ತಂದೆ ತಾಯಿಗೆ ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಿಗೂ ಈ ಕಾಯಿಲೆ ಬರುತ್ತದೆಯಾ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಬರುವುದು ಸಹಜ. ಈ ಸಕ್ಕರೆ ಕಾಯಿಲೆ ಹೇಗೆ ಬರುತ್ತದೆ ಒಂದುವೇಳೆ ಬಂದಿದ್ದೆ ಆದರೆ ಎಷ್ಟು ವರ್ಷಗಳಿಗೆ ಬರುತ್ತದೆ, ಎಷ್ಟು ವರ್ಷಗಳವರೆಗೆ ಇರುತ್ತದೆ ಎಂದು ಇಂದಿನ ಈ ಅಂಕಣದಲ್ಲಿ ತಿಳಿಸಲಿದ್ದೇವೆ. ಹಿಂದಿನ ಕಾಲದಲ್ಲಿ ಈ ಸಕ್ಕರೆ ಕಾಯಿಲೆಯನ್ನು ಶ್ರೀಮಂತರ ಕಾಯಿಲೆ ಎಂದು ಪರಿಗಣಿಸಲಾಗುತ್ತಿತ್ತು. ಹಾಗೆ ಹೇಳಲು ಕಾರಣ ಇದೆ, ಯಾಕೆ ಅಂದ್ರೆ ಹಿಂದೆಲ್ಲಾ ಈ ಕಾಯಿಲೆ ಬರೀ ಶ್ರೀಮಂತರಿಗೆ ಮಾತ್ರ ಬರುತ್ತಿತ್ತು ಏಕೆಂದರೆ ಅವರು ಅತಿಯಾದ ಸಿಹಿ ತಿನಿಸುಗಳನ್ನು ತಿಂದು ಏನೂ ದೇಹದ ಚಟುವಟಿಕೆಗಳಿಲ್ಲದೆ, ದೇಹಕ್ಕೆ ಯಾವುದೇ ಕೆಲಸ ಕೊಡದೆ ಕೂತಲ್ಲೇ ಕೂತು ಕಾಲ ಹರಣ ಮಾಡುತ್ತಿದ್ದರು ಆದ್ದರಿಂದ ಈ ಕಾಯಿಲೆ ಅವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ, ಮನೆಯಲ್ಲಿ ಒಬ್ಬರಿಗಾದರೂ ಈ ಕಾಯಿಲೆ ಇರುವುದು ಸರ್ವೇ ಸಾಮಾನ್ಯ ಆಗಿದೆ. ಈಗ ಶ್ರೀಮಂತರು ಬಡವರು ಎನ್ನುವ ತಾರತಮ್ಯ ಇಲ್ಲದೆ ಎಲ್ಲರಿಗೂ ಬರುವ ಸಾಮಾನ್ಯ ಕಾಯಿಲೆ ಆಗಿಬಿಟ್ಟಿದೆ. ಅಷ್ಟಕ್ಕೂ ಈ ಸಕ್ಕರೆ ಕಾಯಿಲೆ ಯಾಕೆ ಬರುತ್ತದೆ ಬರಲು ಕಾರಣಗಳೇನು ಎಂಬುದನ್ನು ನೋಡುವುದಾದರೆ, ಒಬ್ಬ ವ್ಯಕ್ತಿ ತಾನು ಸೇವಿಸಿದ ಆಹಾರ ಜೀರ್ಣವಾಗಿ ಅದು ರಕ್ತಕ್ಕೆ ಸೇರಿ ವಿವಿಧ ಜೀವಕೋಶಗಳಿಗೆ ಸೇರಲು ಆತನ ದೇಹದಲ್ಲಿ ಇನ್ಸುಲಿನ್ ಎಂಬ ರಾಸಾಯನಿಕ ತಕ್ಕಮಟ್ಟಿಗೆ ಬಿಡುಗಡೆ ಆಗಬೇಕಾಗುತ್ತದೆ. ನಾವು ತಿಂದ ಆಹಾರ ರಕ್ತದಲ್ಲಿ ಸೇರಿದರೆ ನಾವು ತಿಂದಂಥಹ ಸಕ್ಕರೆ ಅಂಶವು ಜೀವಕೋಶಗಳಿಗೆ ಸೇರುತ್ತದೆ. ಒಂದುವೇಳೆ ನಮ್ಮ ಶರೀರದಲ್ಲಿ ಇನ್ಸುಲಿನ್ ಪ್ರಮಾಣಕ್ಕಿಂತಲೂ ಅಧಿಕವಾಗಿ ನಮ್ಮ ದೇಹಕ್ಕೆ ಸೇರಿದರೆ ಅದು ರಕ್ತದಲ್ಲೇ ಶೇಖರಣೆ ಆಗುತ್ತದೆ. ಹೀಗೆ ಶೇಖರಣೆ ಆದ ಸಕ್ಕರೆ ಅಂಶವು ನಮ್ಮ ದೇಹದ ವಿವಿಧ ಭಾಗಗಳಿಗೆ ಹೋಗಿ ಆ ಅಂಗಗಳಿಗೆ ತೊಂದರೆ ಉಂಟು ಮಾಡುತ್ತದೆ. ಈ ತರಹ ಆದರೆ ಅದನ್ನು ನಾವು ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಉಂಟಾಗಲು ಅನೇಕ ಕಾರಣಗಳು ಇದ್ದರೂ ಕೂಡ ಇದು ಇನ್ಸುಲಿನ್ ಅಂಶದ ಕೊರತೆಯಿಂದಾಗಿ ಬರುತ್ತದೆ.
ಇನ್ನೂ ಸಕ್ಕರೆ ಕಾಯಿಲೆ ಯಾವೆಲ್ಲ ಕಾರಣಗಳಿಂದ ಬರಬಹುದು ಎಂದು ನೋಡುವುದಾದರೆ ಈಗಾಗಲೇ ತಿಳಿಸಿರುವ ಹಾಗೆ ಇನ್ಸುಲಿನ್ ಪ್ರಮಾಣ ಸರಿಯಾಗಿ ದೇಹಕ್ಕೆ ಅಗತ್ಯವಾದ ಅಷ್ಟು ಬಿಡುಗಡೆ ಆಗಿಲ್ಲ ಅಂದ್ರೆ ಆಗ ನಮಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇನ್ನೂ ಸಕ್ಕರೆ ಕಾಯಿಲೆ ಬರಲು ಹಲವಾರು ಕಾರಣಗಳಿವೆ ಅವುಗಳೆಂದರೆ ಈ ಸಕ್ಕರೆ ಕಾಯಿಲೆಯು ಅನುವಂಶಿ ಆಗಿಯೂ ಬರಬಹುದು. ಅಂದ್ರೆ ತಂದೆ ತಾಯಿ ಇಬ್ಬರಿಗೂ ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಿಗೆ 50% ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನೂ ತಂದೆ ಅಥವಾ ತಾಯಿ ಒಬ್ಬರಿಗೆ ಇದ್ದರೆ ಶೇಕಡಾ 25% ನಷ್ಟೂ ಮಕ್ಕಳಿಗೆ ಬರುವ ಸಾಧ್ಯತೆ ಇರುತ್ತದೆ. ಇನ್ನೂ ಎರಡನೇ ಕಾರ್ಣ ಅಂದರೆ ನಮ್ಮ ಜೀವನ ಶೈಲಿ ಮತ್ತು ಆಹಾರದ ಪದ್ಧತಿ. ಹಲವಾರು ಜನರಿಗೆ ತಿಳಿದಂತೆ ಅತಿಯಾಗಿ ಸಕ್ಕರೆ ಸೇವನೆ ಮಾಡಿದರೆ ಈ ಕಾಯಿಲೆ ಬರುತ್ತದೆ ಎಂದು. ಆದರೆ ಅತಿಯಾದ ಕೊಬ್ಬಿನ ಅಂಶ ಇರುವ ಆಹಾರ ಸೇವನೆ ಮಾಡಿದರೂ ಕೂಡ ಸಕ್ಕರೆ ಕಾಯಿಲೆ ಬೇಗ ಬರಬಹುದು. ಯಾವ ವ್ಯಕ್ತಿಯು ಆಹಾರದಲ್ಲಿ ಅತಿಯಾದ ಕೊಬ್ಬು ಮತ್ತು ಸಕ್ಕರೆ ಅಂಶ ಹೆಚ್ಚಿರುತ್ತದೆ ಹಾಗೂ ಬಹಳ ವರ್ಷಗಳ ಕಾಲ ಅದ್ದೇ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಂಡಿದ್ದರೆ ಅಂತಹವರಿಗೆ ಚಿಕ್ಕ ವಯಸ್ಸಿನಲ್ಲೇ ಈ ಕಾಯಿಲೆಯ ಲಕ್ಷಣಗಳು ಕಂಡುಬರುವುದು. ಹಾಗಾಗಿ ನಾವು ಆಹಾರಕ್ಕೆ ತಕ್ಕಂತೆ ದೈಹಿಕ ವ್ಯಾಯಾಮ ಮತ್ತು ಚಟುವಟಿಕೆ ಬ ಹಳನೆ ಮುಖ್ಯ. ಸರಿಯಾದ ರೀತಿಯಲ್ಲಿ ವ್ಯಾಯಾಮ ಇಲ್ಲದೆ ಶರೀರದಲ್ಲಿ ಬೊಜ್ಜು ಜಾಸ್ತಿ ಆದರೆ ಸಕ್ಕರೆ ಕಾಯಿಲೆ ಬರುತ್ತದೆ. ಇನ್ನೂ ನಮ್ಮ ದೇಶದಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಸಕ್ಕರೆ ಕಾಯಿಲೆ ರೋಗಿಗಳು ಯಾರಿಗೆ ಹೆಚ್ಚು ಬೊಜ್ಜು ಇರುತ್ತದೆಯೋ ಅಂತಹವರಿಗೆ ಸಕ್ಕರೆ ಕಾಯಿಲೆ ಬರಲು ಮುಖ್ಯ ಕಾರಣ ಆಗಿದೆ. ಇನ್ನು ನಿಮಗೇನಾದರೂ ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಅಂದ್ರೆ ನಿಮ್ಮ ಮಕ್ಕಳಿಗೆ ಯಾವುದೇ ರೀತಿಯಾಗಿ ಸಕ್ಕರೆ ಅಂಶ ಇರುವಂತಹ ಆಹಾರವನ್ನು ಕೊಡಬೇಡಿ ಅಂತ ಹೇಳುತ್ತಿಲ್ಲ ಎಲ್ಲವನ್ನೂ ಅವರಿಗೆ ಕೊಡಿ ಆದರೆ ಅದಕ್ಕೆ ತಕ್ಕಂತೆ ಅವರು ದೈಹಿಕ ಚಟುವಟಿಕೆಯನ್ನ ಮಾಡಬೇಕು ಅಂದ್ರೆ ಔಟ್ ಡೋರ್ ಗೇಮ್ ಆಡಲು ಬಿಡಿ. ಯಾವಾಗಲೂ ಓದುವು ಸಲುವಾಗಿ ಮನೆಯಲ್ಲೇ ಕೂಡಿ ಹಾಕದಿರಿ. ದೈಹಿಕ ಚಟುವಟಿಕೆ ಇದ್ದರೆ ಮಾತ್ರ ದೇಹದಲ್ಲಿ ಕೊಬ್ಬು ಶೇಖರಣೆ ಆಗುವುದಿಲ್ಲ ಹಾಗಾಗಿ ದೈಹಿಕ ಚಟುವಟಿಕೆ ಬಹಳ ಮುಖ್ಯ. ಅದು ಚಿಕ್ಕವರು ಇರಲಿ ದೊಡ್ಡವರಿಗೆ ಇರಲಿ.
