ಗುರಿ ಒಂದಿದ್ದರೆ ಮತ್ತು ಹಾರ್ಡ್ ವರ್ಕ್ ಅನ್ನೋದು ಇದ್ದರೆ ಏನಾದರು ಸಾಧಿಸಬಹುದು ಅನ್ನೋದಕ್ಕೆ ಈ ಮಹಿಳೆಯೇ ಸಾಕ್ಷಿ. ತನ್ನ ತಂದೆ ಒಬ್ಬ ಸಾಮಾನ್ಯ ರೈತನಾಗಿದ್ದು ಹೊಲದ ದಾಖಲೆಗಳನ್ನು ಸಹಿ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿದಿನ ಅಲೆದಾಡುತ್ತಿದ್ದರು, ಬಿಸಿಲು ಗಾಳಿ ಮಳೆ ಎನ್ನದೆ ಪ್ರತಿದಿನ ತಮ್ಮ ಕೆಲಸ ಆಗಲಿ ಅನ್ನೋ ಕಾರಣಕ್ಕೆ ಓಡಾಡುತ್ತಿದ್ದರು, ಆದ್ರು ಕೆಲಸ ಆಗದೆ ಮರಳಿ ಮನೆಗೆ ಬರುತ್ತಿದ್ದರು ಇದೆಲ್ಲ ಗಮನಿಸಿದ ಈ ಬಾಲಕಿ ಈಗ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರೇ ರೋಹಿಣಿ.
ಒಂದು ದಿನ ಈ ಬಾಲಕಿ ತಮ್ಮ ತಂದೆಯನ್ನು ಕೇಳುತ್ತಾರೆ ಅಪ್ಪ ನೀವು ಪ್ರತಿದಿನ ಬಿಸಿಲು ಮಳೆ ಗಾಳಿ ಅನ್ನದೆ ಪ್ರತಿದಿನ ಹೊರಗೆ ಹೋಗುತ್ತೀರಾ ಎಲ್ಲಿ ಹೋಗುತ್ತಿರ ಯಾಕೆ ಅನ್ನೋದನ್ನ ಕೇಳುತ್ತಾಳೆ. ಆಗ ತಂದೆ ನಮ್ಮ ಹೊಲದ ಕೆಲಸ ಅಂದರೆ ಹೊಲದ ದಾಖಲೆಗಳನ್ನು ಸಹಿ ಮಾಡಿಸಲಿಕ್ಕೆ ಹೋಗುತ್ತಿರುವೆ ನಮ್ಮ ಕೆಲಸ ಕಲೆಕ್ಟರ್ ಅವರಿಂದ ಆಗುತ್ತದೆ ಎಂಬುದಾಗಿ ಹೇಳಿದಾಗ ಆ ವಿಚಾರವನ್ನು ಈ ಪುಟ್ಟ ಬಾಲಕಿ ಅಂದಿನಿಂದ ಹೆಚ್ಚು ಗಮನ ಹರಿಸಿದಳು.
ಅಂದು ತಂದೆಯನ್ನು ಈ ಬಾಲಕಿ ಹೇಳುತ್ತಲೇ ಅಪ್ಪ ನಾನು ಕೂಡ ಕಲೆಕ್ಟರ್ ಆಗುವೆ ಬಡವರಿಗೆ ಸಹಾಯ ಮಾಡುವೆ ಎಂಬುದಾಗಿ. ತಂದೆ ಹೇಳುತ್ತಾರೆ ನೀನು ಕಲೆಕ್ಟರ್ ಆದ್ರೆ ಒಳ್ಳೆಯದೇ ಆದರೆ ಹೆಚ್ಚಾಗಿ ಬಡವರಿಗಾಗಿ ನಿನ್ನ ಕೆಲಸ ಇರಲಿ ಎಂಬುದಾಗಿ ಹೇಳಿದ್ದರಂತೆ. ಅಂದಿನಿಂದ ಈಗ ಕೂಡ ಇವರು ಬಡವರ ಪ್ರಗತಿಗಾಗಿ ಕೆಲಸ ಮಾಡುತ್ತಿದ್ದಾರೆ ಅಷ್ಟಕ್ಕೂ ಇವರು ಯಾರು ಮತ್ತು ಎಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಾರಾಷ್ಟ್ರ ಮೂಲದ ಒಬ್ಬ ಸಾಮಾನ್ಯ ರೈತನ ಮಗಳು ತಂದೆಯನ್ನು ನೋಡಿ ಬಡ ಜನರಿಗಾಗಿ ತಮ್ಮ ಸೇವೆಯನ್ನು ನೀಡಲು ಐಎಎಸ್ ಅಧಿಕಾರಿಯಾಗಿ ಈಗ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಭಾಷೆ ತಮಿಳ್ ಆಗಿದ್ದರು ಅಲ್ಲಿಯ ಜನಕ್ಕೆ ಸ್ಥಳೀಯ ಭಾಷೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ.
ಸೇಲಂ ಜಿಲ್ಲೆಯಲ್ಲಿ 170 ಐಎಎಸ್ ಪುರುಷ ಅಧಿಕಾರಿಗಳ ನಂತರ ಪ್ರಥಮ ಮಹಿಳ ಐಎಎಸ್ ಅಧಿಕಾರಿಯಾಗಿ ರೋಹಿಣಿ ಅವರು ಬಂದಿದ್ದರು. ರೋಹಿಣಿ ಅವರ ಕಾರ್ಯ ಶೈಲಿ ಸೇಲಂ ಜಿಲ್ಲಾ ಜನತೆಗೆ ಬಹಳ ಇಷ್ಟವಾಗಿದೆ. ತನ್ನ ಜವಾಬ್ದಾರಿಗಳನ್ನು ಅರಿತುಕೊಂಡು ಜಿಲ್ಲೆಯ ಪ್ರಥಮ ಮಹಿಳಾ ಐಎಎಸ್ ಅಧಿಕಾರಿಯಾಗಿ ಬಡವರಿಗಾಗಿ ಮತ್ತು ನೊಂದವರಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂತಹ ಜನ ಪ್ರಗತಿ ಪರ ಕೆಲಸವನ್ನು ಮಾಡುವಂತ ಹೆಮ್ಮೆಯ ಅಧಿಕಾರಿಗಳು ಈ ಸಮಾಜಕ್ಕೆ ಹೆಚ್ಚಿನ ಅವಶ್ಯಕತೆ ಇದೆ. ಅದೇನೇ ಇರಲಿ ತಂದೆ ಒಂದು ಸಹಿ ಗೋಸ್ಕರ ಅಲೆದಾಡುವುದನ್ನು ಕಂಡು ಈ ಚಿಕ್ಕ ವಯಸ್ಸಿನಿಂದಲೂ ಐಎಎಸ್ ಅಧಿಕಾರಿಯಾಗುವ ಛಲವನ್ನು ಬಿಡದೆ ಸಾಧಿಸಿರುವ ಈ ಮಹಿಳಾ ಅಧಿಕಾರಿಗೆ ನಮ್ಮದೊಂದು ಸಲಾಂ.