ನಮಸ್ತೆ ಪ್ರಿಯ ಓದುಗರೇ, ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಕೂದಲು ಉದ್ದವಾಗಿ ಕಪ್ಪಾಗಿ ಇರುವುದು ತುಂಬಾನೇ ವಿರಳ ಆಗಿ ಬಿಟ್ಟಿದೆ. ಮೊದಲೆಲ್ಲಾ ನಮ್ಮ ಪೂರ್ವಜರಿಗೆ 45-50 ವರ್ಷಗಳಿಗೆ ಕೂದಲು ಬೆಳ್ಳಗೆ ಆಗಲು ಶುರುವಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಆಗುವ ಹಾರ್ಮೋನ್ ಗಳ ವ್ಯತ್ಯಾಸದಿಂದ ಕೇವಲ 15 ವರ್ಷಗಳಿಗೆ ಕೂದಲು ಬೆಳ್ಳಗೆ ಆಗಲು ಅಥವಾ ನೆರೆ ಕೂದಲಿನ ಸಮಸ್ಯೆ ಶುರು ಆಗುತ್ತದೆ. ಇದನ್ನು ತಡೆಯಲು ಇವತ್ತಿನ ಲೇಖನದಲ್ಲಿ ಒಂದು ಅದ್ಭುತವಾದ ಮನೇಮದ್ದನ್ನು ತಿಳಿಯೋಣ ಸ್ನೇಹಿತರೆ. ಇದು ಒಂದು ರೀತಿಯ ಲೇಪನ ಆಗಿದ್ದು, ಇದನ್ನು ತಲೆಯ ಬುಡಕ್ಕೆ ಮತ್ತು ಕೂದಲಿಗೆ ಹಚ್ಚಿ ಸ್ನಾನ ಮಾಡುವಂಥದ್ದು. ಬನ್ನಿ ಈ ಲೇಪನ ಮಾಡಲು ಬೇಕಾದ ಸಾಮಗ್ರಿಗಳನ್ನು ನೋಡೋಣ. ಮೊದಲನೆಯದಾಗಿ ಆಮ್ಲ ಪುಡಿ. ಆಮ್ಲ ಅಂದರೆ ಬೆಟ್ಟದ ನೆಲ್ಲಿಕಾಯಿಯನ್ನು ಒಣಗಿಸಿ ಪುಡಿ ಮಾಡಿರುವಂಥದ್ದು. ಬೆಟ್ಟದ ನೆಲ್ಲಿಕಾಯಿ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದ್ದೇ ಇದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಕೂದಲು ಒತ್ತಾಗಿ ಬೆಳೆಯಲು, ಹೊಸ ಕೂದಲು ಚಿಗುರಲು ಮತ್ತು ಕಪ್ಪಾಗಿ, ದಟ್ಟವಾಗಿ ಬೆಳೆಯಲು ಸಹಕರಿಸುತ್ತದೆ.
ಏರೆಡನೆಯದು ಟೀ ಪುಡಿ. ಟೀ ಪುಡಿ ಕೂದಲು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ತಲೆ ಚರ್ಮದಲ್ಲಿ ಯಾವುದೇ ಇನ್ಫೆಕ್ಷನ್ ಇದ್ದರೆ ಅದನ್ನು ಕಡಿಮೆ ಮಾಡುತ್ತದೆ. ಹಾಗೂ ಮೂರನೆಯದು ಮೆಹಂದಿ ಪುಡಿ. ನಮಗೆಲ್ಲ ತಿಳಿದಿರುವಂತೆ ಮೆಹಂದಿ ಕೂದಲಿನ ಅನೇಕ ರೀತಿಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಹಾಗೂ ಕೂದಲು ಕಂಡೀಷನ್ ಅಲ್ಲಿರಲು ಸಹಕರಿಸುತ್ತದೆ. ಕೆಲವೊಬ್ಬರಿಗೆ ಮೆಹಂದಿ ಪುಡಿ ಬಳಸಿದರೆ ಕೂದಲು ಕೆಂಪಾಗುವುದು ಅನ್ನೋ ನಂಬಿಕೆ ಇದೆ. ಆದರೆ ಇಲ್ಲಿ ನಾವು ಮೆಹಂದಿ ಪುಡಿಯ ಜೊತೆಗೆ ಟೀ ಡಿಕಾಕ್ಷನ್, ಆಮ್ಲ ಪುಡಿ ಬಳಸುತ್ತಾ ಇರುವುದರಿಂದ ಇವೆಲ್ಲವೂ ಸೇರಿ ಕಪ್ಪು ಬಣ್ಣವನ್ನೂ ಕೊಡುತ್ತಾ ಬರುತ್ತವೆ. ಈ ಲೇಪನ ಮಾಡುವ ವಿಧಾನ ನೋಡೋಣ. ಮೊದಲು ಒಂದು ಕಪ್ ನೀರನ್ನು ಬಿಸಿಗಿಟ್ಟು ಅದಕ್ಕೆ ಒಂದು ಟೀ ಚಮಚ ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಿ, ನಂತರ ಗ್ಯಾಸ್ ಆಫ್ ಮಾಡಿ ಅದಕ್ಕೆ ತಲಾ ಒಂದೊಂದು ಚಮಚ ಮೆಹಂದಿ ಪುಡಿ ಮತ್ತು ಆಮ್ಲ ಪುಡಿ ಏರೆಡನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಾಳೆ ತಲೆ ತೊಳೆಯುತ್ತೇವೆ ಅಂದರೆ ಇಂದಿನ ದಿನ ರಾತ್ರಿ ಈ ಮಿಶ್ರಣ ಮಾಡಿ ಇಟ್ಟು, ನೆಕ್ಸ್ಟ್ ಡೇ ಸ್ನಾನ ಮಾಡುವ ಮೊದಲು ತಲೆ ಬುಡ ಮತ್ತು ಎಲ್ಲಾ ಕೂದಲ ತುದಿಯವರೆಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆಯ ನಂತರ ತಲೆ ತೊಳೆದುಕೊಳ್ಳಿ.
ಗಮನವಿಟ್ಟು ಕೇಳಿ, ಈ ಮಿಶ್ರಣ ಕಡಿಮೆ ಅಂದರೂ 4-5 ತಾಸು ಚೆನ್ನಾಗಿ ನೆನೆಯಬೇಕು. ಹಾಗಾದರೆ ಮಾತ್ರ ಇದರ ಒಳ್ಳೆಯ ಫಲತಾಂಶ ಸಿಗುವುದು. ಇದನ್ನು ಮೊದಲು ವಾರದಲ್ಲಿ ಎರೆಡು ಬಾರಿ, ಒಂದು ತಿಂಗಳ ನಂತರ ವಾರಕ್ಕೆ ಒಮ್ಮೆಯಂತೆ ಹಚ್ಚುತ್ತಾ ಬಂದರೆ ಚಿಕ್ಕ ವಯಸ್ಸಿಗೇ ಬರುವ ನೆರೆ ಕೂದಲಿನ ಸಮಸ್ಯೆ ಕಡಿಮೆ ಆಗುತ್ತದೆ. ಮುಖ್ಯವಾಗಿ ಈ ಕಾಲ ಚಳಿಗಾಲ ಈ ಕಾಲದಲ್ಲಿ ಬೆಟ್ಟದ ನೆಲ್ಲಿಕಾಯಿ ಹೇರಳವಾಗಿ ಸಿಗುತ್ತವೆ. ಈ ಬೆಟ್ಟದ ನೆಲ್ಲಿಕಾಯಿ ತಿರುಳನ್ನು ತೆಗೆದು ಅದನ್ನಷ್ಟೇ ಮಿಕ್ಸಿ ಮಾಡಿ ಜ್ಯೂಸ್ ಮಾಡಿ ಕುಡಿಯುವುದರಿಂದ ಹೊಸ ಕೂದಲು ಬೆಳೆಯುವುದರ ಜೊತೆಗೆ ಒತ್ತಾಗಿ, ದಪ್ಪವಾಗಿ, ಉದ್ದವಾಗಿ ಕಾಣುವುವು. ಈ ಕರೋನ ಸಮಯದಲ್ಲಿ ಈ ಬೆಟ್ಟದ ನೆಲ್ಲಿಕಾಯಿ ಹೇರಳವಾಗಿ ಬಳಸುವುದರಿಂದ ದೇಹಕ್ಕೆ ಬೇಕಾದ ಶಕ್ತಿ, ರೋಗ ನಿರೋಧಕ ಶಕ್ತಿ, ಹಾಗೂ ಇಮ್ಮ್ಯೂನಿಟಿ ಕೊಡುತ್ತದೆ. ಇದನ್ನು ಬಳಸಿ ಕರೋನದಿಂದ ದೂರವಿರಿ. ಶುಭದಿನ.