WhatsApp Group Join Now

ಮೊಟ್ಟೆಗಳು: ಮೊಟ್ಟೆಯಲ್ಲಿ ಅಮೈನೋ ಆಮ್ಲದ ಸಾಂದ್ರತೆ ಹೆಚ್ಚಿರುತ್ತದೆ ಅಲ್ಲದೇ ಮೊಟ್ಟೆಯ ಹಳದಿ ಭಾಗದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿರುವುದರಿಂದ ಇದು ದೇಹದ ಕ್ಯಾಲೋರಿ ಕೂಡಾ ಹೆಚ್ಚಿಸುತ್ತದೆ. ದಿನಕ್ಕೆ 2 ಮೊಟ್ಟೆ ತಿಂದರೆ ತೂಕ ಹೆಚ್ಚುತ್ತದೆ. ಪ್ರತಿದಿನ ತೆಂಗಿನಕಾಯಿ ತುರಿಗೆ ಒಣದ್ರಾಕ್ಷಿ ಸೇರಿಸಿ ತಿನ್ನುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಚೀಸ್: ಸಂಪೂರ್ಣ ಹಾಲಿನ ಕೆನೆಯಿಂದ ಮಾಡಿದ ಚೀಸ್ ಅನ್ನು ಪ್ರತಿದಿನ ತಿನ್ನುವುದರಿಂದ ತೂಕ ಜಾಸ್ತಿಯಾಗುತ್ತದೆ. ಇದರಲ್ಲಿರುವ ಪ್ರೋಟೀನ್ ಕೂಡಾ ಆರೋಗ್ಯಕ್ಕೆ ಅತಿ ಅವಶ್ಯಕವಾಗಿದೆ.

ರಾತ್ರಿ ಊಟವನ್ನು ಆದಷ್ಚು ತಡವಾಗಿ ಮಾಡುವುದರಿಂದ ನಿಮ್ಮ ದೇಹಕ್ಕೆ ಯಾವುದೇ ಶಕ್ತಿ ನಷ್ಟವಾಗದೇ ರಾತ್ರಿಯ ಆಹಾರವು ಪೂರ್ತಿಯಾಗಿ ಕೊಬ್ಬಾಗಿ ಪರಿವರ್ತಿತವಾಗುತ್ತದೆ. ಪ್ರತಿದಿನ ಕಡ್ಲೆ ಬೀಜವನ್ನು ರಾತ್ರಿ ನೆನಸಿ ಬೆಳಿಗ್ಗೆ ತಿನ್ನಬೇಕು. ಸತತವಾಗಿ 1 ತಿಂಗಳು ತಿನ್ನುವುದರಿಂದ ಶರೀರದ ತೂಕ ಹೆಚ್ಚಾಗುವುದು.

ಮೊಸರು: ಮೊಸರಿನಲ್ಲಿ ಕೊಬ್ಬಿನ ಅಂಶವಿರುತ್ತದೆ. ಇದು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಸಂಸ್ಕರಿತ ಆಹಾರಗಳಿಂದ ದೂರವಿರಿ: ಸಂಸ್ಕರಿತ ಆಹಾರಗಳಿಂದ ತೂಕ ಹೆಚ್ಚಾಗುವುದೆಂಬ ನಂಬಿಕೆಯು ಹಲವು ಜನರಲ್ಲಿದೆ. ಅದರೆ ಸಂಸ್ಕರಿತ ಆಹಾರಗಳು ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಕೊಬ್ಬಾಗಿ ಪರಿವರ್ತಿಸಿ ದೇಹದಲ್ಲಿ ಶೇಖರಿಸುತ್ತದೆ. ಇದರಿಂದ ಹೃದಯ ಸಂಬಂಧಿ ಖಾಯಿಲೆಗಳು ಬರುವ ಸಂಭವವಿರುತ್ತದೆ. ಹಾಗಾಗಿ ಇಂತಹ ಆಹಾರಗಳಿಂದ ದೂರವಿರಿ.

ಬ್ರೆಡ್‌ಗಳು: ಗೋಧಿಯಿಂದ ಮಾಡಿದ ಬ್ರೆಡ್‌ನಲ್ಲಿ 13 ರಷ್ಟು ಕ್ಯಾಲೋರಿ ಇರುತ್ತದೆ. ಇದರಿಂದ ದೇಹದ ತೂಕ ಜಾಸ್ತಿಯಾಗುತ್ತದೆ. ಬೀನ್ಸ್: ಬೀನ್ಸ್ ಅನ್ನು ಸಾಸ್‌ನೊಂದಿಗೆ ಬೇಯಿಸಿದಾಗ ಇದರಲ್ಲಿ 300 ರಷ್ಟು ಕ್ಯಾಲೋರಿ ಇರುತ್ತದೆ. ಇದು ಕೇವಲ ಪೋಷಕಾಂಶವನ್ನು ಒಳಗೊಂಡ ಆಹಾರ ಮಾತ್ರವಲ್ಲ, ಸುಲಭವಾಗಿ ತೂಕವನ್ನು ಹೆಚ್ಚಿಸಿಕೊಳ್ಳಲೂ ಸಹ ಸಹಾಯಕವಾಗುತ್ತದೆ.

ಬೆಣ್ಣೆಹಣ್ಣು: ಈ ಹಣ್ಣನ್ನು ಸೂಪ್, ಸಲಾಡ್‌ಗಳಲ್ಲಿ ಬಳಸಬಹುದು. ಆರೋಗ್ಯಕರ ಪೋಷಕಾಂಶಗಳು ಮತ್ತು ಅಗತ್ಯ ಕೊಬ್ಬುಗಳನ್ನು ಹೊಂದಿದ ಇದು ಆರೋಗ್ಯಯುತವಾಗಿ ದೇಹದ ತೂಕವನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.

WhatsApp Group Join Now

Leave a Reply

Your email address will not be published. Required fields are marked *