ನಮಸ್ತೆ ಗೆಳೆಯರೇ, ಗ್ರಾಮೀಣ ಜನರಿಗೆ ಮತ್ತು ನಗರದ ಜನರಿಗೆ ಮತ್ತೊಂದು ವಸತಿ ಯೋಜನೆ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಜೊತೆಗೆ ಡಾ ಬಿ. ಆರ್. ಅಂಬೇಡ್ಕರ ನಿವಾಸ ಯೋಜನೆ ಬಗ್ಗೆಯೂ ಕೂಡ ವಿವರವಾಗಿ ತಿಳಿಯೋಣ. ಇದು ರಾಜೀವ ಗಾಂಧಿ ಯೋಜನೆಯಡಿ ಬರುತ್ತದೆ. ನಿಮ್ಮ ಹತ್ತಿರ ಖಾಲಿ ಜಾಗ ಇದ್ದರೆ ನೀವು ಗ್ರಾಮೀಣದ ಮೂಲಕ ಅರ್ಜಿಯನ್ನು ಆಹ್ವಾನ ನೀಡುತ್ತಿದ್ದರೆ ನಿಮಗೆ 1,75,000 ರೂಪಾಯಿ ಸಬ್ಸಿಡಿ ರೂಪದಲ್ಲಿ ನೀವು ಉಚಿತವಾಗಿ ಮನೆಯನ್ನು ಕಟ್ಟಿಸಿಕೊಳ್ಳಬಹುದು. ಇನ್ನೂ ನೀವು ನಗರದ ಮೂಲಕ ಅರ್ಜಿಯನ್ನು ಹಾಕುತ್ತಿದ್ದರೆ ನಿಮಗೆ 2 ಲಕ್ಷ ರೂಪಾಯಿ ಹಣವೂ ಉಚಿತವಾಗಿ ನಿಮಗೆ ಮನೆಯನ್ನು ಕಟ್ಟಿಕೊಳ್ಳಲು ಸರ್ಕಾರ ಸಹಾಯ ಮಾಡುತ್ತದೆ. ಹಾಗಾದ್ರೆ ಬನ್ನಿ ಈ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಬಗ್ಗೆ ತಿಳಿಯೋಣ. ಅಂದ್ರೆ ಈ ಅರ್ಜಿಯನ್ನು ಯಾರು ಹಾಕಬೇಕು, ಯಾವಾಗ ಹಾಕಬೇಕು, ಸಬ್ಸಿಡಿ ಎಷ್ಟು ಸಿಗುತ್ತದೆ. ಅಂತ ಎಲ್ಲವನ್ನು ತಿಳಿದುಕೊಳ್ಳೋಣ.
ಮೇಲೆ ತಿಳಿಸಿದಂತೆ ನಿಮಗೆ ಸಬ್ಸಿಡಿ ರೂಪದಲ್ಲಿ ಹಣವೂ ಉಚಿತವಾಗಿ ಸಿಗುತ್ತದೆ ತದ ನಂತರ ಈ ಅರ್ಜಿಯನ್ನು ಹಾಕಲು ಯಾವೆಲ್ಲ ಅರ್ಹತೆಯನ್ನು ನೀವು ಹೊಂದಿರಬೇಕು ಅಂತ ನೋಡುವುದಾದರೆ, ನೀವು ವಾಸ ಮಾಡಲು ನಿಮ್ಮ ಹತ್ತಿರ ಯಾವುದೇ ಮನೆ ಇರಬಾರದು. ಜೊತೆಗೆ ನಿಮ್ಮ ಹತ್ತಿರ ಕಡ್ಡಾಯವಾಗಿ ಖಾಲಿ ಜಾಗ ಇರಬೇಕು. ಖಾಲಿ ಜಾಗ ಇದ್ದರೆ ನಿಮಗೆ ಉಚಿತವಾಗಿ ಮನೆ ಕಟ್ಟಿಕೊಳ್ಳಲು ಸರ್ಕಾರವು ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಇನ್ನೂ ಗ್ರಾಮೀಣ ಭಾಗದ ಮೂಲಕ ಹೇಳುವುದಾದರೆ ನೀವು ಆರ್ಥಿಕವಾಗಿ ಹಿಂದುಳಿದವರು ಆಗಿರಬೇಕು. ಇನ್ನೂ ನಿಮ್ಮ ವಾರ್ಷಿಕ ಆದಾಯ 32000 ರೂಪಾಯಿ ಮಾತ್ರ ಇರಬೇಕು. ಇನ್ನೂ ನಗರ ಪ್ರದೇಶದ ಬಗ್ಗೆ ಹೇಳುವುದಾದರೆ ನೀವು ಆರ್ಥಿಕವಾಗಿ ಹಿಂದುಳಿದವರು ಆಗಿದ್ದು ನಿಮ್ಮ ಆರ್ಥಿಕ ವರಮಾನ 87600 ರೂಪಾಯಿ ಇರಬೇಕು. ಇದರ ಜೊತೆಗೆ ನೀವು ಯಾವುದೇ ರೀತಿಯ ವಸತಿ ಯೋಜನೆ ಫಲಾನುಭವವನ್ನು ಪಡೆದಿರಬಾರದು. ಇಷ್ಟೊಂದು ಅರ್ಹತೆಯನ್ನು ನೀವು ಹೊಂದಿದ್ದರೆ ಸುಲಭವಾಗಿ ನೀವು ಡಾ.