ನಮಸ್ತೆ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಆಗಿರಬಹುದು ಅಥವಾ ಹುಡುಗರೇ ಆಗಿರಬಹುದು ಸಾಮಾನ್ಯವಾಗಿ ಅವರು ಎದುರಿಸುತ್ತಿರುವ ಸಮಸ್ಯೆ ಚರ್ಮ ಸಂಬಂಧಿತವಾದ ಬ್ಲಾಕ್ ಹೆಡ್ಸ್ ಹಾಗೂ ವೈಟ್ ಹೆಡ್ಸ್. ಅಂದರೆ ಸತ್ತು ಹೋಗಿರುವ ಚರ್ಮ ಕಣಗಳು ಎಂದು ಹೇಳಬಹುದು. ಈ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಹೇಗೆ ಬರುತ್ತವೆ ಎಂದರೆ, ನಾವು ಹೆಚ್ಚಾಗಿ ಧೂಳಿನಲ್ಲಿ ಒಡಾಡಿದಾಗ ಆ ಧೂಳು ನಮ್ಮ ಚರ್ಮ ರಂಧ್ರಗಳ ಒಳಗೆ ಹೋಗಿ ಈ ಬ್ಲಾಕ್ ಹೆಡ್ಸ್ ಹಾಗೂ ವೈಟ್ ಹೆಡ್ಸ್ ಆಗಿ ಮಾರ್ಪಾಡಾಗುತ್ತದೆ. ಮುಖ್ಯವಾಗಿ ಇವು ಮೂಗಿನ ಮೇಲೆ ಹಣೆ ಮೇಲೆ ಹಾಗೆ ಕೆನ್ನೆ ಮೇಲೆ ಹೆಚ್ಚಾಗಿ ಕಾಣಿಸುತ್ತೆ. ಹಾಗೆ ಇವು ಬೆನ್ನು , ಕೈ, ಹಾಗೆ ಕುತ್ತಿಗೆ ಮೇಲೆ ಕಂಡು ಬರುವ ಸಾಧ್ಯತೆ ಕೂಡ ಇರುತ್ತೆ. ಈ ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್ ಹೋಗಲಾಡಿಸ ಲು ಮಾರ್ಕೆಟ್ ನಲ್ಲಿ ವಿವಿಧ ರೀತಿಯ ಆಯುಧಗಳು ಸಿಗುತ್ತವೆ. ಅವೆಲ್ಲವೂ ಕೂಡ ಸ್ವಲ್ಪ ಡೇಂಜರ್ ಆಗಿರುತ್ತವೆ ಹಾಗೆ ಸ್ವಲ್ಪ ಜಾಸ್ತಿನೇ ಬೆಲೆ ಬಾಳುವ ವಸ್ತು ಆಗಿರುತ್ತೆ. ಆದರೆ ನಾವು ಅಷ್ಟೊಂದು ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಇಂದಿನ ಲೇಖನದಲ್ಲಿ ಈ ಬ್ಲಾಕ್ ಹೆಡ್ಸ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸುವ ಎರಡು ಅತ್ಯಂತ ಪ್ರಯೋಜನಕಾರಿ ವಿಧಾನಗಳನ್ನು ನೋಡೋಣ ಸ್ನೇಹಿತರೆ. ಈ ಎರೆಡು ವಿಧಾನಗಳಲ್ಲಿ ನೀವು ಯಾವುದಾದರೂ ಒಂದನ್ನು ಮಾಡಿ ನೋಡಿದರೂ ಸಾಕು ನಿಮಗೆ ಒಳ್ಳೆಯ ಪರಿಣಾಮಕಾರಿ ಫಲಿತಾಂಶ ಸಿಗುತ್ತದೆ. ಹಾಗೆ ಇದನ್ನು ಹುಡುಗರು ಅಥವಾ ಹುಡುಗಿಯರು ಯಾರು ಬೇಕಾದರೂ ಬಳಕೆ ಮಾಡಬಹುದು. ಈ ಚಮತ್ಕಾರಿ ಟಿಪ್ ಅನ್ನು ಬಳಸಿದ ಕೇವಲ 5 ನಿಮಿಷದಲ್ಲಿ ನಿಮಗೆ ಯಾವುದೇ ವೈಟ್ ಹೆಡ್ಸ್ ಬ್ಲಾಕ್ ಹೆಡ್ಸ್ ನಿಮ್ಮ ಮುಖದಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಮೊದಲಿಗೆ ಒಂದು ಚಿಕ್ಕ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಟೀ ಚಮಚ ನಿಂಬೆ ರಸವನ್ನು ಹಿಂಡಿಕೊಳ್ಳಿ, ಒಂದುವೇಳೆ ನಿಮ್ಗೆ ಬ್ಲ್ಯಾಕ್ ಹೆಡ್ಸ್ ವೈಟ್ ಹೆಡ್ಸ್ ತುಂಬಾ ಇದ್ದರೆ ಒಂದು ಟೀ ಚಮಚ ನಿಂಬೆ ರಸ ತೆಗೆದುಕೊಳ್ಳಿ, ಇದಕ್ಕೆ ಕಾಲು ಚಮಚದಷ್ಟು ಬೇಕಿಂಗ್ ಸೋಡಾವನ್ನು ಬೆರೆಸಿ, ನಂತರ ಕಾಲು ಚಮಚದಷ್ಟು ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಕೊಡಿ. ಈಗ ನಮ್ಮ ಚಮತ್ಕಾರಿ ಉಪಾಯ ರೆಡಿ ಆಗಿದೆ. ಇದನ್ನು ಬಳಸುವ ರೀತಿ ನೋಡೋಣ ಬನ್ನಿ, ಇದನ್ನು ನಿಮ್ಮ ಚರ್ಮಕ್ಕೆ ಹಚ್ಚುವ ಮೊದಲು ಒಂದು ಚಿಕ್ಕ ಕಾಟನ್ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿ ಹಿಂಡಿ ಆ ಬಟ್ಟೆಯನ್ನು ನಿಮ್ಮ ಮುಖದ ಮೂಗಿನ ಮೇಲೆ ಅಥವಾ ಎಲ್ಲೆಲ್ಲಿ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಇದ್ದಾವೆ ಆ ಜಾಗಕ್ಕೆ 2-3 ನಿಮಿಷ ಒತ್ತಿ ಒತ್ತಿ ಇಟ್ಟುಕೊಳ್ಳಿ. ಇದರಿಂದ ರಂಧ್ರಗಳು ತೆರೆದುಕೊಳ್ಳುತ್ತವೆ. ಆಗ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ತೆಗೆಯಲು ಸಹಾಯ ಆಗುತ್ತದೆ. ಅವುಗಳು ಬೇಗನೆ ಹೊರಗೆ ಬರಲು ಉಪಕಾರಿ ಆಗುತ್ತದೆ. ನಂತರ ರೆಡಿಯಾದ ಮಿಶ್ರಣವನ್ನು ಒಂದು ಟೂತ್ ಬ್ರಷ್ ಸಹಾಯದಿಂದ ಮಿಶ್ರಣದಲ್ಲಿ ಅದ್ದಿ ಮೆಲ್ಲಗೆ ಮಸಾಜ್ ಮಾಡಿ. ಹಣೆ ಮೇಲೆ, ಕೆನ್ನೆ ಮೇಲೆ, ಗದ್ದದ ಮೇಲೆ ಇದ್ದರೂ ಹೀಗೆ ಬ್ರಷ್ ಸಹಾಯದಿಂದ ಮಸಾಜ್ ಮಾಡಿ. ನಾವು ಬಳಸಿರುವ ನಿಂಬೆ ರಸ ಸತ್ತು ಹೋಗಿರುವ ಚರ್ಮದ ಕಣಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ನಾವು ಬಳಸಿದ ಬೇಕಿಂಗ್ ಸೋಡಾ ಎಕ್ಸ್ ಫೋಲಿಯೆಟ್ ಮಾಡಲು ಸಹಾಯ ಮಾಡುತ್ತದೆ, ಚರ್ಮದ ಮೇಲಿನ ಧೂಳು ಅಥವಾ ಗಲೀಜನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಇನ್ನೂ ಕೊನೆಯದಾಗಿ ಹಾಲಿನಲ್ಲಿ ಲಾಕ್ಟಿಕ್ ಆಸಿಡ್ ಹೆಚ್ಚಾಗಿ ಇರುವುದರಿಂದ ಇದು ನಮ್ಮ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಒಂದುವೇಳೆ ನಿಮ್ಮ ಚರ್ಮಕ್ಕೆ ಹಾಲು ಹಾಗೂ ನಿಂಬೆ ರಸ ಆಗಿ ಬರುವುದಿಲ್ಲ ಎಂದಾದರೆ, ಅರ್ಧ ಚಮಚ ನೀರಿನ ಜೊತೆಗೆ ಬೇಕಿಂಗ್ ಸೋಡಾ ಬೆರೆಸಿ ಹೀಗೆ ಮಾಡುವುದರಿಂದ ಸತ್ತ ಚರ್ಮದ ಕಣಗಳು ನಾಶ ಆಗುತ್ತವೆ. ಹೀಗೆ ಒಂದು ಐದು ನಿಮಿಷ ಮಸಾಜ್ ಮಾಡಿ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ, ನಂತರ ಮಾಯಶ್ಚರೈಸರ್ ಹಚ್ಚಿ. ಇನ್ನೊಂದು ವಿಧಾನ ನೋಡುವುದಾದರೆ ಒಂದು ಬಟ್ಟಲಿಗೆ ಅರ್ಧ ಟೀ ಚಮಚ ಟೀ ಪುಡಿ ಹಕ್ಕೊಳಿ, ನಂತರ ಒಂದು ಚಿಟಿಕೆ ಅರಿಶಿನ ಪುಡಿ ಹಾಕ್ಕೊಳಿ, ಅವೆರಡನ್ನೂ ಕಲಸಲು ಬೇಕಾದಷ್ಟು ನಿಂಬೆ ರಸವನ್ನು ಹಿಂಡಿಕೊಂಡು ಚೆನ್ನಾಗಿ ಕಲಸಿ ಮಿಶ್ರಣ ರೆಡಿ ಮಾಡಿಕೊಳ್ಳಿ. ನಾವು ಇದರಲ್ಲಿ ಬಳಸಿದ ಟೀ ಪುಡಿಯಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಏಜಿಂಗ, ಆಂಟಿ ಇನ್ಫ್ಲ ಮೇಟರಿ ಏಜೆಂಟ್ ಇರುತ್ತವೆ ಇದರಿಂದ ಸತ್ತ ಚರ್ಮದ ಕಣಗಳು ಹೊರ ಹೋಗುತ್ತವೆ. ಹಾಗೆ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ನೀವು ಇದನ್ನು ಹೀಗ್ ಬಳಸಬೇಕು ಎಂದರೆ, ನಿಂಬೆ ರಸ ಹಿಂಡಿ ಉಳಿದ ಸಿಪ್ಪೆಯ ಮೇಲೆ ಈ ಮಿಶ್ರಣ ಹಾಕಿ ನಿಧಾನವಾಗಿ ನಿಮ್ಮ ಮೂಗು, ಕೆನ್ನೆ, ಗದ್ದ, ಹಣೆಯ ಮೇಲೆ ಉಜ್ಜುತ್ತಾ ಇರಿ. ಆ ನಂತರ ತಣ್ಣೀರಿನಲ್ಲಿ ನಿಮ್ಮ ಮುಖವನ್ನು ತೊಳೆಯಿರಿ. ಇದನ್ನು ನೀವು ವಾರದಲ್ಲಿ ಎರೆಡು ಬಾರಿ ಉಪಯೋಗಿಸಿದರೆ ಸಾಕು ನಿಮ್ಗೆ ಶಾಶ್ವತವಾಗಿ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಹೋಗುತ್ತವೆ. ನೋಡಿದಿರಲ್ಲಾ ಸ್ನೇಹಿತರೆ, ನಿಮಗೆ ಈ ಟಿಪ್ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.