ಸಾಕಷ್ಟು ಜನರು ದಿನಕ್ಕೆ ಮೂರರಿಂದ ಐದು ಬಾರಿ ಟೀಯನ್ನು ಕೂಡಿಯುತ್ತಾ ಇರುತ್ತಾರೆ. ಆದರೆ ಕೆಲವೊಂದು ಇಷ್ಟು ಜನರು ಮಾಡಿರುವಂತಹ ಟೀಯನ್ನು ಮತ್ತೆ ಬಿಸಿ ಮಾಡುವಂತಹ ಅಭ್ಯಾಸವನ್ನು ಹೊಂದಿರುತ್ತಾರೆ, ಟೀ ಮಾಡುವುದಕ್ಕೂ ಕೂಡ ಬೇಜಾರು ಮಾಡಿಕೊಂಡು ಒಂದೇ ಸಲ ಟೀ ಮಾಡಿ ಇಟ್ಟುಕೊಂಡು ಅದನ್ನು ಪದೇ ಪದೇ ಬಿಸಿ ಮಾಡಿ ಕುಡಿಯುತ್ತಾ ಇರುತ್ತಾರೆ ಈ ರೀತಿ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯಾದಂತಹ ಪರಿಣಾಮಗಳು ಆಗುತ್ತವೆ ಎಷ್ಟು ಗಂಟೆಗಳ ಕಾಲ ನಾವು ಬಿಸಿ ಮಾಡಿ ಕುಡಿಯಬಹುದು ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ಕೊಡುತ್ತೇವೆ.
ನೀವೇನಾದರೂ ಒಮ್ಮೆ ಬಿಸಿ ಮಾಡಿರುವಂತಹ ಚಹಾ ವನ್ನು ಮತ್ತೆ ನಾಲ್ಕು ಗಂಟೆಗಳ ಕಾಲ ಬಿಸಿ ಮಾಡಿ ಕುಡಿದರೆ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ಆಗಿರುತ್ತದೆ. ಹಾಗಾಗಿ ಒಮ್ಮೆ ಬಿಸಿ ಮಾಡಿರುವಂತಹ ಚಹಾ ವನ್ನು ಮತ್ತೆ ನಾಲ್ಕು ಗಂಟೆಗಳ ಕಾಲ ಬಿಟ್ಟು ನಂತರ ಬಿಸಿ ಮಾಡಿ ಕುಡಿಯುವ ಅಭ್ಯಾಸ ನಿಮಗೇನಾದರೂ ಇದ್ದರೆ ಅದನ್ನು ನೀವು ತಕ್ಷಣ ನಿಲ್ಲಿಸಿ.
ಯಾಕೆಂದರೆ ಇದರಲ್ಲಿ ಸೂಕ್ಷ್ಮನು ಜೀವಿಗಳು ಉಗಮವಾಗಿರುತ್ತವೆ. ಇಂಥ ಸೂಕ್ಷ್ಮಾಣು ಜೀವಿಗಳು ಇರುವುದರಿಂದ ನಿಮ್ಮ ಆರೋಗ್ಯಕ್ಕೂ ಕೂಡ ಹಾನಿಯಾಗುತ್ತದೆ ಕೆಲವೊಂದು ಬಾರಿ ಹೊಟ್ಟೆ ಸಮಸ್ಯೆ ಅತಿಸಾರ ವಾಕರಿಕೆ ಮುಂತಾದ ಸಮಸ್ಯೆಗಳು ಕೂಡ ಕಾಡುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆಗೂ ಕೂಡ ಸಮಸ್ಯೆಯಾಗುತ್ತದೆ. ಹಾಲು ಮತ್ತು ಸಕ್ಕರೆಯ ಮಿಶ್ರಣದಲ್ಲಿ ತಯಾರಿಸಲಾದ ಚಹಾವು ಅಧಿಕ ಬ್ಯಾಕ್ಟೀರಿಯಾ ಮತ್ತು ವಿಷಕಾರಿ ಅಂಶವು ವೇಗದಲ್ಲಿ ಉತ್ಪತ್ತಿಯಾಗಿರುತ್ತದೆ.
ಅದೇ ರೀತಿ ಗಿಡಮೂಲಿಕೆ ಅಥವಾ ಯಾವುದಾದರು ಹಣ್ಣುಗಳಿಂದ ತಯಾರಿಸಲಾದ ಚಹಾವನ್ನು ಪುನಃ ಪುನಃ ಕಾಯಿಸುವುದರಿಂದ ಸಾಕಷ್ಟು ಆರೋಗ್ಯಕರ ಗುಣಗಳು ನಾಶವಾಗುತ್ತವೆ.ಹಾಗಾಗಿ ಒಮ್ಮೆ ಬಿಸಿ ಮಾಡಿರುವಂತಹ ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಲು ಹೋಗಬೇಡಿ. ಮತ್ತೆ ಆದಷ್ಟು ಟೀ ಯನ್ನು ಫ್ರೆಶ್ ಆಗಿ ಕುಡಿಯಿರಿ.
ಇದು ಬಹಳಷ್ಟು ಸಮಯ ಬಿಡುವುದರಿಂದ ಟಿ ಯಲ್ಲಿ ಕಹಿ ಆಗುತ್ತದೆ ಮತ್ತು ಇದರ ರುಚಿ ಮತ್ತು ವಾಸನೆ ಬದಲಾಗುತ್ತದೆ ಹಾಗಾಗಿ ಟೀಯನ್ನು ಆಗಿದ್ದು ಆಗಲೇ ಮಾಡಿ ಕುಡಿಯುವುದು ಒಳ್ಳೆಯದು. ಎಷ್ಟು ಸಮಯದವರೆಗೆ ನೀವು ಮತ್ತೆ ಬಿಸಿ ಮಾಡಿ ಕುಡಿಬಹುದು ಎಂದರೆ ಒಮ್ಮೆ ನೀವು ಟೀ ಮಾಡಿದ 15 ನಿಮಿಷಗಳ ನಂತರ ಮತ್ತೆ ಬಿಸಿ ಮಾಡಿ ಕುಡಿಯಬಹುದು ಆಗ ಇದು ಅಷ್ಟೊಂದೇನು ವಿಷಕಾರಿಯಾಗು ಇರುವುದಿಲ್ಲ.