ಸಾಮಾನ್ಯವಾಗಿ ಹಳ್ಳಿ ಕಡೆ ಈ ಸೊಪ್ಪನ್ನು ಹೊಲದಲ್ಲಿ ಬೆಳೆದು ತಿನ್ನುತ್ತಾರೆ. ಆದ್ದರಿಂದ ಅವರಿಗೆ ಅಷ್ಟಾಗಿ ರೋಗಗಳು ಬರುವುದಿಲ್ಲ. ಆದರೆ ಈ ಸೊಪ್ಪು ನಗರಗಳಲ್ಲಿ ತುಂಬಾ ಕಡಿಮೆ ಪರಿಚಯ. ಆದರೆ ಈ ಸೊಪ್ಪನ್ನು ತಿನ್ನುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳು ನಮಗೆ ಸಿಗುತ್ತವೆ. ಹಾಗಾದರೆ ಏನೇನು ಲಾಭಗಳು ಸಿಗುತ್ತವೆ ತಪ್ಪದೆ ತಿಳಿಯೋಣ ಬನ್ನಿ.
ದಂಟು ಸೊಪ್ಪಿನ ರಸ ಅತ್ಯುತ್ತಮ ತ್ರಾನಿಕ, ಈ ಸೊಪ್ಪಿನಲ್ಲಿ ಹೆಚ್ಚಾಗಿ ಕಬ್ಬಿನಾಂಶ ತುಂಬಿದೆ. ಈ ಸೊಪ್ಪನ್ನು ಸೂರ್ಯ ಮುಳುಗಿದ ನಂತರ ಗಿಡದಿಂದ ಕಿತ್ತು ತಂದು ಹದವಾಗಿ ಬೇಯಿಸಿ ಸೇವಿಸುವುದರಿಂದ ಸೊಪ್ಪಿನಲ್ಲಿರುವ ಕಬ್ಬಿನಾಂಶ ನಷ್ಟವಾಗುವುದಿಲ್ಲ, ದಂಟುಸೊಪ್ಪು ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಜ್ವರದಿಂದ ನರಳುವ ರೋಗಿಗೆ ದಂಟು ಸೊಪ್ಪಿನ ಸಾರು, ಪಲ್ಯ ಉಣಿಸುವುದರಿಂದ ಜ್ವರ ನಿಲ್ಲುವ ಸಾಧ್ಯತೆ ಉಂಟು, ಅತಿಸಾರದಿಂದ ನರಳುವ ರೋಗಿಗಳಿಗೆ ದಂಟು ಸೊಪ್ಪು ಉತ್ತಮ ಆಹಾರವಾಗಿದೆ. ಅಷ್ಟೇ ಅಲ್ಲದೆ ರಕ್ತದ ಕೊರತೆ, ದೃಷ್ಟಿ ದೋಷ, ಮತ್ತೆ ಮತ್ತೆ ಕಾಡುವ ನಗಡಿ, ಕಾಮಾಲೆ, ಬೆಳವಣಿಗೆಯಲ್ಲಿನ ಕುಂಠಿತ, ಸಂಭೋಗ ಶಕ್ತಿ ಹರಣ, ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಧಿಗಳು ಇತ್ಯಾದಿ ಕಾಯಿಲೆಗಳಿಗೆ ದಂಟುಸೊಪ್ಪಿನ ಸೇವನೆ ಹೆಚ್ಚು ಲಾಭವನ್ನು ಉಂಟುಮಾಡುತ್ತದೆ.
ಹಸಿ ದಂಟು ಸೊಪ್ಪಿನಿಂದ ರಸತೆಗೆದು ತಲೆಯ ಕೂದಲಿಗೆ ಹಚ್ಚುತ್ತಿದ್ದರೆ ಕೂದಲು ಸಮೃದ್ಧಿಯಾಗಿ ಬೆಳೆಯುವುದು, ರೇಷ್ಮೆಯಂತೆ ನುಣುಪಾಗಿರುವಂತೆ ಹಾಗೂ ಹೊಳಪಿನಿಂದ ಕೂಡಿದ ಕಪ್ಪು ಬಣ್ಣಕ್ಕೆ ಬರುವುದು, ಅಪ್ರಾಪ್ತ ವಯಸ್ಸಿನಲ್ಲಿ ನೆರೆಕೂದಲು ಕಾಣಿಸಿಕೊಳ್ಳುವುದಿಲ್ಲ.