ನಾವು ತಿಂದತಹ ಆಹಾರಕ್ಕೆ ಸರಿಯಾಗಿ ನಾವು ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಮಾತ್ರ ಸಕ್ಕರೆ ಅಥವಾ ಇನ್ಯಾವುದೇ ರೋಗ ಬರುವುದಿಲ್ಲ. ತಂದೆ ತಾಯಿಗೆ ಅಥವಾ ನಮ್ಮ ಕುಟುಂಬದ ಯಾರಿಗೂ ಸಕ್ಕರೆ ಕಾಯಿಲೆ ಇಲ್ಲದಿದ್ದರೂ ಕೂಡ ನಮಗೆ ಯಾಕೆ ಬಂದಿದೆ ಅಂತ ಕೆಲವರು ಹೇಳುತ್ತಾ ಇರುತ್ತಾರೆ ಇದಕ್ಕೆ ಕಾರಣ ಏನೆಂದರೆ ಚಿಕ್ಕ ವಯಸ್ಸಿನಲ್ಲಿ ಅಪೌಷ್ಟಿಕತೆ ಉಂಟಾದರೆ ನಾವು ದೊಡ್ಡವರಾದ ಮೇಲೆ ಸಕ್ಕರೆ ಕಾಯಿಲೆ ಉಂಟಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇದಷ್ಟೇ ಅಲ್ಲದೇ ನಮ್ಮ ಪ್ಯಾoಕ್ರಿಯಾಸ್ ಅಂಗವೂ ಆಗಿಂದಾಗ ಸೋಂಕಿಗೆ ಒಳಗಾಗಿದ್ದರೇ ಕಾಲ ಕ್ರಮೇಣ ಇನ್ಸುಲಿನ್ ಉತ್ಪತ್ತಿ ಸರಿಯಾಗಿ ಆಗದೆ ಇದ್ದರೆ ಚಿಕ್ಕ ವಯಸ್ಸಿನಲ್ಲಿ ಬರಬಹುದು. ಇನ್ನೂ ಈ ಸಕ್ಕರೆ ಕಾಯಿಲೆ ಲಕ್ಷಣಗಳು ಏನು ಈ ಕಾಯಿಲೆ ಬಂದ್ರೆ ಎಷ್ಟು ವರ್ಷ ಇರುತ್ತದೆ ಅಂತ ತಿಳಿಯುವುದಾದರೆ ಮೊದಲನೆಯದಾಗಿ ಇದರ ಲಕ್ಷಣಗಳನ್ನು ನೋಡುವುದಾದರೆ ಅತಿಯಾದ ಮೂತ್ರ ವಿಸರ್ಜನೆ, ಕೆಲವೊಬ್ಬರಿಗೆ ರಾತ್ರಿ ಸಮಯದಲ್ಲಿ ಅತಿಯಾದ ಮೂತ್ರ ವಿಸರ್ಜನೆ ಆಗುತ್ತದೆ ಮಲಗಲು ಕೂಡ ಸಾಧ್ಯ ಆಗುವುದಿಲ್ಲ ಇನ್ನೂ ಕೆಲವರಿಗೆ ಅತಿಯಾದ ಬಾಯಾರಿಕೆ ಉಂಟಾಗುತ್ತದೆ ಮತ್ತು ದೇಹದ ತೂಕ ಬೇಗನೆ ಕಡಿಮೆ ಆಗುತ್ತದೆ. ಮತ್ತು ಯಾವುದೇ ಕಾರಣ ಇಲ್ಲದೆ ಆಯಾಸ ಆಗುತ್ತಾ ಇರುತ್ತದೆ. ದೇಹದ ಯಾವುದಾದರೂ ಭಾಗದಲ್ಲಿ ಗಾಯ ಆದರೆ ಬೇಗ ವಾಸಿ ಆಗುವುದಿಲ್ಲ ಇನ್ನೂ ಕೆಲವರಿಗೆ ಮೂತ್ರ ನಾಳದಲ್ಲಿ ಸೋಂಕು ಉಂಟಾಗುತ್ತದೆ. ಇನ್ನೂ ಈ ಕಾಯಿಲೆ ಎಷ್ಟು ವರ್ಷ ಇರುತ್ತದೆ ಅನ್ನುವುದಕ್ಕೆ ನಿರ್ಧಿಷ್ಟವಾದ ಉತ್ತರ ಇಲ್ಲ. ಆದ್ದರಿಂದ ಇದಕ್ಕೆ ತುತ್ತಾಗುವ ಮುಂಚೆ ನಿಮ್ಮ ಲೈಫ್ ಸ್ಟೈಲ್ ಬದಲಿ ಮಾಡಿಕೊಂಡು, ದೈಹಿಕವಾಗಿ ಚಟುವಟಕೆಗಳೊಂದಿಗೆ ನಿಮ್ಮ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ. ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ. ಶುಭದಿನ.