ತಿರುಪತಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಅದರ ಮಹಿಮೆ ಹೇಳಲು ಪದಗಳು ಸಿಗುವುದಿಲ್ಲ ಅದು ಜಗತ್ತಿನಲ್ಲಿ ಅತಿ ಶ್ರೀಮಂತವಾದ ದೇವರು ಕೂಡ. ಹಲವಾರು ಜನ ತಿರುಪತಿಗೆ ಕಾಣಿಕೆಯನ್ನು ನೀಡುತ್ತಾರೆ. ಆದರೆ ಇತ್ತೀಚಿಗೆ ಕೋವಿಡ್-19 ನಿರ್ಬಂಧದ ಸಡಿಲಿಕೆ ಬಳಿಕ ಶ್ರೀವೆಂಕಟೇಶನ ದರ್ಶನ ಪುನರಾರಂಭದ ನಂತರ ತಿರುಮಲ ತಿರುಪತಿ ದೇವಸ್ಥಾನ ಸೋಮವಾರ ತನ್ನ ಅತಿ ಹೆಚ್ಚು ಏಕದಿನ ಹುಂಡಿ ಸಂಗ್ರಹವನ್ನು ಕಂಡಿದೆ. ಹಾಗೆ ಗೋಲ್ಡ್ ಪರಿಸ್ಥಿತಿಯಲ್ಲಿ ಜನರು ಹೊರಬರಲು ಕೂಡ ಆಗುತ್ತಿರಲಿಲ್ಲ. ಜನರು ಮನೆಯಲ್ಲಿ ಇದ್ದುಕೊಂಡು ತಿರುಪತಿಗೆ ಬೇಡಿಕೊಳ್ಳುತ್ತಿದ್ದರು ಆದರೆ ಈಗ ಎಲ್ಲಾ ಯಥಾ ಪರಿಸ್ಥಿತಿ ಬಂದಾಗ ತಿರುಪತಿಯಲ್ಲಿ ನೂಕು ನೂಕಲು ಶುರುವಾಗಿದೆ.ಇತ್ತೀಚಿನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ 6.18 ಕೋಟಿ ರೂ. ಹಣ ಸೋಮವಾರ ಸಂಗ್ರಹವಾಗಿದೆ. ದೇಶ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡ ನಂತರ ಮೊದಲ ಬಾರಿಗೆ ಟಿಟಿಡಿ ಈ ರೀತಿ ಭಾರಿ ಮೊತ್ತವನ್ನು ಸಂಗ್ರಹಿಸಿದೆ ಎಂದು ವರದಿ ಹೇಳಿದೆ.
ಲಾಕ್‌ಡೌನ್ ನಂತರದ ಎಲ್ಲಾ ರೀತಿಯ ಸೇವೆಗಳು ಮತ್ತು ದರ್ಶನಗಳನ್ನು ಟಿಟಿಡಿ ಪುನಾರಂಭಿಸಿದ ನಂತರ ಸೋಮವಾರದ ಆದಾಯ 6.18 ಕೋಟಿ ರೂ. ಸಂಗ್ರಹವಾಗಿದೆ ಎಂದು ಟಿಟಿಡಿಯ ಹಣಕಾಸು ಸಲಹೆಗಾರ ಮತ್ತು ಬಾಲಾಜಿಯ ಮುಖ್ಯ ಖಾತೆ ಅಧಿಕಾರಿ ಹೇಳಿದ್ದಾರೆ.ಇದಕ್ಕೂ ಹಿಂದೆ ಸಾಂಕ್ರಾಮಿಕ ರೋಗ ಬರುವುದಕ್ಕೂ ಮೊದಲು, 2018ರಲ್ಲಿ ಟಿಟಿಡಿಯಲ್ಲಿ ಅತಿ ಹೆಚ್ಚು ಸಂಗ್ರಹವಾದ ಏಕದಿನ ಹುಂಡಿ ಮೊತ್ತ 6.45 ಕೋಟಿ ರೂ.ಗಳಾಗಿದ್ದು, ಹಾಗೆಯೇ ಜುಲೈ 2018 ರಲ್ಲಿ, ಒಂದೇ ದಿನದ 6.28 ಕೋಟಿ ಹುಂಡಿ ಸಂಗ್ರಹ ಆಗಿತ್ತು. ಹೀಗಾಗಿ ಸೋಮವಾರ ಒಂದೇ ದಿನ ಆದ 6.18 ಕೋಟಿ ಸಂಗ್ರಹವು ರೂ. ದೇವಾಲಯದ ಇತಿಹಾಸದಲ್ಲಿ ಮೂರನೇ ಬಾರಿ ಆಗಿರುವ ಆರು ಕೋಟಿ ಗಡಿ ದಾಟಿದ ಹಣ ಸಂಗ್ರಹ ಆಗಿದೆ. ಸಾಮಾನ್ಯವಾಗಿ ಬೆಟ್ಟದ ಮೇಲಿರುವ ಈ ದೇಗುಲ ಒಂದು ದಿನದಲ್ಲಿ 65,000 ಕ್ಕೂ ಹೆಚ್ಚು ಕಾಲ್ನಡಿಗೆಯಲ್ಲಿ ಸಾಗಿ ಬರುವ ಭಕ್ತರನ್ನು ಕಂಡಿದೆ.
ಆದಾಗ್ಯೂ, ವಾರಾಂತ್ಯದಲ್ಲಿ ಈ ಸಂಖ್ಯೆಯು 80,000 ಕ್ಕೂ ಹೆಚ್ಚಾಗಿರುತ್ತದೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಇರುವುದರಿಂದ ಈ ಬಾರಿ ಧಾರ್ಮಿಕ ಕ್ಷೇತ್ರಕ್ಕೆ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂದು ನಂಬಲಾಗಿದೆ. ಈ ಹಿಂದೆ 10 ಕೋಟಿ ಸಂಗ್ರಹವಾಗಿತ್ತು ಎಂದು ಸುದ್ದಿಯಾಗಿತ್ತು ಆದರೆ ಅದು ಹಲವಾರು ಉದ್ಯೋಗಿಗಳು ನೀಡಿದ್ದರೆ ಎಂದು ಗೊತ್ತಾಗಿತ್ತು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.