ಚಳಿಗಾಲದಲ್ಲಿ ಚರ್ಮ ಒಣಗಿ ಹೋಗುವುದು, ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆ. ಈ ಬಗ್ಗೆ ಇಲ್ಲಿದೆ ಕೆಲವು ಟಿಫ್ಸ್.
ಮುಖ ತೊಳೆಯುವುದಕ್ಕೂ ಮುನ್ನ ಟೊಮೇಟೊ ಸ್ಲೈಸ್ ಇಂದ 5 ನಿಮಷಗಳ ಕಾಲ ಮುಖಕ್ಕೆ ಮಸಾಜ್ ಮಾಡಿ. ಹಚ್ಚಿದ ಸುಮಾರು 15-20 ನಿಮಿಷದ ಬಳಿಕ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆಯ ಹೊಳಪು ಹೆಚ್ಚಾಗುತ್ತದೆ.
ಸಾಮಾನ್ಯವಾಗಿ ಚಳಿಗಾಲದ ಒಣ ವಾತಾವರಣದಲ್ಲಿ ಚರ್ಮದಲ್ಲಿರುವ ನೀರಿನ ಅಂಶ ಬೇಗನೇ ಇಂಗಿ ಹೋಗುತ್ತದೆ. ಆದ್ದರಿಂದ ಆಗಾಗ ನೀರು ಸೇವಿಸುವುದೂ ಅಗತ್ಯ.
ಚಳಿಗಾದಲ್ಲಿ ಫೇಸ್ ಪ್ಯಾಕ್ ಅದ್ಭುತ ಪರಿಣಾಮವನ್ನು ಉಂಟುಮಾಡಬಲ್ಲುವು. ಚಳಿಗಾಲದಲ್ಲಿ ಬಳಸುವ ಮಾಯಿಸ್ಚರೈಝರ್ ಗಿಂತ ಮನೆಯಲ್ಲಿಯೇ ನೈಜವಾಗಿ ದೊರೆಯುವ ಹಣ್ಣು, ತರಕಾರಿಗನ್ನು ಹಚ್ಚಿಕೊಂಡು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ. ಅವೊಕಾಡೊ, ಬಾಳೆಹಣ್ಣು, ಜೇನು ಮೊದಲಾದವುಗಳನ್ನು ಬಳಸಿ ಫೇಸ್‌ಪ್ಯಾಕ್ ತಯಾರಿಸಿಕೊಳ್ಳಿ.
ಮುಖಕ್ಕಾಗಲಿ ಅಥವಾ ಮೈಗಾಗಲಿ ತುಂಬಾ ಸಾರಿ ಸೋಪ್ ಬಳಸಬೇಡಿ. ದಿನಕ್ಕೆ ಒಂದೇ ಸಾರಿ ಸೋಪ್ ಉಪಯೋಗಿಸಬೇಕು. ಸೋಪ್‌ನ ಬದಲಿಗೆ ಕಡ್ಲೇ ಹಿಟ್ಟು ಬಳಸುವುದು ಒಳ್ಳೆಯದು.
ಚಳಿಗಾಲದಲ್ಲಿ ನಿಮ್ಮ ತ್ವಚೆಗೆ ಎಳ್ಳೆಣ್ಣೆಗಳಿಂದ ಆರೈಕೆ ಮಾಡಿಕೊಳ್ಳಿ. ಇದರಲ್ಲಿ ಉತ್ತಮವಾದ ಮಾಯಿಶ್ಚರೈಸಿಂಗ್ ಗುಣಗಳು ಇರುತ್ತವೆ. ಎಳ್ಳೆಣ್ಣೆಯಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು, ಖನಿಜಾಂಶಗಳು ಮತ್ತು ಪ್ರೋಟಿನ್‌ಗಳು ಇದ್ದು ಇವು ತ್ವಚೆಯ ಒಣ ಅಂಶವನ್ನು ನಿವಾರಿಸುತ್ತದೆ.
ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ಸೇರಿಸಿ, ಪೇಸ್ಟ್ ಮಾಡಿಕೊಂಡು ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ಈ ಫೇಸ್‌ಪ್ಯಾಕ್ ಹಾಕುವುದರಿಂದ ತ್ವಚೆಯ ಕಾಂತಿ ಹೆಚ್ಚಾಗುತ್ತದೆ.