WhatsApp Group Join Now

ನಮಸ್ತೆ ಪ್ರಿಯ ಓದುಗರೇ, “ಜೋಳವನು ತಿಂದವನು ತೋಳದಂತಿರುವನು” ಹೌದು ಸ್ನೇಹಿತರೇ ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಧ್ಯಾನ್ಯವೆಂದರೆ ಅದು ಜೋಳವೇ ಆಗಿದೆ. ಈ ಜೋಳದಲ್ಲಿ ಅಧಿಕ ಕಬ್ಬಿಣಾಂಶ, ಜಿಂಕ್, ವಿಟಮಿನ್ ಬಿ3 ಮುಂತಾದ ವಿಟಮಿನ್, ಮಿನರಲ್‍ಗಳು ಮತ್ತು ಅನೇಕನೇಕ ಪೋಷಕಾಂಶಗಳನ್ನು ಹೊಂದಿರುವುದರಿಂದ ಅವು ದೇಹದ ಮೂಳೆಗಳ ಆರೋಗ್ಯಕ್ಕೂ ಅತ್ಯುತ್ತಮವಾಗಿವೆ. ಅದಕ್ಕಾಗಿ ಅಲ್ಲವೇ ನಮ್ಮ ಪೂರ್ವಜರು ಜೋಳದ ರೊಟ್ಟಿಯನ್ನೇ ತಿಂದು ಜೀವನ ಪೂರ್ತಿ ಗಟ್ಟಿಮುಟ್ಟಾಗಿರುತ್ತಿದ್ದರು. ಅವರ ಗಟ್ಟಿತನದ ಗುಟ್ಟೇ ಜೋಳದ ರೊಟ್ಟಿ, ಜೋಳದ ಅಂಬಲಿಯಾಗಿತ್ತು. ಜೋಳ ನಮ್ಮ ಉತ್ತರ ಕರ್ನಾಟಕ ಮನೆಮಂದಿಯ ನಿತ್ಯಸಂಜೀವಿನಿಯಾಗಿದೆ. ಪ್ರತಿದಿನದ ಆಹಾರದ ಅವಿಭಾಜ್ಯ ಅಂಗವೇ ಜೋಳದ ರೊಟ್ಟಿ. ಜೋಳದ ಮೇಲಿನ ಅವರ ಪ್ರೀತಿ ಎಷ್ಟಿತ್ತೆಂದರೆ ದಿನದ ಮೂರೊತ್ತು ಜೋಳದ ರೊಟ್ಟಿನೇ ತಿನ್ನುವ ನಮ್ಮ ಹಳೇ ಮಂದಿ, ಎಲ್ಲೋದರೂ ಜೋಳದ ರೊಟ್ಟಿಯನ್ನಂತೂ ಬಿಟ್ಟಿರಲಾರರು.

