ್ಣುಗಳು ಆರೋಗ್ಯದಿಂದರಲು ಸಹಾಯಕಾರಿಯಾಗಿರುತ್ತದೆ.
ಕೊಬ್ಬಿನ ಅಂಶ ಕಡಿಮೆ ಮಾಡಲಿದೆ ಪರಂಗಿ: ಪರಂಗಿ ಹಣ್ಣಿನಲ್ಲಿ ನಾರಿನ ಅಂಶ ಹಾಗೂ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿರುವ ಕೊಬ್ಬಿನ ಅಂಶ ಹೊರಹಾಕಲು ಸಹಾಯಕಾರಿಯಾಗಿರುತ್ತದೆ. ಅಲ್ಲದೆ, ಹೃದಯ ಸಂಬಂಧಿ ರೋಗಗಳಿಗೆ ಪರಂಗಿ ಹಣ್ಣು ರಾಮಬಾಣವಾಗಿರುತ್ತದೆ.
ತೂಕ ಇಳಿಕೆಗೆ ಸಹಾಕಾರಿ: ಪರಂಗಿ ಹಣ್ಣಿನಲ್ಲಿ ಅತೀ ಕಡಿಮೆ ಕ್ಯಾಲೋರಿಗಳಿರುವುದರಿಂದ ಸ್ಥೂಲಕಾಯ ಇರುವವರು ಈ ಹಣ್ಣನ್ನು ಪ್ರತೀನಿತ್ಯ ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ದೇಹವು ಹಗುರವಾಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಯಾರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅವರ ದೇಹಕ್ಕೆ ಇತರರಿಗೆ ಬರುವ ರೋಗಗಳ ಸೋಂಕು ಸುಲಭವಾಗಿ ತಗುಲುತ್ತದೆ. ಇಂತಹವರು ಪ್ರತಿನಿತ್ಯ ಪರಂಗಿ ಹಣ್ಣನ್ನು ಪ್ರತೀನಿತ್ಯ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಸಂಧಿವಾತದಿಂದ ದೂರವಿಡುತ್ತದೆ: ಕೀಲುನೋವು ಅಧಿಕವಾಗಿ ಮಧ್ಯವಯಸ್ಸು ದಾಟಿದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಪ್ರಮುಖ ಕಾರಣ ದೇಹದಲ್ಲಿ ವಿಟಮಿನ್ ಕೊರತೆ. ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುವುದಿಂದ ಸಂಧಿವಾತ ಸಮಸ್ಯೆ ಎದುರಿಸುತ್ತಿರುವವರು ಪರಂಗಿ ಹಣ್ಣನ್ನು ಪ್ರತಿನಿತ್ಯಾ ಸೇವಿಸುವುದರಿಂದ ಸಮಸ್ಯೆಯಿಂದ ದೂರವಿರಬಹುದು.
ಜೀರ್ಣಕ್ರಿಯೆ ಸರಾಗಕ್ಕೆ ಉಪಯುಕ್ತ: ಆಹಾರಗಳು ತಿನ್ನುವಾಗ ರುಚಿಕರವಾಗಿಯೇ ಇರುತ್ತದೆ. ಆದರೆ, ಈ ಆಹಾರ ನಮ್ಮ ದೇಹಕ್ಕೆ ಸರಿಹೊಂದಿಲ್ಲದಿದ್ದರೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಪರಂಗಿ ಹಣ್ಣನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆ ಮಾಡುತ್ತದೆ.
ಮುಟ್ಟಿನಿಂದ ಬಂದ ನೋವು: ಮಹಿಳೆ ಹಾಗೂ ಯುವತಿಯರಿಗೆ ಸಾಮಾನ್ಯವಾಗಿ ಪ್ರತೀ ತಿಂಗಳು ಬರುವ ಈ ಮುಟ್ಟಿನ ನೋವು ಹೇಳಿಕೊಳ್ಳಲಾಗಂತಹ ನೋವನ್ನು ನೀಡುತ್ತದೆ. ಇಂತಹ ಸಮಯದಲ್ಲಿ ಮಾತ್ರೆ ಹಾಗೂ ಕೋಲ ಎಂಬ ಮದ್ದುಗಳ ಮೊರೆ ಹೋಗುವ ಬದಲು ಪರಂಗಿ ಹಣ್ಣು ಸೇವಿಸಿವುದರಿಂದ ಮುಟ್ಟಿನ ನೋವು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ, ಮುಟ್ಟಿನ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಪರಂಗಿ ಹಣ್ಣನ್ನು ಸೇವಿಸುತ್ತಾ ಬಂದರೆ ಮುಟ್ಟಿನ ಸಮಸ್ಯೆಯಿಂದ ದೂರವಿರಬಹುದು.
ಸೌಂದರ್ಯ ಕಾಪಾಡುವಲ್ಲಿ ಸಹಾಕಾರಿ: ಹೌದು ಪ್ರತಿನಿತ್ಯ ಪರಂಗಿ ಹಣ್ಣನ್ನು ಸೇವಿಸುವುದರಿಂದ ವಯಸ್ಕರಂತೆ ಕಾಣಬಹುದು. ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಇರುವುದರಿಂದ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಮುಖದ ಹಾಗೂ ದೇಹಕ್ಕೆ ಬರುವ ವಯಸ್ಸಾದ ಚಿಹ್ನೆಗಳು ದೂರವಾಗುತ್ತವೆ.
ಕ್ಯಾನ್ಸರ್ ರೋಗದಿಂದ ದೂರವಿರಬಹುದು: ಪರಂಗಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್, ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಪ್ಲವೊನೈಡ್ ಅಂಶ ಹೇರಳವಾಗಿರುವುದರಿಂದ ಜೀವಕೋಶಗಳು ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ ಈ ಪರಂಗಿ: ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಂಗಿ ಹಣ್ಣು ಸಿದ್ಧೌಷಧವಾಗಿದ್ದು, ಕರುಳು ಹಾಗೂ ಜೀರ್ಣಾಂಗಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಾದರೂ ನಿವಾರಿಸಬಲ್ಲದು.