ನಮಸ್ತೆ ಪ್ರಿಯ ಓದುಗರೇ, ನಿಮಗೆ ಗೊತ್ತಿರವಂತೆ ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಆಗಿ ಬರುವುದಿಲ್ಲ. ಮತ್ತು ಯಾವ ಪದಾರ್ಥ ನಮ್ಮ ದೇಹಕ್ಕೆ ಆಗಿ ಬರುವುದಿಲ್ಲ ಅಂತಹ ಆಹಾರವನ್ನು ನಾವು ಸೇವನೆ ಮಾಡಬಾರದಾಗಿರುತ್ತದೆ. ಇಂದಿನ ಈ ಲೇಖನದಲ್ಲಿ ಯಾರು ಗೋಡಂಬಿಯನ್ನು ಸೇವನೆ ಮಾಡಬಾರದು ಅನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಸ್ನೇಹಿತರೆ ಈ ಗೋಡಂಬಿಯನ್ನು ಇಷ್ಟ ಪಡದೆ ಇರುವವರು ಯಾರು ಇಲ್ಲ ಅಂದ್ರೆ ತಪ್ಪಾಗುವುದಿಲ್ಲ. ಯಾಕಂದ್ರೆ ಗೋಡಂಬಿ ಅಷ್ಟು ರುಚಿಯಾಗಿ ಎಲ್ಲರಿಗೂ ಅಚ್ಚು ಮೆಚ್ಚು. ಅದೇ ರೀತಿಯಾಗಿ ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಅಷ್ಟೇ ಪ್ರಯೋಜನವಿದೆ. ಆದರೆ ಎಲ್ಲಾ ಆಹಾರಗಳು ಎಲ್ಲರಿಗೂ ಆಗಿ ಬರುವುದಿಲ್ಲ. ಹಾಗಾಗಿ ಅವರ ದೇಹಕ್ಕೆ ಅನುಗುಣವಾಗಿ ಮತ್ತು ಅವರ ದೇಹದ ಪ್ರಕೃತಿಗೆ ಅನುಗುಣವಾಗಿ ಅವರು ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ. ಹಾಗಿದ್ದರೆ ಈ ಗೋಡಂಬಿಯನ್ನು ಯಾರು ಸೇವನೆ ಮಾಡಬಾರದು ಅಂತ ನೋಡುವುದಾದರೆ – ಮೊದಲನೆಯದಾಗಿ ನಿಮಗೇನಾದರೂ ಮೂಲವ್ಯಾಧಿ ಸಮಸ್ಯೆ ಅಥವಾ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆ ಇದ್ದರೆ ನೀವು ಈ ಗೋಡಂಬಿಯನ್ನು ಅಧಿಕವಾಗಿ ಅಥವಾ ಸೇವನೆ ಮಾಡದೇ ಇರುವುದು ಒಳ್ಳೆಯದು. ಯಾಕೆಂದರೆ ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರದಂಥ ಸಮಸ್ಯೆಗಳು ಉಂಟಾಗಬಹುದು. ಮತ್ತು ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಇನ್ನೂ ಹೆಚ್ಚಾಗಬಹುದು.
ಹಾಗಾಗಿ ನಿಮಗೇನಾದರೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಇದ್ದರೆ ಅಥವಾ ಮೂಲವ್ಯಾಧಿ ಸಮಸ್ಯೆ ಇದ್ದರೆ ಈ ಗೋಡಂಬಿಯನ್ನು ಸೇವನೆ ಮಾಡಬೇಡಿ. ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮಲಬದ್ದತೆ ಸಮಸ್ಯೆ ಹೆಚ್ಚಾಗುತ್ತದೆ. ನೀವು ಸೇವನೆ ಮಾಡಿರುವ ಗೋಡಂಬಿ ಜೀರ್ಣವಾಗಲು ತುಂಬಾನೇ ಸಮಯ ಬೇಕಾಗುತ್ತದೆ. ನಿಮಗೇನಾದರೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಇದ್ದರೆ ಗೋಡಂಬಿ ಜೀರ್ಣವಾಗಲು ತುಂಬಾನೇ ಸಮಯ ಹಿಡಿಯುತ್ತದೆ. ಆಗ ಹೊಟ್ಟೆ ಸಂಬಂಧಿ ಕಾಯಿಲೆಗಳು ಇನ್ನೂ ಹೆಚ್ಚಾಗಬಹುದು. ಇನ್ನೂ ನೀವೇನಾದರೂ ತೂಕವನ್ನು ಇಳಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಅಥವಾ ಡಯೆಟ್ ಮಾಡುತ್ತಾ ಇದ್ದಾರೆ ಈ ಗೋಡಂಬಿಯನ್ನು ಅಧಿಕವಾಗಿ ಸೇವನೆ ಮಾಡಬೇಡಿ. ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ಇದು ನಿಮ್ಮ ತೂಕವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನೀವೇನಾದರೂ ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಲು ಯತ್ನ ಮಾಡುತ್ತಿದ್ದರೆ ಈ ಗೋಡಂಬಿಯನ್ನು ತಿನ್ನುವುದನ್ನು ಅವಾಯ್ಡ್ ಮಾಡುವುದು ಒಳ್ಳೆಯದು.
