ಹುಣಸೆ ಹುಳಿ ಇದ್ದರೆ ಅಡುಗೆ ರುಚಿ ಮತ್ತಷ್ಟು ಹೆಚ್ಚುತ್ತೆ. ಟಾರ್ಟಾರಿಕ್ ಆಮ್ಲ, ವಿಟಮಿನ್, ಆ್ಯಂಟಿ ಆ್ಯಕ್ಸಿಡೆಂಟ್ ಮತ್ತು ಖನಿಜಗಳು ಹುಣಸೆ ಹುಳಿ ಹೆಚ್ಚಿಸುತ್ತದೆ. ರುಚಿ ಹೆಚ್ಚಲಿಕ್ಕೆ ಮಾತ್ರವಲ್ಲ, ಇದು ಆರೋಗ್ಯಕಾರಿಯೂ ಹೌದು.
ತ್ವಚೆ ಆರೋಗ್ಯಕ್ಕೆ ಹುಣಸೆ ಬೆಸ್ಟ್. ಚರ್ಮದ ಮೇಲಿರುವ ಜೀವಕೋಶಗಳನ್ನು ನಿವಾರಿಸಲು, ನೆರಿಗೆಗಳನ್ನು ನಿವಾರಿಸಲು, ಕೂದಲು ಉದುರುವುದನ್ನು ಇದು ನಿವಾರಿಸಬಲ್ಲದು.
ತ್ವಚೆ ಬೆಳ್ಳಗಾಗಲು ಎರಡು ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ 15 ನಿಮಿಷ ನೆನೆಸಿಡಿ. ಅರಿಶಿಣವನ್ನು ಹುಣಸೆ ತಿರುಳಿಗೆ ಸೇರಿಸಿ ಫೇಸ್ ಪ್ಯಾಕ್ ಹದಕ್ಕೆ ಕಲಸಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ನಂತರ ತೊಳೆಯಿರಿ.
ಮೊಡವೆಗೆ ಸ್ಕ್ರಬ್ನಂತೆ ಹುಣಸೆಯನ್ನು ಬಳಸಬಹದು. ಹುಣಸೆ ಹಣ್ಣನ್ನು ನೀರಿನಲ್ಲಿ 15 ನಿಮಿಷ ನೆನೆಸಿಡಬೇಕು. ಅದರ ರಸವನ್ನು ಮೊಸರಿನೊಂದಿಗೆ ಸೇರಿಸಿ. ಆ ಮಿಶ್ರಣಕ್ಕೆ ಒಂದು ಚಿಟಕಿ ಕಲ್ಲುಪ್ಪು ಸೇರಿಸಿ. ಇದನ್ನು ಚರ್ಮದ ಮೇಲೆ 10 ನಿಮಿಷ ಕಾಲ ಮಸಾಜ್ ಮಾಡಬೇಕು. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಮೊಡವೆ ಮಾಯವಾಗುತ್ತದೆ.
ಕೂದಲಿನ ಆರೋಗ್ಯಕ್ಕೂ ಹುಣಸೆ ಉತ್ತಮ ಮದ್ದು. ಕೂದಲಿನ ಬುಡಕ್ಕೆ ಹಚ್ಚಿ, ನಯವಾಗಿ ಮಸಾಜ್ ಮಾಡಿದರೆ ಒಳ್ಳೆಯದು. ಮೆಹಂದಿಗೂ ಹುಣಸೆ ರಸ ಮಿಕ್ಸ್ ಮಾಡಿದರೆ ಕಂಡೀಷನರ್ನಂತೆ ಕಾರ್ಯ ನಿರ್ವಹಿಸುತ್ತದೆ. ಹುಣಸೆ ಹುಳಿ ರಸವನ್ನು ಕೂದಲಿನ ಬುಡಕ್ಕೆ ಹಂಚಿಕೊಂಡು, ಸ್ವಲ್ಪ ಹೊತ್ತಿನ ನಂತರ ತೊಳೆದುಕೊಳ್ಳಬೇಕು.
ಕುತ್ತಿಗೆ ಸುತ್ತ ಕಪ್ಪಾಗಿದರೆ, ಗುಲಾಬಿ ರಸ, ಜೇನು ಹಾಗೂ ಹುಣಸೆ ಹಣ್ಣಿನ ತಿರುಳನ್ನುಸೇರಿಸಿ ದಪ್ಪನಾಗಿ ಹಚ್ಚಿ ಕೆಲವು ನಿಮಿಷ ನಂತರ ತೊಳೆಯಿರಿ.
ತ್ವಚೆ ಸುಕ್ಕು ನಿವಾರಿಸಲು ಹುಣಸೆ ತಿರುಳು ಕಿವುಚಿ, ಅದಕ್ಕೆ ಜೀನುತುಪ್ಪ ಮತ್ತು ಕಡಲೆ ಹಿಟ್ಟನ್ನು ಸೇರಿಸಿ ಪ್ರತಿದಿನ ರಾತ್ರಿ ನಯವಾಗಿ ಹಚ್ಚಬೇಕು.