ನಮ್ಮ ರಾಜ್ಯ ಕರ್ನಾಟಕ ಸರ್ಕಾರದಿಂದ ಮನೆಯಲ್ಲಿ ಕೂತು ನಾವೇನು ಸ್ವಂತ ಕಾಲಲ್ಲಿ ನಿಲ್ಲಲು ಸಹಾಯ ಮಾಡಲು ಕರ್ನಾಟಕ ಸರ್ಕಾರದ ವತಿಯಿಂದ ಎಲ್ಲರ ಮಹಿಳೆಯರಿಗೂ ಕೂಡ ಉಚಿತವಾಗಿ ಹೊಲಿಗೆ ಯಂತ್ರ ನೀಡಲಾಗುತ್ತಿದೆ ಇದನ್ನು ನೀವು ಹೇಗೆ ಪಡೆದುಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದೀರಾ ಅದರ ಮಾಹಿತಿ ಸಂಪೂರ್ಣವಾಗಿ ಇದರಲ್ಲಿ ನೀಡಲಾಗಿದೆ.ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಹೊಲಿಗೆ ಯಂತ್ರ ವಿತರಣೆ ಯೋಜನೆಯಲ್ಲಿ ಅರ್ಹ ಹಿಂದುಳಿದ ವರ್ಗಗಳ ಮಹಿಳೆಯರು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಈ ಯೋಜನೆಯಡಿ ದೇಶದ ಮಹಿಳೆಯರಿಗೆ ಸರ್ಕಾರ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ. ದೇಶದ ಮಹಿಳೆಯರು ಪ್ರಧಾನ ಮಂತ್ರಿಯವರ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನವನ್ನು ಅರ್ಜಿಯನ್ನು ಸಲ್ಲಿಸುವ ಮೂಲಕ ಪಡೆಯಬಹುದು. ನಮ್ಮ ದೇಶದಲ್ಲಿರುವ 50 ಸಾವಿರಕ್ಕಿಂತ ಹೆಚ್ಚು ಮಹಿಳೆಯರಿಗೆ ಇದರಿಂದ ಉಪಯೋಗ ಆಗಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ ಅದರ ಪ್ರಕಾರ ಇದನ್ನು ನಾವು ಸದುಪಯೋಗ ಪಡೆದುಕೊಳ್ಳಬೇಕು.
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆ ಅಡಿ ನಮ್ಮ ಕರ್ನಾಟಕದಲ್ಲಿ ಹಲವರಿಗೆ ಈಗಾಗಲೇ ಯಂತ್ರ ಕೂಡ ಸಿಕ್ಕಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಹೊಲಿಗೆ ಯಂತ್ರ ವಿತರಣೆ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಪತ್ರಿಕಾ ಪ್ರಕಟಣೆ ನೀಡಿದ್ದಾರೆ ಇದಕ್ಕೆ ಅರ್ಜಿ ಹಾಕಲು ಪ್ರಾರಂಭವಾದ ದಿನ ಅಂದರೆ ಐದನೇ ತಾರೀಕು ಹಲವಾರು ಜನ ಕೂಡ ಹಾಕಿದ್ದಾರೆ.
ಪ್ರಕಟಣೆಯನ್ನು ಎಲ್ಲಾ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಅಥವಾ ಉಚಿತವಾಗಿ ವಾರ್ತಾ ಮತ್ತು ಪ್ರಚಾರ ಇಲಾಖೆ ಮುಖಾಂತರ ಪ್ರಕಟಣೆ ನೀಡಿ ಪ್ರಚಾರ ಪಡಿಸಿದ್ದಾರೆ ಆರ್ಜಿಗಳನ್ನು ಆಹ್ವಾನಿಸಿದ ಬಗ್ಗೆ, ಹೊರಡಿಸಿದ ಪ್ರಕಟಣೆಯ ಪ್ರತಿಯನ್ನು ಎಲ್ಲಾ ಗ್ರಾಮ ಪಂಚಾಯಿತಿ ಕಛೇರಿಗಳಿಗೆ, ಸಾರ್ವಜನಿಕ ಕಚೇರಿಗಳಿಗೆ ಕಳುಹಿಸಿ ಹಿಂದುಳಿದ ವರ್ಗಗಳ ಮಹಿಳಯರಿಗೆ ಮಾಹಿತಿಗಾಗಿ ಪ್ರಕಟಿಸಲು ಹೇಳಿದ್ದಾರೆ. ಆಯ್ಕೆ ಸಮಿತಿಯ ಅಧ್ಯಸ್ಥರು ಹಾಗೂ ಮಾನ್ಯ ಶಾಸಕರುಗಳಿಗೆ ಮತ್ತು ಆಯ್ಕೆ ಸಮಿತಿಯ ಎಲ್ಲಾಸದಸ್ಯರುಗಳಿಗೆ, ಪ್ರಕಟಣೆಯ ಪ್ರತಿಯನ್ನು ಕಳುಹಿಸಿ ಸೌಲಭ್ಯ, ವಡೆಯ ಬಯಸುವ ಅರ್ಜಿದಾರರಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ತಿಳಿಸುವಂತೆ ಕೋರುವುದು.
ಸ್ಥಳೀಯವಾಗಿ ಸುದ್ದಿ, ರೂಪದಲ್ಲಿ ಸ್ಥಳೀಯ ದಿನ ಪತ್ರಿಕೆಗಳಲ್ಲಿ, ರೇಡಿಯೋ ಹಾಗೂ ದೂರದರ್ಶನ ಮಾಧ್ಯಮದ ಮೂಲಕ ವ್ಯಾಪಕ ಪುಚಾರವನ್ನು ಮಾಡಿ: ಅರ್ಹ ಹಿಂದುಳಿದ ವರ್ಗಗಳ ಮಹಿಳೆಯರಿಂದ ಅರ್ಜಿಗಳನ್ನು ಪಡೆಯಲು ಸೂಚಿಸಿದೆ. ಈ ಮಾಹಿತಿಯನ್ನು ಸಂಪೂರ್ಣ ಓದಿದ ನಂತರ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ದಲ್ಲಿ ಭೇಟಿ ನೀಡಿ ಸಲ್ಲಿಸಬಹುದು. ಮತ್ತು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ಅವರದೇ ಆದ ವೆಬ್ ಸೈಟ್ ಗೆ ಭೇಟಿ ನೀಡಿ ನೀವು ಪರಿಶೀಲನೆ ಮಾಡಬಹುದು. dbcdc.karnataka.gov.in. ಆದಷ್ಟು ಬೇಗ ನಿಮ್ಮ ಹತ್ತಿರದ ಕೇಂದ್ರದಲ್ಲಿ ಭೇಟಿ ನೀಡಿ ಒಳ್ಳೆಯ ಯೋಜನೆಯನ್ನು ನಿಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳಿ.