ಹತ್ತರಿಂದ ಇಪ್ಪತ್ತು ಮಿಲಿ ತುಳಸಿ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಚರ್ಮದ ತುರಿಕೆ, ಉರಿ ಮತ್ತು ಮೈಯಲ್ಲಿ ಆಗುವ ಗಂದೆಗಳು ಗುಣವಾಗುತ್ತದೆ.ತುಳಸಿಯ ಬೀಜವನ್ನು ಅಕ್ಕಿತೊಳೆದ ನೀರಿನಲ್ಲಿ ಅರೆದು ನಿಯಮಿತವಾಗಿ ಸೇವಿಸಿದರೆ ಕಟ್ಟಿಕೊಂಡಿರವ ಮೂತ್ರವು ಸರಾಗವಾಗಿ ಹೋಗುತ್ತದೆ.
ಪ್ರತಿ ದಿನ 5 ತುಳಸಿ ಎಲೆಯನ್ನು ನೀರಿನೊಂದಿಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಬುದ್ಧಿಶಕ್ತಿ ಹಾಗೂ ಸ್ಮರಣಶಕ್ತಿ ಹೆಚ್ಚುತ್ತದೆ.ಹಲ್ಲು ನೋವಿದ್ದರೆ 2 ರಿಂದ 4 ತುಳಸಿ ಎಲೆ ಜತೆಗೆ 2ರಿಂದ 3 ಕಾಳು ಮೆಣಸನ್ನು ಸೇರಿಸಿ ಜಜ್ಜಿ ಮಾತ್ರೆಗಳನ್ನು ಮಾಡಿ. ನೋವಿರುವ ಹಲ್ಲಿನ ನಡುವೆ ಇಟ್ಟುಕೊಂಡರೆ ನೋವು ತಕ್ಷ ಣ ಮಾಯವಾಗುತ್ತದೆ.
ತುಳಸಿಯ ಎಲೆ, ಕಾಂಡ, ಬೇರು, ಹೂವು ಎಲ್ಲವನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಯನ್ನು 2 ರಿಂದ 5 ಗ್ರಾಂ ಹಾಲಿನ ಜತೆ ನಿಯಮಿತವಾಗಿ ಸೇವಿಸಿದರೆ ಸಂಧಿಗಳ ನೋವು ಕಡಿಮೆಯಾಗುತ್ತದೆ.ಗಂಟಲು ರೋಗ, ಬಾಯಿ ರೋಗ ಮತ್ತು ಹಲ್ಲಿನ ಸಮಸ್ಯೆ ಇದ್ದಲ್ಲಿ ತುಳಸಿ ರಸದ ಜತೆ ಅರಿಶಿನ ಮತ್ತು ಉಪ್ಪನ್ನು ಸೇರಿಸಿ ನಿಯಮಿತವಾಗಿ ಬಾಯಿ ಮುಕ್ಕಳಿಸಿದರೆ, ಗಂಟಲು, ಬಾಯಿ ಮತ್ತು ಹಲ್ಲಿನ ಸಮಸ್ಯೆಗಳು ಗುಣವಾಗುತ್ತದೆ.
10 ಮಿಲಿ ತುಳಸಿ ರಸಕ್ಕೆ 2 ರಿಂದ 3 ಗ್ರಾಂ ಕರಿಮೆಣಸಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಸೇವಿಸಿದರೆ ಕೆಮ್ಮು ಗುಣವಾಗುತ್ತದೆ .