ಕಣ್ಣುರಿ ಇದ್ದರೆ ಹೆಸರುಕಾಳು ಪುಡಿಯನ್ನು ನೀರಿನಲ್ಲಿ ಕಲಸಿ ಕಣ್ಣಿನ ಸುತ್ತ ಲೇಪ ಮಾಡಿ 15 ನಿಮಿಷ ಬಿಟ್ಟು ನಂತರ ತೊಳೆದರೆ ಕಣ್ಣುರಿ ನಿವಾರಣೆಯಾಗುತ್ತದೆ.
ಎರಡು ಚಮಚ ಹೆಸರುಕಾಳು, ಅರ್ಧ ಚಮಚ ಅರಿಶಿನ ಮತ್ತು ಒಂದು ಚಮಚ ಅಕ್ಕಿ ಹಿಟ್ಟು ಎಲ್ಲಾ ಸೇರಿಸಿ ಪುಡಿ ಮಾಡಿ. ಈ ಪುಡಿಗೆ ಜೇನುತುಪ್ಪ ಮತ್ತು ಮೊಸರು ಬೆರೆಸಿ ಚರ್ಮಕ್ಕೆ ಲೇಪ ಮಾಡಿ 30 ನಿಮಿಷ ಬಿಟ್ಟು ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ.
ಹೆಸರುಕಾಳನ್ನು ರಾತ್ರಿ ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಅಪೆನ್ಡಿಸ್ ನೋವು ಬೇಗ ಕಡಿಮೆಯಾಗುತ್ತದೆ.
ಮೂಲ ವ್ಯಾಧಿ (ಪೈಲ್ಸ್)ಯಲ್ಲಿ ರಕ್ತ ಸ್ರಾವವಿದ್ದರೆ ಹೆಸರು ಕಾಳು ಅಥವಾ ಹೆಸರು ಬೇಳೆಯಿಂದ ತಯಾರಿಸಿದ ಕೋಸಂಬರಿ, ಪಾಯಸ, ತೊವ್ವೆ ಸೇವಿಸಿದರೆ ರಕ್ತ ಸ್ರಾವ ನಿಲ್ಲುತ್ತದೆ.
ಹೆಸರುಕಾಳು, ಮೆಂತ್ಯೆ, ನಿಂಬೆಹಣ್ಣಿನ ಸಿಪ್ಪೆ , ಕರಿಬೇವಿನ ಸೊಪ್ಪು ಮತ್ತು ಅಂಟವಾಳ ಎಲ್ಲವನ್ನೂ ಸೇರಿಸಿ ಪುಡಿ ಮಾಡಿ ಪೇಸ್ಟ್ ತಯಾರಿಸಿ ಕೂದಲಿಗೆ ಪ್ಯಾಕ್ ಹಾಕಿದರೆ, ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯುತ್ತದೆ ಹಾಗೂ ಮೃದುವಾಗಿರುತ್ತದೆ.