ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕ ರಾಜ್ಯ ದೇವಾಲಯಗಳ ತವರೂರು. ಈ ನೆಲದ ಮಣ್ಣಿನಲ್ಲಿ ನಿರ್ಮಿಸಿದ ದೇಗುಲಗಳಿಗೆ ಲೆಕ್ಕವೇ ಇಲ್ಲ. ನಮ್ಮ ರಾಜ್ಯದಲ್ಲಿ ಬೇಲೂರು ಹಳೇಬೀಡು ಅಂತಹ ವಾಸ್ತುಶಿಲ್ಪ ಕಲಾ ಕುಸುರಿಗಳಿಂದ ಕೆತ್ತಿದ ದೇವಾಲಯಗಳು ಇವೆ, ಭಕ್ತರ ಭಕ್ತಿಗೆ ಒಲಿವ ಪರಮೇಶ್ವರನಿಗೆ ನಿರ್ಮಿಸಿದ ಗೋಕರ್ಣ, ಧರ್ಮಸ್ಥಳ ಎಂಬ ಭಕ್ತಿಯ ತಾಣಗಳು ನಮ್ಮಲ್ಲಿವೆ. ಸಾಮಾನ್ಯವಾಗಿ ದೇವಸ್ಥಾನಗಳನ್ನು ತಳಪಾಯ ಹಾಕಿ ನಿರ್ಮಾಣ ಮಾಡುತ್ತಾರೆ ಆದ್ರೆ ಇವತ್ತು ನಾವು ನಿಮಗೆ ಪರಿಚಯ ನೀಡುವುದಕ್ಕೆ ಹೊರಟಿರುವ ದೇವಸ್ಥಾನವನ್ನು ತಳಪಾಯ ಹಾಕಿ ನಿರ್ಮಾಣ ಮಾಡಿಲ್ಲವಂತೆ. ಬನ್ನಿ ಹಾಗಾದರೆ ತಳಪಾಯ ಇಲ್ಲದೆ ನಿರ್ಮಾಣ ಆಗಿರೋ ಆ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಏನೇನು ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಕುರುಡುಮಲೆ ಯ ಗಣೇಶ ದೇಗುಲದ ಸಮೀಪ ದಲ್ಲಿ ನಿರ್ಮಿತ ಆಗಿರುವ ಸಾಕಷ್ಟು ಪುರಾತನವಾದ ಸೋಮೇಶ್ವರ ದೇವಾಲಯ ಇದ್ದು, ಈ ದೇಗುಲವನ್ನು ಚೋಳರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಿರುವ ಈ ದೇವಾಲಯದ ಮುಖ್ಯ ಗರ್ಭಗುಡಿ ಒಳಗಡೆ ಪರಮೇಶ್ವರನು ಲಿಂಗ ರೂಪದಲ್ಲಿ ನೆಲೆಸಿದ್ದು, ಈ ಕ್ಷೇತ್ರಕ್ಕೆ ಹೋದರೆ ಪಾಪಗಳು ಕಳೆದು ಕಾಶಿಗೆ ಹೋದಷ್ಟೇ ಪುಣ್ಯ ಬರುತ್ತೆ ಎಂದು ಹೇಳಲಾಗುತ್ತದೆ. ಇಲ್ಲಿರುವ ಶಿವಲಿಂಗವನ್ನಾ ಕೌಟಿಲ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರು ಎಂದು ಐತಿಹ್ಯ ಇದ್ದು, ಚಿನ್ಮಯ ರೂಪನಾದ ಭಗವಂತನ ಎದುರಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಮನದ ಕಾಮನೆಗಳು ಎಲ್ಲವೂ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ.

ರಾಜ ರಾಜ ಚೊಳರಿಂದ ನಿರ್ಮಿತವಾದ ಈ ದೇವಾಲಯದ ವಿಶೇಷತೆ ಏನಂದ್ರೆ ಯಾವುದೇ ತಳಪಾಯ ಹಾಕದೆ ನಿರ್ಮಾಣ ಮಾಡಿದ್ದಾರೆ ಎನ್ನುವುದು. ಅಲ್ಲದೆ ಅರ್ಧ ಭಾಗವನ್ನು ಜಕಣಾಚಾರಿ ಕೆತ್ತಿದರೆ, ಇನ್ನೂ ಅರ್ಧ ಭಾಗವನ್ನು ಜಕಣಾಚಾರಿ ಯ ಮಗ ದಂಕಣಚಾರಿ ಕೆತ್ತಿದ್ದಾರೆ ಎಂದು ಹೇಳಲಾಗುತ್ತದೆ. ಸೋಮೇಶ್ವರನು ನೆಲೆಸಿರುವ ಈ ದೇಗುಲವು ಅತೀ ಹೆಚ್ಚು ಜನರನ್ನು ತನ್ನತ್ತ ಸೆಳೆಯಲು ಕಾರಣ ಇಲ್ಲಿರುವ ಕಲಾ ಕುಸುರಿಯೆ ಕಾರಣ. ದೇಗುಲದ ಮುಂಭಾಗದಲ್ಲಿ ಪಂಜರದ ಒಳಗಡೆ ಇರುವ ಗಣಪತಿ ಮೂರ್ತಿಯನ್ನು ನೋಡಬಹುದು. ಇನ್ನೂ ಗರ್ಭಗುಡಿ, ನವರಂಗ, ಮುಖ ಮಂಟಪ, ಸುಖಾಸೀನ ಇರುವ ವಿಶಾಲವಾದ ದೇವಾಲಯ ಒಳ ಪ್ರಕರಾದಲ್ಲಿ ಅಷ್ಟ ಮೂಲೆಗಳು ಇರುವ ಶಿಲಾ ಸ್ತಂಭಗಳ ಮೇಲೆ ಅನೇಕ ಬಗೆಯ ದೇವರ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದ್ದು ಇವು ನೋಡುಗರನ್ನು ಕಣ್ ಮನವನ್ನು ತಣಿಸುತ್ತದೆ. ದೇಗುಲವನ್ನು ಪ್ರವೇಶಿಸುವ ದ್ವಾರದಲ್ಲಿ ಮುಖ ಮಂಟಪ ಇದ್ದು, ದೇಗುಲದ ಒಳ ಕಂಬದ ಮೇಲೆ ಉಬ್ಬು ಶಿಲ್ಪಗಳನ್ನೂ ಸುಂದರವಾಗಿ ಚಿತ್ರಿಸಲಾಗಿದೆ.

