ಜೀರ್ಣಕ್ರಿಯೆ ಸಮಸ್ಯೆಗೆ ಮತ್ತು ಗ್ಯಾಸ್ಟಿಕ್ ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆಗೆ ಒಂದು ಮನೆಮದ್ದು ಮಾಡುವುದನ್ನು ತಿಳಿಸುತ್ತೇನೆ ಬನ್ನಿ. ಸ್ನೇಹಿತರೆ ಈ ರೀತಿ ಸಮಸ್ಯೆಗಳು ಏಕೆ ಬರುತ್ತದೆ ಎಂಬುದನ್ನು ನಾವು ಮೊದಲು ನಾವು ತಿಳಿದುಕೊಳ್ಳಬೇಕು ನಾವು ತಿಂದ ಆಹಾರ ಸರಿಯಾಗಿ ಜೀರ್ಣಕ್ರಿಯೆ ಆಗಲಿಲ್ಲ ಅಂದರೆ ನಮಗೆ ಗ್ಯಾಸ್ಟಿಕ್ ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹಾಗೂ ನಾವು ಪ್ರತಿನಿತ್ಯ ಅತಿ ಹೆಚ್ಚಾಗಿ ನೀರನ್ನು ಸೇವನೆ ಮಾಡಲಿಲ್ಲ ಅಂದರೂ ಕೂಡ ನಮಗೆ ಈ ರೀತಿ ಸಮಸ್ಯೆ ಬರುತ್ತದೆ.ಪ್ರತಿನಿತ್ಯ ವಾಕಿಂಗ್ ಮತ್ತು ವ್ಯಾಯಾಮ ಮಾಡಬೇಕು
ಇಲ್ಲವಾದರೆ ಇಂತಹ ಸಮಸ್ಯೆಗಳು ಬರುತ್ತದೆ ಹಾಗೂ ಹೆಚ್ಚಾಗಿ ಒಳ್ಳೆಯ ಪ್ರೊಟೀನ್ ಇರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಮತ್ತು ಹೊರಗಡೆ ಸಿಗುವಂತಹ ಅಂದರೆ ಗೋಬಿ ನೂಡಲ್ಸ್ ಮತ್ತು ಬರ್ಗರ್ ಇಂತಹ ಪದಾರ್ಥಗಳನ್ನು ತಿನ್ನಬಾರದು ಇದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತದೆ .ಕೇವಲ ಬರಿ ಮೂರು ಪದಾರ್ಥ ಇದ್ದರೆ ಸಾಕು ಅದ್ಭುತವಾಗಿ ಈ ಮನೆಮದ್ದನ್ನು ಮಾಡಬಹುದು ಬೇಕಾಗಿರುವಂತಹ ಸಾಮಾಗ್ರಿಗಳು ಜೀರಿಗೆ ಸೋಂಪು ಮತ್ತು ಅಜ್ವಾನ ಎಲ್ಲ ಪದಾರ್ಥಗಳಲ್ಲಿ ಒಳ್ಳೆಯ ಪ್ರೊಟೀನ್ ಮತ್ತು ವಿಟಮಿನ್ ಇರುತ್ತದೆ.
ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಅತಿಬೇಗನೆ ನಿವಾರಣೆಯಾಗುತ್ತದೆ.ಮೊದಲಿಗೆ ಸೋಂಪು ಅಜ್ವಾನ ಜೀರಿಗೆ ಎಲ್ಲವನ್ನು ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು ನಂತರ ಒಂದು ಲೋಟ ಬಿಸಿ ನೀರಿಗೆ 1 ಚಮಚ ಈ ಪುಡಿಯನ್ನು ಹಾಕಿ ಸೇವನೆ ಮಾಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ.ಯಾವುದೇ ಸೈಡ್ ಎಫೆಕ್ಟ್ ಇದರಿಂದ ಆಗೋದಿಲ್ಲ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.