WhatsApp Group Join Now

ಸದಾ ಕೈಯಲ್ಲಿ ಮೊಬೈಲ್ ಹಿಡಿದೋ ಅಥವಾ ಟಿವಿ ಮುಂದು ಕುಳಿತೋ ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಿ, ಆಡಲು ಉತ್ತೇಜಿಸಿ. ಅವರು ಬಾಲ್ಯದಲ್ಲಿ ಆಡಲಿಲ್ಲವೆಂದರೆ ದೊಡ್ಡವರಾದ ಮೇಲೆ ನೂರಾರು ಕಾಯಿಲೆಗಳು ಬರುವುದು ಗ್ಯಾರಂಟಿ ಎಂದು ಸಂಶೋಧನೆಗಳು ದೃಢಪಡಿಸಿವೆ. ಸಂಶೋಧನೆಗಳು ಬಾಲ್ಯ ಬಹಳ ಸ್ಟ್ರೆಸ್‌ನಿಂದ ಕೂಡಿದ್ದರೆ ದೊಡ್ಡವರಾದ್ಮೇಲೆ ಒಬೇಸಿಟಿ ಬರುವ ಸಾಧ್ಯತೆ ಅಧಿಕ, ಎಂದು ಸಾಬೀತಪಡಿಸಿವೆ.

ಇತ್ತೀಚೆಗೆ ಅಮೆರಿಕಾದಲ್ಲಿ ಬೊಜ್ಜಿನ ಸಮಸ್ಯೆಯಿಂದ ನರಳುತ್ತಿರುವವರ ಕುರಿತು ಮಹತ್ವದ ಸಮೀಕ್ಷೆಯೊಂದು ನಡೆಯಿತು. ಅದರಲ್ಲಿ ಬೊಜ್ಜಿರುವ ಹೆಚ್ಚಿನ ವಯಸ್ಕರ ಬಾಲ್ಯ ಕಹಿಯಾಗಿರುವುದು ಸಾಬೀತಾಗಿದೆ. ಹೆತ್ತವರ ಡಿವೋರ್ಸ್, ಪನಿಶ್‌ಮೆಂಟ್ ಭೀತಿ, ಮಾದಕ ವ್ಯಸನದಂಥ ಸಮಸ್ಯೆಗಳಿದ್ದವರು ಕೊನೆಯತನಕವೂ ಸಂತೋಷವನ್ನು ಕಂಡುಕೊಳ್ಳಲು ವಿಫಲ ಯತ್ನ ನಡೆಸುತ್ತಾರೆ, ಆದರೆ ಅದು ಅವರ ಕೈಗೆಟಕುವುದಿಲ್ಲ. ಹಾಗಾಗಿ ನಿಮ್ಮ ಮಗುವಿನ ಮೇಲೆ ಒತ್ತಡ ಹೇರಬೇಡಿ.

ಅದು ಹಾಯಾಗಿ ಆರಾಮವಾಗಿ ಬದುಕುವಂತೆ ಮಾಡಿ. ತಪ್ಪಿಯೂ ಕೂತು ಆಡುವ ಅಭ್ಯಾಸ ಮಾಡಿಸಬೇಡಿ. ಮಗು ಓಡಾಡಲಿ, ಹೊರಗೆ ಆಟವಾಡಲಿ, ಖುಷಿ ಖುಷಿಯಾಗಿರಲಿ.

WhatsApp Group Join Now

Leave a Reply

Your email address will not be published. Required fields are marked *