ಆದರೆ ಈ ಫಾಸ್ಟ್ ಫುಡ್ ಯುಗದಲ್ಲಿ ರೊಟ್ಟಿ ತಿನ್ನುವವರೇ ಕಡಿಮೆಯಾಗಿದ್ದರು. ಜೋಳದ ಬೆಳೆ ಕಡಿಮೆ ಇದ್ದರೂ ಬೇರೆಲ್ಲೆಡೆಯ ಮಾರ್ಕೆಟ್ ಗಳಲ್ಲೂ ಲಭ್ಯವಿದೆ. ಬೇರೆಲ್ಲ ಧಾನ್ಯಗಳಿಗೆ ಹೋಲಿಕೆ ಮಾಡಿದಾಗ ಇದರ ಬೆಲೆ ಅಷ್ಟೇನಿಲ್ಲ, ಅನಿಸುತ್ತದೆ. ರಾಸಾಯನಿಕದ ಅವಶ್ಯಕತೆಯೇ ಇಲ್ಲದೇ ಬೆಳೆದ ಅತ್ಯಂತ ಶುದ್ಧವಾದ ಎಲ್ಲಾ ವಾತವರಣ ಸ್ನೇಹಿ ಧಾನ್ಯವೆಂದರೆ ಅದು ಬಿಳಿಜೋಳ, ಮಾಲದಂಡಿ ಜೋಳ, ಜವಾರಿ ಜೋಳಕ್ಕೆ ಹೋಲಿಸಿದರೆ ಹೈಬ್ರೇಡ್ ಜೋಳದ ಧರ ಅರ್ಥಕರ್ಥ ಕಡಿಮೆಯೇ ಇರುತ್ತದೆ. ಆದರೆ ಹೈಬ್ರೇಡ್ ಜೋಳಕ್ಕೆ ಸ್ವಲ್ಪಪ್ರಮಾಣದ ರಾಸಾಯನಿಕದ ಬಳಕೆಯಾಗಿರುತ್ತದೆ. ಮತ್ತು ಜವಾರಿ ಜೋಳದಷ್ಟು ರುಚಿಕರವೂ ಆಗಿರುವುದಿಲ್ಲ. ಜವಾರಿ ಜೋಳ ತಿಂದ ನಮ್ಮ ಜವಾರಿ ಮಂದಿ ತೋಳದಂಗ ನೂರ್ ವರ್ಷ ಬಾಳಿ ಬದುಕಿದರು. ಫಾಸ್ಟ್ ಫುಡ್ ಗೆ ಮರುಳಾದ ನಾವು ಇವುಗಳನ್ನು ಮರೆತು ಸಕ್ಕರೆ, ಮೈದ ಹಿಟ್ಟಿನ ಹಿಂದೆ ಬಿದ್ದು ನಾನಾ ಕಾಯಿಲೆಗಳಿಗೆ ಕರೆಯೋಲೆ ಕೊಟ್ಟಿದ್ದೇವೆ. ಗೋದಿಗೆ ಹೋಲಿಕೆ ಮಾಡಿದರೆ ನಮ್ಮ ಜೋಳ 1000ಪಟ್ಟು ಉತ್ತಮವಾಗಿದೆ ಇದು ವಾತಾವರಣ ಸ್ನೇಹಿಯೂ ಹೌದು, ಜೀರ್ಣಕ್ರಿಯೆಗೆ ಅತ್ಯಂತ ಉಪಯುಕ್ತವಾಗಿದೆ. ಸಕ್ಕರೆ ಕಾಯಿಲೆ ಇರುವವರಿಗೆ ಮತ್ತು ಅದನ್ನು ಬಾರದಂತೆ ತಡೆಯಬಲ್ಲ ಶಕ್ತಿ ನಮ್ಮ ಜವಾರಿ ಜೋಳಕ್ಕೆ ಮಾತ್ರ ಇದೆ. ಇದು ಉತ್ತಮ ನಾರಿನಂಶ ಹೊಂದಿದೆ. ಜೋಳ ಅಂಟು ಮುಕ್ತ (ಗ್ಲುಟೆನ್ ಫ್ರೀ) ಧಾನ್ಯ.

ಜೋಳ ಅತ್ಯಧಿಕ ಫೈಬರ್ ಹೊಂದಿದೆ. ಜೋಳವನ್ನು ಆಹಾರವಾಗಿ ಸೇವಿಸುವುದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿ ಮತ್ತು ದೇಹದ ಆರೋಗ್ಯಕ್ಕೂ ಉತ್ತಮ. ಜೋಳದ ರೊಟ್ಟಿ ಅಂಬಲಿ ಪ್ರತಿದಿನ ಸೇವಿಸಿದರೆ, ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೋಳದ ಆಹಾರಗಳ ಸೇವನೆ ದೇಹದ ಸಾಮರ್ಥ್ಯವನ್ನು ಹೆಚ್ಚುತ್ತದೆ. ಮುಪ್ಪಿನ ವಯಸ್ಸಿನಲ್ಲೂ ಶಕ್ತಿ ಕಾಪಾಡಬಲ್ಲ ಗುಣ ನಮ್ಮ ಜೋಳದಲ್ಲಿದೆ. ಜೋಳ ಇದೊಂದು ಅತ್ಯಂತ ಆರೋಗ್ಯಕರ ನೈಸರ್ಗಿಕ ದೇವರ ವರವೇ ಆಗಿದೆ. ಬನ್ನಿ ಸ್ನೇಹಿತರೇ ನಮ್ಮ ಭಾಗದ ರೈತರು ಬೆಳೆದ ಜೋಳವನ್ನೇ ಸೇವಿಸೋಣ, ಆರೋಗ್ಯಕರವಾಗಿ ಬದುಕೋಣ. ಶುಭದಿನ.

 

WhatsApp Group Join Now

Leave a Reply

Your email address will not be published. Required fields are marked *