ಇನ್ನೂ ಕೆಲವು ಜನರಿಗೆ ಈ ಮೊದಲೇ ಹೇಳಿದ ಹಾಗೆ ಎಲ್ಲ ಆಹಾರಗಳು ಎಲ್ಲರಿಗೂ ಆಗಿ ಬರುವುದಿಲ್ಲ. ಈ ಗೋಡಂಬಿಯನ್ನು ತಿಂದ ನಂತರ ಅಲರ್ಜಿಯ ಸಮಸ್ಯೆಗಳು ಉಂಟಾಗಬಹುದು. ನಿಮ್ಗೂ ಕೂಡ ಅಲರ್ಜಿ ಸಮಸ್ಯೆ ಉಂಟಾದರೆ ಅಥವ ಉಸಿರಾಟದ ಸಮಸ್ಯೆ, ತುರಿಕೆ , ವಾಂತಿ ಮತ್ತು ಅತಿಸಾರದ ತೊಂದರೆ ಆದರೆ ನೀವು ಈ ಗೋಡಂಬಿಯನ್ನು ಸೇವನೆ ಮಾಡದೆ ಇದ್ದರೆ ಒಳ್ಳೆಯದು. ಇನ್ನೂ ಕೆಲವರಿಗೆ ಗೋಡಂಬಿಯನ್ನು ಸೇವನೆ ಮಾಡಿದ ನಂತರ ತಲೆನೋವಿನಂತಹ ಸಮಸ್ಯೆಗಳು ಉಂಟಾಗಬಹುದು. ನಿಮ್ಗೂ ಕೂಡ ಈ ಗೋಡಂಬಿಯನ್ನು ಸೇವನೆ ಮಾಡಿದ ನಂತರ ತಲೆನೋವಿನಂತಹ ಸಮಸ್ಯೆಗಳು ಬಂದರೆ ಈ ಗೋಡಂಬಿಯನ್ನು ಸೇವನೆ ಮಾಡದೆ ಇದ್ದರೆ ಒಳ್ಳೆಯದು. ಮತ್ತು ನಿಮಗೇನಾದರೂ ರಕ್ತದೊತ್ತಡ ಸಮಸ್ಯೆ ಇದ್ದರೆ ಅದರಲ್ಲಿ ಹೈ ಬಿಪಿ ಸಮಸ್ಯೆ ಇದ್ದರೆ ಈ ಗೋಡಂಬಿಯನ್ನು ವೈದ್ಯರ ಸಲಹೆಯ ಮೇರೆಗೆ ಸೇವನೆ ಮಾಡಬೇಕಾಗುತ್ತದೆ. ಯಾಕಂದ್ರೆ ಗೋಡಂಬಿಯನ್ನು ಸೋಡಿಯಂ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ನಿಮಗೆ ಇನ್ನೂ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ನಿಮಗೇನಾದರೂ ಹೈ ಬಿಪಿ ಸಮಸ್ಯೆ ಇದ್ದರೆ ಈ ಗೋಡಂಬಿಯನ್ನು ವೈದ್ಯರ ಸಲಹೆಯನ್ನೂ ತೆಗೆದುಕೊಂಡು ಸೇವನೆ ಮಾಡಿದರೆ ಉತ್ತಮ. ನೋಡಿದ್ರಲ್ಲ ಸ್ನೇಹಿತರೆ ಇಂದಿನ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.