ನಮಸ್ತೇ ಪ್ರಿಯ ಓದುಗರೇ, ಸಾಮಾನ್ಯವಾಗಿ ಬೆಳ್ಳಗೆ ಇರುವ ಜನರನ್ನು ನೋಡಿದರೆ ದೊಡ್ಡವರು ನೀವು ಎಷ್ಟು ಕೆಂಪು ಕೆಂಪಾಗಿ ಗುಂಡಗೆ ಟೊಮ್ಯಾಟೋ ಹಣ್ಣಿನ ಹಾಗೆ ಇದ್ದೀಯಾ ಅಂತ ಹೊಗಳುತ್ತಾರೆ. ಹೌದು ಟೊಮ್ಯಾಟೋ ಅಂದರೆ ನಮಗೆ ನೆನಪಿಗೆ ಬರುವುದು ಅದರ ಕೆಂಪು ಬಣ್ಣ. ಹಾಗೂ ಅಡುಗೆಯಲ್ಲಿ ಕೂಡ ಟೊಮ್ಯಾಟೋ ಹಣ್ಣನ್ನು ತಪ್ಪದೇ ಬಳಸುತ್ತೇವೆ. ಟೊಮ್ಯಾಟೋ ಹುಳಿ ಮತ್ತು ಸಿಹಿ ಮಿಶ್ರಣ ಇರುವುದರಿಂದ ಇದನ್ನು ಅಡುಗೆಯ ರುಚಿ ಹೆಚ್ಚಿಸಲು ಉಪಯೋಗಿಸುತ್ತೇವೆ. ಹೌದು ಈರುಳ್ಳಿಯನ್ನು ಬಿಟ್ಟರೆ ಜನರು ಹೆಚ್ಚು ಇಷ್ಟ ಪಟ್ಟು ಖರೀದಿ ಮಾಡುವ ಪದಾರ್ಥ ಅಂದರೆ ಅದು ಟೊಮ್ಯಾಟೋ ಹಣ್ಣು. ಆರೋಗ್ಯಕ್ಕೆ ಒಳ್ಳೆಯದೇನೋ ನಿಜ ಆದರೆ ಇದನ್ನು ಅತಿಯಾಗಿ ಹಾಗೂ ಅನಾರೋಗ್ಯದ ಸಮಸ್ಯೆಗಳು ಇರುವವರು ಇದರಿಂದ ಖಂಡಿತವಾಗಿ ದೂರವಿರಬೇಕು. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾರು ಟೊಮ್ಯಾಟೋ ಹಣ್ಣು ತಿನ್ನಬಾರದು ತಿಂದರೆ ಏನಾಗುತ್ತದೆ ಅಂತ ತಿಳಿಯೋಣ. ಮೊದಲಿಗೆ ಯಾರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇರುತ್ತದೆಯೋ ಹಾಗೂ ಹೃದ್ರೋಗದ ಸಮಸ್ಯೆಗಳು ಇರುತ್ತವೆಯೊ ಅಂಥವರು ಟೊಮ್ಯಾಟೋ ಹಣ್ಣು ಸೇವನೆ ಮಾಡಬಾರದು. ಏಕೆಂದರೆ ಟೊಮ್ಯಾಟೋ ಹುಳಿ ಮತ್ತು ಸಿಹಿ ಮಿಶ್ರಣ ಹೊಂದಿರುವ ಕಾರಣ ಹಾಗೂ ಇದರಲ್ಲಿ ಸಿಟ್ರಿಕ್ ಆಸಿಡ್ ಹೇರಳವಾಗಿ ಇರುವ ಕಾರಣ ಇದು ಗ್ಯಾಸ್ಟ್ರಿಕ್ ಹಾಗೂ ಎದೆ ಉರಿ ಸಮಸ್ಯೆಯನ್ನು ತಂದೊಡ್ಡುತ್ತದೆ.
ಎದೆ ಉರಿ ಇರುವ ಜನರು ಟೊಮ್ಯಾಟೋ ಹಣ್ಣಿನಿಂದ ದೂರವಿರುವುದು ತುಂಬಾನೇ ಒಳ್ಳೆಯದು.

ಆದ್ದರಿಂದ ಇಂತಹ ಅನುಭವ ನಿಮಗೂ ಆಗುತ್ತಿದ್ದರೆ ಟೊಮ್ಯಾಟೋ ಹಣ್ಣು ಮಿತವಾಗಿ ಬಳಕೆ ಮಾಡಿ. ಟೊಮ್ಯಾಟೋ ಹಣ್ಣು ಎಲ್ಲರಿಗೂ ಆಗಿ ಬರುವುದಿಲ್ಲ. ಕೆಲವು ಜನರಿಗೆ ತುರಿಕೆ ಹಾಗೂ ಚರ್ಮದ ಸೋಂಕು ಸಮಸ್ಯೆಗಳು ಕಾಡುತ್ತಿರುತ್ತವೆ. ಇನ್ನೂ ನೀವು ಟೊಮ್ಯಾಟೋ ಹಣ್ಣು ಸೇವನೆ ಮಾಡಿದ ಮೇಲೆ ಯಾರಿಗೆ ಮುಖದ ಮೇಲೆ ಸುಕ್ಕು ಗಟ್ಟುವುದು ಹಾಗೂ ಬಾಯಿ ಮುಖ ಊದಿ ಕೊಳ್ಳುತ್ತದೆಯೋ ಹಾಗೂ ಸೀನು ಹೆಚ್ಚಾಗಿ ಬರುತ್ತದೆ ಮತ್ತು ಗಂಟಲು ಕೆರೆತ ಯಾರಿಗೆ ಆಗುತ್ತದೆಯೋ ಅಂಥವರು ಟೊಮ್ಯಾಟೋ ಹಣ್ಣು ಸೇವನೆ ಮಾಡಬಾರದು. ಇನ್ನೂ ಈ ಟೊಮ್ಯಾಟೋ ಹಣ್ಣು ಮುಖ್ಯವಾಗಿ ವಿಶೇಷವಾಗಿ ಯಾರು ಸೇವನೆ ಮಾಡಬಾರದು ಅಂದರೆ ಕಿಡ್ನಿ ಸಮಸ್ಯೆ ಇರುವವರು ಹಾಗೂ ಕಿಡ್ನಿ ಸ್ಟೋನ್ ಆದವರು ಇದರಿಂದ ದೂರವಿರುವುದು ಉತ್ತಮ. ಅದರಲ್ಲೂ ಟೊಮ್ಯಾಟೋ ಹಣ್ಣಿನಲ್ಲಿರುವ ಬೀಜಗಳನ್ನು ಅಂತೂ ಅವರು ಮುಟ್ಟಲು ಕೂಡ ಹೋಗಬಾರದು.

ಟೊಮ್ಯಾಟೋ ಹಣ್ಣಿನ ಬೀಜದಲ್ಲಿ ಇರುವ ಪೊಟ್ಯಾಶಿಯಂ ಅಂಶವು ಸಲೀಸಾಗಿ ಜೀರ್ಣ ಆಗುವುದಿಲ್ಲ. ಇವುಗಳು ದೇಹದಲ್ಲಿ ಹಾಗೆಯೇ ಉಳಿದು ಕಲ್ಲುಗಳಾಗಿ ಮಾರ್ಪಾಡುತ್ತವೆ.
ಇದರಿಂದ ವಿಪರೀತವಾದ ಹೊಟ್ಟೆ ನೋವು ಬರುತ್ತದೆ ಹಾಗೂ ವ್ಯಕ್ತಿಯು ರಾತ್ರಿವಿಡಿ ನಿದ್ದೆಯನ್ನು ಮಾಡುವುದಿಲ್ಲ. ಆದ್ದರಿಂದ ಕಿಡ್ನಿ ಸ್ಟೋನ್ ಹಾಗೂ ಕಿಡ್ನಿ ವೈಫಲ್ಯ ದಿಂದಾಗಿ ನೀವು ನರಳುತ್ತಿದ್ದರೆ ಟೊಮ್ಯಾಟೋ ಹಣ್ಣಿನಿಂದ ದೂರವಿರಿ. ಇನ್ನೂ ಆಹಾರದಲ್ಲಿ ಟೊಮ್ಯಾಟೋ ಹಣ್ಣು ಹೆಚ್ಚಾದರೆ ಕೀಲು ನೋವು ಬರಲು ಶುರು ಆಗುತ್ತದೆ. ಹಾಗೂ ಕೀಲುಗಳಲ್ಲಿ ಊತ ಬಂದು ನೋವು ಬರಲು ಶುರು ಆಗಿ ಕೀಲುಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.ಇದಕ್ಕೆ ಕಾರಣ ಸೋಲಾನಿಡ್ ಅಲ್ಕನೈಡ್ ಅಂಶವೇ ಕಾರಣ.ಇದು ಕೀಲುಗಳಲ್ಲಿ ಕ್ಯಾಲ್ಷಿಯಂ ಅಂಶವನ್ನು ಶೇಖರಣೆ ಮಾಡಿ ಉರಿ ಊತವನ್ನು ಸೃಷ್ಠಿ ಮಾಡುತ್ತದೆ. ಇದರಿಂದ ನಿಮ್ಮ ಕೈಕಾಲುಗಳಲ್ಲಿ ನೋವು ಬರಲು ಶುರು ಆಗುತ್ತದೆ. ಹೀಗಾಗಿ ನೀವು ಈಗಾಗಲೇ ಕೈ ಕಾಳು ನೋವಿನಿಂದ ಬಾಧೆ ಪಡುತ್ತಿದ್ದರೆ ಇವತ್ತಿನಿಂದಲೆ ಟೊಮ್ಯಾಟೋ ಹಣ್ಣು ತಿನ್ನುವುದನ್ನು ನಿಯಮಿತವಾಗಿ ಮಾಡಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *