ದಾಂಪತ್ಯವೆಂದರೆ ಜಗಳ ಕಾಮನ್. ಆದರೆ, ಜಗಳವೇ ದಾಂಪತ್ಯವಾಗಿಬಿಟ್ಟರೆ ಬದುಕು ಅಸಹನೀಯವಾಗಿ ಬಿಡುತ್ತದೆ. ಇಂಥ ಜೀವನವಿದ್ದರೆ ವಾಸ್ತುವಿನಲ್ಲಿ ಪರಿಹಾರವಿದೆ.

ಬೆಡ್ ರೂಮಿನಲ್ಲಿ ಡ್ರೆಸ್ಸಿಂಗ್ ಟೇಬಲನ್ನು ಕಿಟಕಿ ಬಳಿ ಯಾವತ್ತೂ ಇಡಬೇಡಿ. ಏಕೆಂದರೆ ಕಿಟಕಿಯಿಂದ ಬರುವ ಬೆಳಕು ಪರಿವರ್ತನೆಯಾಗುವುದರಿಂದ ಟೆನ್ಷನ್ ಹೆಚ್ಚುತ್ತದೆ.

ಬೆಡ್ ಎದುರು ಕನ್ನಡಿ ಇಡಬೇಡಿ. ಹೀಗೆ ಇದ್ದರೆ ದಂಪತಿ ನಡುವೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಿರುತ್ತವೆ.

ಬೆಡ್‌ರೂಮಿನಲ್ಲಿ ಫರ್ನಿಚರ್ ಧನುಷ್ ಆಕಾರದಲ್ಲಿ, ಅರ್ಧಚಂದ್ರಾಕೃತಿ ಮತ್ತು ವೃತ್ತಾಕಾರದಲ್ಲಿ ಇಡಬಾರದು. ಅಲ್ಲಿ ಮಲಗುವವರ ಅರೋಗ್ಯ ಹಾಳಾಗುತ್ತದೆ.

ಬೆಡ್‌ ರೂಮಿನಲ್ಲಿ ಬೆಡ್‌ ಮೇಲೆ ಲೈಟ್ ಬೀಳದಂತೆ ನೋಡಿಕೊಳ್ಳಿ. ಲೈಟ್ ಹಾಸಿಗೆ ಹಿಂದೆ ಅಥವಾ ಎಡ ಬದಿಯಲ್ಲಿ ಇರುವಂತೆ ನೋಡಿಕೊಳ್ಳಿ.

ಮಲಗುವ ಕೋಣೆಯಲ್ಲಿ ಕಿಟಕಿ ಇರಲೇಬೇಕು. ಮುಂಜಾನೆ ಕಿರಣಗಳು ರೂಮಿಗೆ ಬಿದ್ದರೆ ಅದರಿಂದ ಅರೋಗ್ಯ ಉತ್ತಮವಾಗುತ್ತದೆ.

ಮುಖ್ಯ ದ್ವಾರದ ಬಳಿಯೇ ಮಲಗೋ ಕೋಣೆ ಇರಬಾರದು. ಇದರಿಂದ ಅಶಾಂತಿ ಹಾಗೂ ವ್ಯಾಕುಲತೆ ಕಾಡುತ್ತದೆ.

Leave a Reply

Your email address will not be published. Required fields are marked *