ಸೇಬು ಹಣ್ಣು ಸಾಮಾನ್ಯವಾಗಿ ಆರೋಗ್ಯಕ್ಕೆ ಉಪಯೋಗಕಾರಿ ಅನ್ನೋದನ್ನು ತಿಳಿದ್ದಿದ್ದೇ ಇರುತ್ತದೆ. ವೈದ್ಯರು ಕೂಡ ದಿನಕ್ಕೊಂದು ಸೇಬು ತಿಂದು ಆರೋಗ್ಯವಾಗಿರಿ ಅನ್ನೋದು ಹಲವು ವೈದ್ಯರ ಮಾತು. ಹಾಗಾದರೆ ಈ ಸೇಬಿನಿಂದ ಏನೆಲ್ಲಾ ಪ್ರಯೋಜನ ಇದೆ ಅನ್ನೋದನ್ನು ನೀವೇ ಓದಿ..
ಸಾಮಾನ್ಯವಾಗಿ ಸೇಬಿನಲ್ಲಿ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ ಗಳು, ಫ್ಲೇವನಾಯ್ಡು್ ಗಳು ಹಾಗೂ ಪೋಷಕಾಂಶಗಳಿವೆ. ಈ ಎಲ್ಲಾ ವಿಟಮಿನ್ ಗಳು ಕ್ಯಾನ್ಸರ್ ಅಭಿವೃದ್ದಿಕೊಳ್ಳುವ ಅಂಶಗಳನ್ನು ತಡೆಯುತ್ತದೆ. ಇನ್ನು ಹೃದಯದ ಕಾಯಿಲೆ ಹಾಗೂ ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಪ್ರತಿ ದಿನ ಸೇಬು ತಿನ್ನುವುದರಿಂದ ತ್ವಚೆಯಲ್ಲಿ ಕಾಂತಿಯುತೆ ಹೆಚ್ವಾಗುವುದರ ಜೊತೆಗೆ ವೃದ್ಯಾಪ್ಯದ ಚಿನ್ಹೆಗಳನ್ನು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲ ಕೂದಲಿಗೂ ಈ ಹಣ್ಣು ಉಪಯೋಗಕಾರಿಯೇ.
ಇನ್ನು ಸೇಬಿನ ಮತ್ತೊಂದು ಗುಣ ಅಂದರೆ ಮರೆಗುಳಿತನವನ್ನು ಕಡಿಮೆ ಮಾಡುತ್ತದೆ. ಸೇಬಿನಲ್ಲಿರುವ quercetin ಎಂದು ಕರೆಯಲ್ಪಡುವ ಅತ್ಯಂತ ಪರಿಣಾಮಕಾರಿಯಾದ ಆಂಟಿ ಆಕ್ಸಿಡೆಂಟ್ ನೀಡುತ್ತದೆ. ಅಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಉಪಯುಕ್ತವಾಗಿದೆ ಸೇಬು.