ಭಕ್ತರನ್ನು ಅನುಗ್ರಹಿಸುತ್ತಿರುವ ಶಿವ ಪಾರ್ವತಿಯ ಚಿತ್ರ, ನಂದಿಯ ಮೇಲೆ ಅಭಯ ಹಸ್ತ ಇರಿಸಿದ ಶಿವನ ಚಿತ್ರ, ಯಕ್ಷ ಗಂಧರ್ವ ಕಿನ್ನಾರರಿಂದ ಸೇವಿತನಾದ ಶಿವ, ಅಂಧಕಾಸುರಾ ನನ್ನು ಸಂಹರಿಸುತ್ತಿರುವ ಶಿವನ ಚಿತ್ರ ಹೀಗೆ ಇನ್ನೂ ಅನೇಕ ಬಗೆಯ ಶಿವನ ಲೀಲೆಗಳನ್ನೂ ಸಾರುವ ಚಿತ್ರಗಳನ್ನು ಅತ್ಯಂತ ಸುಂದರವಾಗು ಕೆತ್ತಲಾಗಿದೆ. ಇಲ್ಲಿಗೆ ಹೋದರೆ ವಾಸ್ತುಶಿಲ್ಪದ ಕಲಾ ಲೋಕದೊಳಗೆ ಮನಸ್ಸು ಲೀನವಾಗಿ ಬಿಡುತ್ತೆ. ದೇಗುಲವು ಹೊರ ನೋಟದಿಂದ ಮಾತ್ರವಲ್ಲದೆ ಒಳ ಭಾಗದಿಂದ ಕೂಡ ಅತ್ಯಂತ ಸುದರವಾಗಿದ್ದು, ಆಲಯದ ಒಳಗಡೆ ಶ್ರೀದೇವಿ ಭೂದೇವಿ ಸಮೇತನಾಗಿ ವೆಂಕಟೇಶ್ವರನ ಮೂರ್ತಿ ಹಾಗೂ ಕಪ್ಪು ವರ್ಣದ ಶಿಲೆಯಲ್ಲಿ ನಿರ್ಮಿತವಾದ ಅನೇಕ ದೇವರ ಮೂರ್ತಿಗಳು ಭಕ್ತಾದಿಗಳನ್ನು ಮಂತ್ರ ಮುಗ್ಧರನ್ನಗಿಸುತ್ತದೆ. ಇನ್ನೂ ಗರ್ಭ ಗುಡಿಯಲ್ಲಿ ಇರುವ ಸೋಮೇಶ್ವರನಿಗೆ ನಿತ್ಯ ತ್ರಿಕಾಲ ಪೂಜೆಯನ್ನು ಮಾಡಲಾಗುತ್ತದೆ. ಶಿವರಾತ್ರಿ ಹಾಗೂ ಕಾರ್ತಿಕ ಸೋಮವಾರದಂದು ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಸಂಜೆ 3 ರಿಂದ ರಾತ್ರಿ 8.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಬಿಲ್ವಾರ್ಚನೆ, ಅಭಿಷೇಕ ಸೇವೆ, ರುದ್ರಾಭಿಷೇಕ, ಅಲಂಕಾರ ಸೇವೆ ಗಳನ್ನು ಮಾಡಿಸಬಹುದು. ಭಕ್ತರು ಬೇಡಿದ ವರವನ್ನು ಕ್ಷಣ ಮಾತ್ರದಲ್ಲಿ ಪೂರೈಸುವ ಸೋಮೇಶ್ವರನ ಈ ದಿವ್ಯ ದೇವಾಲಯ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಎಂಬ ಕ್ಷೇತ್ರದಲ್ಲಿ ಇದೆ. ಸಾಧ್ಯವಾದರೆ ಜೀವಾಮಾದಲ್ಲಿ ಈ ಸುಂದರ ಕಲಾಕೃತಿ ಇರುವ ದೇವಾಲಯವನ್ನು ನೋಡಿ ಆ ದೇವನ ಆಶೀರ್ವಾದ ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *