ಕೆಲವೊಬ್ಬರು ತುಂಬಾ ಸಣ್ಣ ಇರುತ್ತಾರೆ. ಸಾಕಷ್ಟು ಪ್ರೋಟೀನ್ ಗಳ ಕೊರತೆ ಇರುತ್ತೆ ಎಂದರ್ಥ. ಏನು ತಿನ್ನೋದು ಏನು ಬಿಡೋದು ಅನ್ನೋದೇ ಗೊತ್ತಾಗಲ್ಲ. ಅಷ್ಟೆ ಅಲ್ಲ ವೈದ್ಯರು ಅದು ಇದು ಅಂತಾ ಸಲಹೆ ಕೇಳ್ತಾನೇ ಇರ್ತಾರೆ. ಇಂಥವರಿಗೆ ಕೆಲವೊಂದು ಟಿಪ್ಸ್ ಇಲ್ಲಿದೆ. ಏನು ತಿನ್ನೋದರಿಂದ ತೂಹ ಹೆಚ್ಚು ಮಾಡಿಕೊಳ್ಳಬಹುದು ಅಂತೀರಾ ಹಾಗಾದರೆ ಇಲ್ಲಿ ನೋಡಿ.
ಹೌದು, ತೂಕ ಹೆಚ್ಚಿಸಿಕೊಳ್ಳಲು ಮನೆ ಮದ್ದುಗಳು, ಸಾಕಷ್ಟು ಪ್ರೊಟೀನ್ ಯುಕ್ತ ಹಣ್ಣುಗಳು ಇದ್ದೇ ಇವೆ. ಆದರೆ ಯಾವುದನ್ನು ತಿಂದರೆ ತೂಕ ಹೆಚ್ಚಿಸಿ ಕೊಳ್ಳಬಹುದು ಎಂಬುದು ಗೊತ್ತಿರಬೇಕಷ್ಟೆ.
ಮೊಸರು ತಿನ್ನುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದಾಗಿದೆ. ಮೊಸರಿನಲ್ಲಿ ಸಕ್ಕರೆ ಅಮೈನೋ ಆಮ್ಲಗಳ ಹಾಗೂ ಕರಗಬಲ್ಲ ಪ್ರೋಟೀನ್ ಗಳಿವರೆ. ಹಾಗಾಗಿ ಇದು ದಪ್ಪ ಆಗಲು ಸಹಾಯ ಮಾಡುತ್ತದೆ.
ಇನ್ನು ಧವಸ ದಾನ್ಯಗಳನ್ನು ಹೆಚ್ಚಾಗಿ ತಿನ್ನುವುದರಿಂದ ತೂಕ ಹೆಚ್ಚಿಸಕೊಳ್ಳಬಹುದು. ಧವಸ ಧಾನ್ಯ ಗಳಲ್ಲಿ ಜೀವಸತ್ವಗಳು, ಖನಿಜ ಹೇರಳವಾಗಿರುತ್ತದೆ. ಹಾಗಾಗಿ ಹೆಚ್ಚಿನ ರೀತಿಯಲ್ಲಿ ತಿನ್ನುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ತೂಕ ಕೂಡ ಹೆಚ್ಚಾಗುತ್ತದೆ.
ಇನ್ನು ತೂಕ ಹೆಚ್ವಿಸಲು ಬಾಳೆಹಣ್ಣು ಕೂಡ ಹೆಚ್ಚಿನ ಮಹತ್ವ ವಹಿಸುತ್ತದೆ. ಬಾಳೆಹಣ್ಣಿನಲ್ಲಿ ಪ್ಯೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಹೆಚ್ಚಾಗಿದೆ. ಹಾಗಾಗಿಯೇ ಬಾಡಿ ಬಿಲ್ಡರ್ಸ್ ಗಳು ಹೆಚ್ಚಾಗಿ ಈ ಹಣ್ಣು ತಿನ್ನುತ್ತಾರೆ.
ಮೊಟ್ಟೆಯೂ ಕೂಡ ತೂಹ ಹೆಚ್ಚಿಸಿಕೊಂಡು ದಪ್ಪ ಆಗಲು ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್ ಎ ಡಿ ಇ ವಿಟಮಿನ್ ಇರುತ್ತವೆ. ಹಾಗಾಗಿ ಹೆಚ್ಚಿನ ಆರೋಗ್ಯರ ಕೊಲೆಸ್ಟರಾಲ್ ಹಾಗೂ ಪ್ರೊಟೀನ್ ಇದೆ. ಇದನ್ನು ತಿನ್ನುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.