ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯದಲ್ಲಿರುವ ಹಲವಾರು ಜಿಲ್ಲೆಗಳ ಪೈಕಿ ತುಳುನಾಡು ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಸಂಪ್ರದಾಯ ಗಳನ್ನಾ ಒಳಗೊಂಡಿದೆ. ಭೂತಾರಾಧನೆಗೆ ಹೆಸರಾದ ತುಳುನಾಡಿನಲ್ಲಿ ಕೊರಗಜ್ಜನ್ನನ್ನು ಎಷ್ಟು ಭಕ್ತಿಯಿಂದ ಪೂಜಿಸಲಾಗುತ್ತದೆ ಅಷ್ಟೇ ಭಕ್ತಿಯಿಂದ ಈ ದೈವಗಳನ್ನು ಪೂಜಿಸಲಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಸರ್ವ ಸಂಕಷ್ಟಗಳನ್ನು ಪರಿಹರಿಸುವ ತುಳುನಾಡಿನ ಪುರಾತನವಾದ ಕಾರಣೀಕ ಕ್ಷೇತ್ರವನ್ನು ದರ್ಶನ ಮಾಡಿ ಬರೋಣ. ಸುಮಾರು 400 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಪಣೋಲಿ ಬೈಲು ತುಳುನಾಡಿನ ಪ್ರಮುಖ ಕಾರಣೀಕ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಕಲ್ಲುರ್ಟಿ ಹಾಗೂ ಕಲ್ಗುದ ದೈವಗಳು ನೆಲೆ ನಿಂತು ಭಕ್ತರನ್ನು ಸಲಹುತ್ತಿದ್ದಾರೆ. ಇಲ್ಲಿ ನೆಲೆಸಿರುವ ಕಲ್ಲುರ್ಟಿ ದೈವ ವನ್ನಾ ಮನಸಲ್ಲಿ ನೆನೆದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಕಷ್ಟ, ಅನಾರೋಗ್ಯ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ಆಸ್ತಿ ತಕರಾರು ಸಮಸ್ಯೆ, ಆರ್ಥಿಕ ಸಮಸ್ಯೆ, ವಿದ್ಯಾಭ್ಯಾಸ ಸಮಸ್ಯೆ, ಕೋರ್ಟ್ ಕಚೇರಿ ಸಮಸ್ಯೆ ಹೀಗೆ ಬದುಕಿನಲ್ಲಿ ಏನೇ ಸಮಸ್ಯೆಗಳು ಇರಲಿ ಇಲ್ಲಿನ ಕಲ್ಲುರ್ಟಿ ತಾಯಿಗೆ ಪ್ರಿಯವಾದ ಆಗೆಲು ಸೇವೆಯನ್ನು ಮಾ ಡೂಯವುದಾಗಿ ಹರಕೆ ಹೊತ್ತರೆ ಆ ಸಮಸ್ಯೆಗಳು ಎಲ್ಲವೂ ಪರಿಹಾರ ಆಗುತ್ತೆ ಎನ್ನುವುದು ಈ ದೈವವನ್ನು ನಂಬಿ ಬದುಕಿನಲ್ಲಿ ಒಳಿತನ್ನು ಕಂಡ ಭಕ್ತರ ಮನದ ಮಾತಾಗಿದೆ.
ಪಡೋಲೀ ಬೈಲು ತಾಯಿ ಕಲ್ಲುರ್ಟಿ ಎಂಬ ಹೆಸರನ್ನು ಮನದಲ್ಲಿ ಹೇಳಿದರೆ ಸಾಕು ಈ ತಾಯಿ ಒಲಿದು ಬರ್ತಾಳೆ. ಮನಸಾರೆ ತಾಯಿಯನ್ನು ನೆನೆದು ಕಷ್ಟವನ್ನು ಆಕೆಯಲ್ಲಿ ಹೇಳಿಕೊಂಡ ಅದೆಷ್ಟೋ ಭಕ್ತರ ಮನದ ಅಭಿಲಾಷೆಗಳು ಈಡೇರಿದ ನಿದರ್ಶನಗಳು ಹಲವಾರು ಇವೆ. ಕಲ್ಲುರ್ಟಿ ತಾಯಿಯು ನಂಬಿ ಬಂದ ಭಕ್ತರನ್ನು ಕೈ ಬಿಡೋದಿಲ್ಲ ಕಾರಣಕ್ಕಾಗಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಹೀಗೆ ಎಲ್ಲಾ ಜನಾಂಗದವರು ಇಲ್ಲಿಗೆ ಬಂದು ಕಲ್ಲುರ್ಟಿ ತಾಯಿಯ ಬಳಿ ತಮ್ಮ ಕಷ್ಟವನ್ನು ದೂರ ಮಾಡುವಂತೆ ಬೇಡಿಕೊಳ್ಳುತ್ತಾರೆ. ಎಷ್ಟೋ ಜನರು ಇಷ್ಟಾರ್ಥ ಸಿದ್ಧಿ ಆದರೆ ಪಟ್ಟೆ ಸೀರೆ, ಬೆಳ್ಳಿ ಬಂಗಾರದ ಆಭರಣಗಳನ್ನು ನೀಡುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಇನ್ನೂ ಅತ್ಯಂತ ಶಕ್ತಿಶಾಲಿ ಆದ ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳು ಈ ಸ್ಥಳಕ್ಕೆ ಬಂದು ನೆಲೆಸುವುದರ ಹಿಂದೆ ಒಂದು ಘಟನೆ ಕೂಡ ಇದೆ. ಉಪ್ಪಿನಂಗಡಿಯ ಮೈಲಾರ ಎಂಬ ವಿದ್ವಾಂಸ ಕುಲ ದೇವರಾಗಿ ಬೆಳಗಿದ ಕಲ್ಲುರ್ಟಿ ಮಾತು ಕಲ್ಕುಡ ದೈವಗಳು ಈ ಸ್ಥಳಕ್ಕೆ ಬರುವುದಕ್ಕೆ ಮುಂಚೆ ಬಂಟ್ವಾಳದ ಸಜೀಬ ಎಂಬ ಊರಿಗೆ ಭೇಟಿ ನೀಡುತ್ತಾರೆ. ಸಜೀಬದಲ್ಲಿ ನಲ್ಕೈತ್ತಾಯ, ನಡಿಯಾಳು, ದಯಂಗಲ್, ಮತ್ತು ಉಳ್ಳಾಲ್ತಿ ಅಮ್ಮ ಎಂಬ ದೈವಗಳು ವಾಸವಾಗಿರುತ್ತವೆ. ಒಂದು ಬಾರಿ ವಿತ್ತಮಜಲು ಎಂಬಲ್ಲಿ ಈ ದೈವಗಳು ನೇಮ ನಡೆಯುವಾಗ ಕಲ್ಲುರ್ಟಿ ಮತ್ತು ಕಲ್ಕುಡ ದೈವಗಳು ತಮಗೂ ಈ ಸ್ಥಳದಲ್ಲಿ ಜಾಗವನ್ನು ನೀಡಬೇಕು ಎಂದು ಕೇಳಿಕೊಂಡಾಗ ಅಲ್ಲಿನ ಗುರಿಕಾರ ಜಾಗವನ್ನು ನೀಡಲು ಒಪ್ಪುವುದಿಲ್ಲ. ಆಗ ಕೋಪಗೊಂಡ ಕಲ್ಲುರ್ಟಿ ತಾಯಿ ಯು ದೈವದ ಸಿರಿ ಮುಡಿಗೆ ಬೆಂಕಿ ಹಾಕಿ ತನ್ನ ಶಕ್ತಿಯನ್ನು ತೋರುತ್ತಾಳೆ.
ನಂತರ ಕಲ್ಲುರ್ಟಿಯ ಮಹಿಮೆಯನ್ನು ಅರಿತ ಸಜೀಬ ಮಾಕನೆಯ ದೈವಗಳು ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳಿಗೆ ನೆಲೆ ನಿಲ್ಲಲು ಜಾಗವನ್ನು ನೀಡ್ತಾರೆ. ಕೆಲ ಕಾಲದ ನಂತರ ಕುಲಾಲ ವಂಶಕ್ಕೆ ಸೇರಿದ ಗುಡ್ಯ ಮೂಲನು ಕಲ್ಲುರ್ಟಿ ಮತ್ತು ಕಲ್ಕುಡ ದೈವಗಳು ನೆಲೆಸಿರುವ ಕಲ್ಲನ್ನು ಹೊತ್ತುಕೊಂಡು ಸಂಚಾರ ಬೆಳೆಸಿದ ಆತ ಪಣೋಲಿ ಬೈಲಿನಲ್ಲಿ ಆಯಾಸದಿಂದ ಕಲ್ಲನ್ನು ಕೆಳಗೆ ಇಟ್ಟು ಬಿಡುತ್ತಾನೆ. ಇದರಿಂದ ಕಲ್ಲುರ್ಟಿ ಮತ್ತು ಕಲ್ಕುಡ ಗಳು ಇಲ್ಲಿಯೇ ಶಾಶ್ವತವಾಗಿ ನೆಲೆ ನಿಂತರು ಎಂದು ಇಲ್ಲಿನ ಸ್ಥಳ ಐತಿಹ್ಯದ ಲ್ಲಿ ತಿಳಿಸಲಾಗಿದೆ. ಪ್ರತಿ ವರ್ಷವೂ ಇಲ್ಲಿ ಕಾವೇರಿ ಸಂಕ್ರಮಣದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ಕಲ್ಕುಡ ಸ್ವಾಮಿಯ ಕೋಲಾವನ್ನು ವಿಧಿ ವತ್ತಾಗಿ ಆಚರಿಸಲಾಗುತ್ತದೆ. ಕೋಲಾ ನಡೆಯುವ ಸಂದರ್ಭದಲ್ಲಿ ಇಲ್ಲಿ ಜನ ಜಾತ್ರೆಯೇ ನೆರೆದಿರುತ್ತದೆ. ಸೋಲ್ಯ, ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಮಂಗಳೂರು, ಕುಂದಾಪುರ, ಕಳ, ಮೂಡಬಿದಿರೆ ಮಾತ್ರವಲ್ಲದೆ ಕರ್ನಾಟಕದ ಇತರ ಭಾಗಗಳಿಂದ ಭಕ್ತರು ಬಂದು ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳಿಗೆ ಪೂಜೆಯನ್ನು ಸಲ್ಲಿಸಿ ಹೋಗುತ್ತಾರೆ. ವಿಶಾಲವಾದ ಪ್ರಾಂಗಣ, ಪ್ರದಕ್ಷಿಣಾ ಪಥ, ಹಾಗೂ ಸುಂದರವಾದ ಗರ್ಭ ಗೃಹವನ್ನು ಒಳಗೊಂಡ ಈ ದೇಗುಲದಲ್ಲಿ ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಆಗೆಲೂ ಸೇವೆಯನ್ನು ಸಲ್ಲಿಸಬಹುದು. ಭಕ್ತಾದಿಗಳು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಇಲ್ಲಿರುವ ದೈವಗಳ ದರ್ಶನ ಮಾಡಬಹುದು. ಈ ಪುಣ್ಯ ಕ್ಷೇತ್ರವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೆ. ಮಂಗಳೂರು ಪುತ್ತೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಮಿಸಿರೊಡ್ ಸಮೀಪದ ಮೇಲ್ಕರ್ ನಿಂದಾ ಮಾರ್ಗವಾಗಿ ನಾಲ್ಕು ಕಿಮೀ ಸಾಗಿದರೆ ಈ ಕ್ಷೇತ್ರವನ್ನು ತಲುಪಬಹುದು. ಸಾಧ್ಯವಾದರೆ ತುಳುನಾಡಿನ ಪ್ರಮುಖ ದೈವಗಳು ಆದ ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳ ದರ್ಶನ ಮಾಡಿ ಬನ್ನಿ. ಶುಭದಿನ.