ತನ್ನ ಅಣ್ಣ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದರು ಕೂಡ ತಂಗಿ ತನ್ನ ಸ್ವಾಭಿಮಾನಿ ಜೀವನವನ್ನು ನಡೆಸುತ್ತಿದ್ದಾರೆ, ಅಷ್ಟಕ್ಕೂ ಅವರು ಯಾರು ಯಾವ ರಾಜ್ಯ ಅನ್ನೋದನ್ನ ಮುಂದೆ ಡಿಟೇಲ್ ಆಗಿ ತಿಳಿಸುತ್ತೇವೆ ಬನ್ನಿ.
ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಆಗಿರುವಂತ ಯೋಗಿ ಆದಿತ್ಯನಾಥ್ ಇವರ ನಿಜವಾದ ಹೆಸರು ಅಜಯ್ ಮೋಹನ್ ಬಿಶ್ತ್ ಎಂಬುದಾಗಿ ಇವರು ಆ ರಾಜ್ಯದ ಜನರ ಒಳ್ಳೆಯದಕ್ಕಾಗಿ ತಮ್ಮ ಒಡ ಹುಟ್ಟಿದವರನ್ನು ಬಿಟ್ಟು ಚಿಕ್ಕವನಿಂದಲೇ ಸನ್ಯಾಸತ್ವ ಸ್ವೀಕರಿಸಿದವರು.
ಇವರ ಕುಟುಂಬಂದ ಚಿಕ್ಕ ಪರಿಚಯ ಹೀಗಿದೆ: ಮೂವರು ಅಣ್ಣ ತಮ್ಮಂದಿರು ಮತ್ತು ಮೂವರು ಅಕ್ಕ ತಂಗಿಯರು. ಒಬ್ಬ ಸಹೋದರ ಚೀನಾ ಬಾರ್ಡರ್ ನಲ್ಲಿ ವೀರ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇನ್ನುಳಿದವರು ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಒಬ್ಬ ಸಹೋದರಿ ಉತ್ತರ ಪ್ರದೇಶದ ಕುಗ್ರಾಮದಲ್ಲಿ ಒಂದು ಚಿಕ್ಕ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.
ನಾವು ನಿಮಗೆ ಹೇಳಲು ಹೊರಟಿರೋದು ಯೋಗಿ ಆದಿತ್ಯ ನಾಥ್ ಅವರ ತಂಗಿಯ ಸ್ವಾಭಿಮಾನಿ ಬದುಕಿನ ಕಥೆಯನ್ನು ಹೆಸರು ಶಶಿ ಸಿಂಗ್ 25 ವರ್ಷದಿಂದ ಅಣ್ಣ ಯೋಗಿ ಆದಿತ್ಯನಾಥ್ ಗೆ ರಾಕಿ ಕಟ್ಟಲು ಎದುರು ನೋಡುತ್ತಿದ್ದಾರೆ, ಇವರು.ಯೋಗಿ ಆದಿತ್ಯನಾಥ್ ಮುಖ್ಯ ಮಂತ್ರಿಯಾದರು ಸಹ ಅವರ ಕುಟುಂಬಸ್ಥರಲ್ಲಿ ಯಾವುದೇ ಬದಲಾವಣೆ ಇಲ್ಲ.
ಅಷ್ಟೇ ಅಲ್ಲದೆ ಯೋಗಿ ಅವರಿಂದ ಯಾವುದೇ ಸಹಾಯವನ್ನು ಬಯಸೋದಿಲ, ಈಗಿನ ರಾಜಕಾರಣಿಗಳು ಅಧಿಕಾರಕ್ಕೆ ಬಂದರೆ ಸಾಕು ಎಲ್ಲರ ಹೆಸರಲ್ಲಿಯೂ ಆಸ್ತಿ ಮಾಡಿಡುತ್ತಾರೆ ಹಾಗೂ ಸಂಬಂಧಿಕರಿಗೆ ಅವರಿಗೆ ಇವರಿಗೆ ಅಂತ ತಮ್ಮವರಿಗೆ ಕೋಟಿಗಟ್ಟಲೆ ಅಸ್ತಿ ಮಾಡುವ ರಾಜಕಾರಣಿಗಳು ಪ್ರಸ್ತುತ ದಿನಗಳಲಿದ್ದಾರೆ, ಆದರೆ ಯೋಗಿ ಅವರು ಇಂತಹ ರಾಜಾಕಾರಣಿಗಳ ಪಟ್ಟಿಯಲ್ಲಿ ನಿಲ್ಲದೆ ಎಷ್ಟೋ ಜನಕ್ಕೆ ವಿಶೇಷವಾಗಿ ಕಾಣುತ್ತಾರೆ.
ಯೋಗಿ ಆದಿತ್ಯನಾಥ್ ಅವರ ತಂಗಿಯ ಬಳಿ ನಿಮ್ಮ ಅಣ್ಣ ಮುಖ್ಯ ಮಂತ್ರಿ, ನಿಮಗೆ ಅವರು ಯಾವುದೇ ಸಹಾಯ ಮಾಡುವುದಿಲ್ಲ ಎಂದು ಬೇಜಾರಿದೆಯಾ ಎಂದು ಈಕೆಯನ್ನ ಕೇಳಿದರೆ ಈಕೆ ಏನು ಹೇಳುತ್ತಾರೆ ಗೊತ್ತೇ, ನನ್ನ ಅಣ್ಣ ಜನಸೇವೆಗಾಗಿ ಮನೆಬಿಟ್ಟು ಹೊರಟುಹೋದರು, ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಅವರಿಂದ ನಾವು ಏನನ್ನು ಆಶಿಸುವುದಿಲ್ಲ, ನಮ್ಮಿಂದ ಅವರಿಗೆ ಕೆಟ್ಟ ಹೆಸರು ಬರದಿದ್ದರೆ ಸಾಕು ಎನ್ನುತ್ತಾರೆ. ಇವರ ಈ ಸ್ವಾಭಿಮಾನಿ ಬದಕನ್ನು ನೋಡಿ ಹಲವು ರಾಜಕಾರಣಿಗಳು ಕಲಿಯಬೇಕಾದದ್ದು ಇದೆ.