ಬಿ.ಆರ್ ಅಂಬೇಡ್ಕರ್ ನಿವಾಸ ಯೋಜನೆಗೆ ನೀವು ಅರ್ಜಿಯನ್ನು ಹಾಕಬಹುದು. ಇನ್ನೂ ಈ ಯೋಜನೆಯ ಒಂದು ಅನುಕೂಲತೆ ಏನೆಂದರೆ ನಗರದ ಮೂಲಕ ಅರ್ಜಿಯನ್ನು ಆಹ್ವಾನ ಮಾಡುವವರಿಗೆ ಉಚಿತವಾಗಿ ಹೆಚ್ಚುವರಿ ಸಹಾಯಧನವಾಗಿ 1,50,000 ರೂಪಾಯಿ ನೀಡಲಾಗುತ್ತದೆ. ಅಂದ್ರೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ ಕೂಡ ಅದನ್ನು ಸಂಯೋಜನೆ ಮಾಡಿ ಕೂಡ ಒಂದೂವರೆ ಲಕ್ಷ ರೂಪಾಯಿ ಹೆಚ್ಚುವರಿ ಆಗಿ ಸಹಾಯ ಧನವನ್ನು ನೀಡಲಾಗುತ್ತದೆ. ಒಟ್ಟು ನಿಮಗೆ 3.5ಲಕ್ಷ ಹಣ ಉಚಿತವಾಗಿ ಸಿಗುತ್ತದೆ.
ಇನ್ನೂ ನೀವು ಸ್ವಂತವಾಗಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳುತ್ತೀರಿ ಅಂದ್ರೆ ನೀವು ನಿರ್ಮಾಣ ಮಾಡಿಕೊಳ್ಳಬಹುದು ಇಲ್ಲವಾದ್ರೆ ಏಜೆನ್ಸಿ ಮೂಲಕ ಮಾಡಿ ಕೊಡಿ ಅಂದ್ರೆ ಏಜೆನ್ಸಿ ಮೂಲಕ ನೀವು ಮನೆಯನ್ನು ಕಟ್ಟಿಕೊಳ್ಳಬಹುದು. ಇನ್ನೂ ಈ ಡಾ,ಬಿ,ಆರ್ ಅಂಬೇಡ್ಕರ್ ನಿವಾಸ ಯೋಜನೆ ಅರ್ಜಿ ಸಲ್ಲಿಸಿದರೆ ನಿಮಗೆ ಅನುದಾನ ಅಥವಾ ಸಹಾಯ ಧನ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಈ ಅನುದಾನ ಮಾಡಿದ ಹಣ ನಿಮಗೆ ಎಸ್.ಎಂ.ಎಸ್ ಮೂಲಕ ತಿಳಿದು ಬರುತ್ತದೆ. ಇನ್ನೂ ಈ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಅಂದ್ರೆ ನಿಮ್ಮ ತಾಲೂಕು ಅಥವ ಜಿಲ್ಲೆಯಲ್ಲಿ ಇರುವ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ತೆಗೆದುಕೊಂಡು ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ರೇಶನ್ ಕಾರ್ಡ್ ಮತ್ತು ಫೋಟೋ ನಂತ್ರ ನಿಮ್ಮ ಹತ್ತಿರ ಇರುವ ಖಾಲಿ ಜಾಗಕ್ಕೆ ಸಂಭಂದ ಪಟ್ಟ ದಾಖಲೆಯನ್ನು ಲಗತ್ತಿಸಿ ಕೊಡಬೇಕು. ಆಮೇಲೆ ಫಲಾನುಭವಿಗಳಿಗೆ ಹಣವೂ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.ಇದರಿಂದ ನೀವು ಸ್ವಂತ ಮನೆಯನ್ನು ಕಟ್ಟಿಕೊಳ್ಳಬಹುದು ಅಥವಾ ಏಜೆನ್ಸಿ ಮೂಲಕ ಕಟ್ಟಿಕೊಳ್ಳಬಹುದು. ಶುಭದಿನ.