WhatsApp Group Join Now

ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅನ್ನುವವರು ನಡುವೆ ನನ್ನ ಪ್ರೀತಿ ಶಾಶ್ವತ ಪ್ರೀತಿಗೆ ವಯಸ್ಸಿಲ್ಲ ಯಾರು ಬೇಕಾದರೂ ಪ್ರೀತಿ ಮಾಡಬಹುದು ಎಂದು ಹೇಳುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಇಲ್ಲೊಬ್ಬಳು ಯುವತಿ. ಈಕೆಯ ಹೆಸರು ಸಿಡ್ನಿ ಡೀನ್. 27 ವರ್ಷದ ಸಿಡ್ನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಈ ಒಂದು ವಿಚಿತ್ರ ಘಟನೆ ಯ ಸಂಪೂರ್ಣ ಮಾಹಿತಿ ಇಲ್ಲಿದೆ ಸಿಡ್ನಿ ಡೀನ್ ಮದುವೆಯಾಗಿರುವುದು ತನ್ನ ಮಾಜಿ ಬಾಯ್​ಫ್ರೆಂಡ್​ನ ತಂದೆಯನ್ನು ಎಂಬುದು ಇಲ್ಲಿ ವಿಶೇಷ. ಇಂತಹದೊಂದು ವಿಚಿತ್ರ ಲವ್​ಸ್ಟೋರಿ ನಡೆದಿರುವುದು ದೂರದ ಅಮೆರಿಕದಲ್ಲಿ. ಯುಎಸ್​ನ ಒಹಿಯೋ ಮೂಲದ ಸಿಡ್ನಿ ಡೀನ್ ಶಾಲಾ ದಿನಗಳಲ್ಲೇ ಲವ್​ನಲ್ಲಿ ಬಿದ್ದಿದ್ದಳು. ಸಾಮಾನ್ಯವಾಗಿ ಹುಡುಗಿಯರು ಮತ್ತು ಹುಡುಗರು ಇದೆ ವಯಸ್ಸಿನಲ್ಲಿ ಹಾಳಾಗುತ್ತಾರೆ ಅದರಂತೆ ತಂದೆ ತಾಯಿ ತಮ್ಮ ಮಕ್ಕಳ ಮೇಲೆ ಹೆಚ್ಚು ನಿಗವಹಿಸಬೇಕಾಗಿರುವುದು ಅಗತ್ಯವಿರುತ್ತದೆ.

ಅದರಂತೆ ಪೌಲ್​ ಅವರ ಮಗನ ಜೊತೆ ಡೇಟಿಂಗ್ ಕೂಡ ನಡೆಯುತ್ತಿತ್ತು. ಹೀಗೆ ಜೊತೆಯಾಗಿ ಹಲವು ಬಾರಿ ಮನೆಗೆ ಕೂಡ ಬಂದು ಹೋಗಿದ್ದಾಳೆ. ಮನೆಗೆ ಬಂದಾಗ ಇವರ ತಂದೆ ಜೊತೆ ಮಾತನಾಡುತ್ತಾ ಇವನ ತಂದೆಯನ್ನು ಪರಿಚಯ ಮಾಡಿಕೊಂಡಿದ್ದಾಳೆ ಈ ಸಂದರ್ಭದಲ್ಲಿ ಬಾಯ್​ ಫ್ರೆಂಡ್ ತಂದೆ ಪೌಲ್​ ಅವರ ಪರಿಚಯವಾಗಿದೆ.ಹೀಗೆ ಪರಿಚಯವಾದ ಪೌಲ್​ ಜೊತೆ ಉತ್ತಮ ಗೆಳೆತನ ಏರ್ಪಟ್ಟಿತ್ತು. ವಾರಾಂತ್ಯದಲ್ಲಿ ಬಾಯ್​ ಫ್ರೆಂಡ್ ಜೊತೆಗೆ ಹೋಗುವುದು ಇವಳ ಕನಸಾಗಿರುತ್ತದೆ. ಆದರೆ ಅವನಿಗೆ ಬೇರೆ ಯಾವ ಕೆಲಸ ಇರುವುದರಿಂದ ಇವಳನ್ನು ದೂರವಿಡುತ್ತಾನೆ . ಇದು ಇವರಿಬ್ಬರ ನಡುವೆ ದ್ವೇಷ ಉಂಟುಮಾಡುತ್ತದೆ.

ಇದಾಗ್ಯೂ ಬಾಯ್​ ಫ್ರೆಂಡ್​ ತಂದೆ ಜೊತೆಗಿನ ಸಿಡ್ನಿ ಗೆಳೆತನ ಮಾತ್ರ ಮುಂದುವರೆದಿತ್ತು. ಇಬ್ಬರೂ ವಾರಾಂತ್ಯದಲ್ಲಿ ಭೇಟಿಯಾಗುತ್ತಿದ್ದರು. ಭೇಟಿಯಾದಾಗೆಲ್ಲಾ ತನ್ನ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿದ್ದ ಪೌಲ್​ನ ನಡೆಯಿಂದ ಸಿಡ್ನಿ ಡೀನ್​ ಮತ್ತಷ್ಟು ಆಕರ್ಷಿತಳಾದಳು. ಇಬ್ಬರ ನಡುವಿನ ಗೆಳೆತನವು ನಿಧಾನಕ್ಕೆ ಪ್ರೇಮಕ್ಕೆ ತಿರುಗಿದೆ. ಇಬ್ಬರು ಸಹ ಡೇಟಿಂಗ್ ಅಲ್ಲಿ ಹೋಗಿ ತಮ್ಮ ಇಬ್ಬರ ಮಧ್ಯೆ ಇರುವ ಬಾಂಧವ್ಯವನ್ನು ಹೆಚ್ಚು ಮಾಡುತ್ತಾರೆ . ನಂತರ ತನ್ನ ಬಾಯ್ ಫ್ರೆಂಡ್ ತಂದೆಯನ್ನು ಮದುವೆಯಾಗುತ್ತಾಳೆ.

ಅದರಂತೆ 24 ವರ್ಷದ ಅಂತರ ಹೊಂದಿರುವ ಪೌಲ್​ನನ್ನು ಸಿಡ್ನಿ ಡೀನ್​ ವಿವಾಹವಾಗಿದ್ದಾರೆ. ಇಲ್ಲಿ ಇನ್ನೊಂದು ಯೋಚನೆ ಮಾಡುವ ವಿಚಾರವೆಂದರೆ ಈ ಮಾಜಿ ಪ್ರಿಯತಮ್ ಈಕೆಯ ಮಗನಾಗಿದ್ದಾನೆ. ಈಕೆಯ ಈ ಘನಂದಾರಿ ಕೆಲಸ ತುಂಬಾನೇ ಸದ್ದು ಮಾಡುತ್ತಿದೆ. ಜಾಲತಾಣಗಳಲ್ಲಿ ನೆಟ್ಟಿಗರು ಈಚಕೆಯನ್ನು ತುಂಬಾನೇ ಟ್ರೋಲ್ ಮಾಡುತ್ತಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *