ನಮಸ್ತೆ ಪ್ರಿಯ ಓದುಗರೇ, ಚಳಿಗಾಲದಲ್ಲಿ ನಿಮ್ಮ ಚರ್ಮ ತುಂಬಾ ಡ್ರೈ ಆಗ್ತಿದಿಯಾ? ಮುಖದ, ಕೈ ಮೇಲಿನ ಚರ್ಮ ಸುಕ್ಕು ಗಟ್ಟುತ್ತಿದೆಯಾ ನೆರಿಗೆ ಬೀಳ್ತಾ ಇದೀಯಾ? ಹಾಗಾದ್ರೆ ಟೆನ್ಷನ್ ಮಾಡ್ಕೋಬೇಡಿ ಇಂದಿನ ಲೇಖನವನ್ನು ಸಂಪೂರ್ಣವಾಗಿ ಓದಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಿರಿ. ಚಳಿಗಾಲದಲ್ಲಿ ನಮ್ಮ ಚರ್ಮ ಒಡೆಯುವುದು ಡ್ರೈ ಆಗುವುದು ತುಂಬಾನೇ ಕಾಮನ್. ಆದರೆ ಈ ಚಳಿ ಸಮಯದಲ್ಲಿ ನಮ್ಮ ಚರ್ಮ ಕ್ಲೀನ್ ಆಗಿ ನೀಟ್ ಆಗಿ, ತೇವಾಂಶ ಇರುವಂತೆ ನೋಡಿಕೊಳ್ಳಬೇಕು ಎಂದರೆ ತುಂಬಾ ಸರಳವಾದ ಕ್ರೀಮ್ ಅನ್ನು ನಾವು ಮನೆಯಲ್ಲಿಯೇ ಮಾಡಬಹುದಾಗಿದ್ದು, ಆ ಕ್ರೀಮ್ ಅನ್ನು ಮಾಡುವ ವಿಧಾನ ತಿಳಿಯೋಣ ಬನ್ನಿ. ತುಂಬಾನೇ ಪರಿಣಾಮಕಾರಿಯಾಗಿರುವಂತ ಮನೆಯಲ್ಲಿಯೇ ಮಾಡಿರುವಂತಹ ಮಾಯಿಸ್ಟ ರೈಸರ್ ಕ್ರೀಮ್ ಅನ್ನು ಒಂದೆರಡು ಬಾರಿ ಹಚ್ಚಿಕೊಂಡರೆ ಸಾಕು ನಿಮ್ಮ ಚರ್ಮದ ಡ್ರೈ ನೆಸ್ ಸಂಪೂರ್ಣವಾಗಿ ಕಮ್ಮಿ ಆಗುತ್ತೆ. ಇದನ್ನು ಮಾಡಲು ನಮಗೆ ಬೇಕಾಗಿರುವುದು ತುಂಬಾ ಕಡಿಮೆ ಸಾಮಗ್ರಿಗಳು. ಮೊದಲನೆಯದು ಅಲೋವೆರಾ ಜೆಲ್. ಇದು 100% ಶುದ್ಧ ಮತ್ತು ಒಳ್ಳೆಯ ಕಂಪೆನಿಯದ್ದಾದರೆ ಒಳ್ಳೆಯದು. ಈ ಅಲೋವೆರಾ ಜೆಲ್ ಅನ್ನು ಒಂದು ಸ್ವಚ್ಛವಾಗಿರುವ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಸುಮಾರು ನಾಲ್ಕು ಚಮಚ ಗಳಷ್ಟು ಈ ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಿ. ಈ ಅಲೋವೆರಾ ಜೆಲ್ ಸನ್ ಟ್ಯಾನ್, ಸನ್ ಬರ್ನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಚರ್ಮದಲ್ಲಿನ ತೇವಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಬಿಳಿಯಾಗಿಸಿ, ಚರ್ಮವನ್ನು ನುಣುಪಾಗಿಸುತ್ತದೆ. ಹಾಗಾಗಿ ನ್ಯಾಚುರಲ್ ಪ್ಯೂರ್ ಆಗಿರೋ ಅಲೋವೆರಾ ಜೆಲ್ ಬಳಸಿದರೆ ಒಳ್ಳೆಯದು.
ಇದಕ್ಕೆ ಎರಡು ಚಮಚ ದಷ್ಟು ಪ್ಯೂರ್ ಆದ ಗ್ಲಿಸರಿನ್ ಅನ್ನು ಹಾಕಿ. ಈ ಗ್ಲಿಸರಿನ್ ಚರ್ಮವನ್ನು ನುಣುಪಾಗಿ ಮಿಂಚುವಂತೆ ಮಾಡಿ ಚರ್ಮ ವನ್ನ ಬಿಗಿಯಾಗಿಡಲು ಹಾಗೂ ಕಡಿಮೆ ವಯಸ್ಸಿನ ವರನಂತೆ ಕಾಣಲು ಸಹಾಯ ಮಾಡುತ್ತದೆ. ಮುಂದಿನದು ಬಾದಾಮಿ ಎಣ್ಣೆ. ಎರಡು ಚಮಚ ದಷ್ಟು ಬಾದಾಮಿ ಎಣ್ಣೆ ಒಂದು ವೇಳೆ ಇಲ್ಲದಿದ್ದರೆ, ಆಲಿವ್ ಎಣ್ಣೆಯನ್ನೂ ಸಹ ಬಳಸಬಹುದು. ಈ ಎಣ್ಣೆಗಳಲ್ಲಿ ಚರ್ಮದ ಆರೈಕೆ ಮಾಡಿ ಚರ್ಮದ ನೈಸರ್ಗಿಕವಾದ ತೇವಾಂಶವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಮೂರು ಕ್ಯಾಪ್ಸೂಲ್ ಅಷ್ಟು ವಿಟಮಿನ್ ಇ ಎಣ್ಣೆಯನ್ನು ಆ ಮಿಶ್ರಣಕ್ಕೆ ಸೇರಿಸಿ. ನಂತರ ಇದಕ್ಕೆ ವಿಟಮಿನ್ ಇ ಎಣ್ಣೆಯನ್ನು ಹಾಕಿ ಇದೂ ಸಹ ಚರ್ಮದ ಕಾಂತಿ ಹೆಚ್ಚಿಸಿ, ಮುಖ ಎದ್ದು ಕಾಣುವಂತೆ ಮಾಡುತ್ತದೆ. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನೀವು ಇದನ್ನು ನಿಧಾನವಾಗಿ ಮಿಕ್ಸ್ ಮಾಡುತ್ತಾ ಹೋದ ಹಾಗೆ ಅದು ಬಿಳಿ ಕ್ರೀಮ್ ತರಹ ಆಗುತ್ತಾ ಹೋಗುತ್ತದೆ. ಆಗ ಇದು ನಮ್ಮ ಚರ್ಮಕ್ಕೆ ಹಚ್ಚಿಕೊಳ್ಳಲು ಸಿದ್ಧ ಆದಂತೆ.
ಯಾರಿಗೆ ಡ್ರೈ ಸ್ಕಿನ್, ಒಡೆಯುವುದು, ಸುಕ್ಕು ಗಟ್ಟಿದ ಹಾಗೆ ಆಗಿದ್ದರೆ ಖಂಡಿತ ಈ ಕ್ರೀಮ್ ಅನ್ನು ಬಳಸಬಹುದು. ಇದರ ಫಲಿತಾಂಶ ಮಾತ್ರ ತುಂಬಾ ಪ್ರಯೋಜನಕಾರಿ ಹಾಗೂ ಒಳ್ಳೆಯದೇ ಆಗಿರುತ್ತದೆ. ಇದೂ ಸಹ ನೀವು ಯಾವುದೇ ಸೌಂದರ್ಯ ವರ್ಧಕ ಅಂಗಡಿಗಳಲ್ಲಿ ಸಿಗುವ ಕ್ರೀಮ್ ಗಿಂತ ಏನೂ ಕಡಿಮೆ ಇರುವುದಿಲ್ಲ. ಇದರ ಪರಿಮಳ ಸಹಿತ ತುಂಬಾ ಚೆನ್ನಾಗಿರುತ್ತದೆ, ಮನಸ್ಸಿಗೆ ಇಷ್ಟವಾಗುವಂತೆ ಇರುತ್ತದೆ. ಇದನ್ನು ಸ್ನಾನ ಮಾಡಿದ ನಂತರ ಪೂರ್ತಿ ಮೈಗೆ ಇದನ್ನು ಹಚ್ಚಬಹುದು. ನೀವು ಇದನ್ನು ಎರಡು ಬಾರಿ ಹಚ್ಚಿದರೆ ಸಾಕು ಇದರ ಉತ್ತಮ ಫಲಿತಾಂಶ ಕಾಣಲು ಶುರು ಮಾಡ್ತೀರಾ. ಎಷ್ಟೇ ಸ್ಕಿನ್ ಡ್ರೈ ಇದ್ರೂ ಈ ಕ್ರೀಮ್ ಅದನ್ನು ಗುಣಪಡಿಸಿ ಸ್ಕಿನ್ ನ ತೇವಾಂಶ ಹಾರಿ ಹೋಗದ ಹಾಗೆ ಕಾಪಾಡುತ್ತದೆ. ಹಾಗೆ ಬಿಸಿಲಿನಿಂದ ನಮ್ಮ ಚರ್ಮವನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ, ಅಂಗಡಿಯಲ್ಲಿ ಸಿಗುವ ದುಬಾರಿ ಕ್ರೀಮ್ ಬದಲು ಮನೆಯಲ್ಲಿಯೇ ಅತಿ ಕಡಿಮೆ ದರದಲ್ಲಿ ಸ್ವತಃ ನೀವೇ ನಿಮ್ಮ ಕೈ ಇಂದಲೇ ಕ್ರೀಮ್ ತಯಾರಿಸಿ ಉತ್ತಮ ಪ್ರಯೋಜನ ಪಡೆದು ನಳನಳಿಸುವ ಚರ್ಮವನ್ನು ಪಡೆಯಿರಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.