ನಮಸ್ತೆ ಪ್ರಿಯ ಓದುಗರೇ, ರುಚಿಯಾದ ಅಡುಗೆಯನ್ನು ಮಾಡಬೇಕು ಅಂದರೆ ಆಹಾರದಲ್ಲಿ ಹುಳಿ ಉಪ್ಪು ಖಾರ ಸಿಹಿ ಕಹಿ ಎಲ್ಲವೂ ಇರಬೇಕು ಆಗ ಮಾತ್ರವೇ ಆಹಾರವು ತಿನ್ನಲು ಚೆಂದವಾಗಿ ಇರುತ್ತದೆ. ಇಲ್ಲವಾದರೆ ಅಡುಗೆಯಲ್ಲಿ ಏನಾದರೂ ಸ್ವಲ್ಪ ಮಿಸ್ ಆದರೂ ಕೂಡ ಅದನ್ನು ನೋಡಿ ಮೂಗು ಮುರಿಯುತ್ತಾರೆ ಪ್ರತಿಯೊಬ್ಬರ ಮನೆಯಲ್ಲಿ ಅಡುಗೆ ಮಾಡುತ್ತೇವೆ. ಇದರ ರುಚಿಯನ್ನು ಹೆಚ್ಚಿಸಲು ಕೆಲವು ಜನರು ಹಲವಾರು ಬಗೆಯ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಆದರೆ ಕೆಲವರಿಗೆ ಇದು ಇಷ್ಟವಾಗುವುದಿಲ್ಲ ಇನ್ನೂ ಕೆಲವರು ಆರೋಗ್ಯಕ್ಕೆ ಒಳ್ಳೆಯದು ಅನ್ನುವ ದೃಷ್ಟಿ ಕೋನದಿಂದ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಇನ್ನೂ ಕೆಲವರು ಅಲರ್ಜಿ ಅಂತ ದೂರು ಹೇಳುತ್ತಾರೆ. ಆದರೆ ಸ್ನೇಹಿತರೇ ಈ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಅಡುಗೆ ಮಾಡಬೇಕಾದರೆ ನಮಗೆ ಮೊದಲಿಗೆ ನೆನಪಿಗೆ ಬರುವುದು ಚಕ್ಕೆ ಅಥವಾ ದಾಲ್ಚಿನ್ನಿ. ಇದನ್ನು ಮೊದಲಿನ ಕಾಲದಿಂದಲೂ ಬಳಕೆ ಮಾಡಲಾಗಿದ್ದು ಇದನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಇದು ಆರೋಗ್ಯವನ್ನು ವೃದ್ದಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವುದರ ಜೊತೆಗೆ ಆಯುರ್ವೇದದಲ್ಲಿ ಔಷಧವನ್ನು ತಯಾರಿಸಲು ಈ ದಾಲ್ಚಿನ್ನಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು ಅಂತ ತಿಳಿದು ಬಂದಿದೆ.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಚಕ್ಕೆ ಅಥವಾ ದಾಲ್ಚಿನ್ನಿಯನ್ನು ಯಾವ ರೀತಿಯಲ್ಲಿ ಸೇವನೆ ಮಾಡಿದರೆ ನಮಗೆ ಲಾಭಗಳು ಉಂಟಾಗುತ್ತವೆ ಅಂತ ತಿಳಿಯೋಣ. ಸ್ನೇಹಿತರೇ ಈಗಿನ ಯುವಜನತೆ ಒತ್ತಡದ ಪರಿಸ್ಥಿತಿಯಿಂದ ನಿದ್ರಾಹೀನತೆ ಎಂಬ ಸಮಸ್ಯೆಯಿಂದ ತುಂಬಾನೇ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ಅದರಲ್ಲಿ ದಾಲ್ಚಿನ್ನಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಈ ನೀರು ಸಂಪೂರ್ಣವಾಗಿ ಆರಿದ ನಂತರ ಇದರಲ್ಲಿ ಜೇನುತುಪ್ಪವನ್ನು ಬೆರೆಸಿ ರಾತ್ರಿ ಊಟವಾದ ಮೇಲೆ ಇದನ್ನು ಕುಡಿಯಬೇಕು ಇದರಿಂದ ನಿಮಗೆ ಸುಖವಾದ ನಿದ್ರೆ ಲಭಿಸುತ್ತದೆ. ಇನ್ನೂ ಶೀತ ನೆಗಡಿ ಕೆಮ್ಮು ಕಫ ಇನ್ನಿತರ ಸಮಸ್ಯೆ ನಿಮ್ಮನ್ನು ಮೇಲಿಂದ ಮೇಲೆ ಕಾಡುತ್ತಿದ್ದರೆ ದಿನಕ್ಕೆ ಅರ್ಧ ಚಮಚ ದಾಲ್ಚಿನ್ನಿ ಪುಡಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ನೆಗಡಿ ಕೆಮ್ಮು ಕಫ ಸೈನಸ್ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಂತರ ಸ್ವಲ್ಪ ಬಿಸಿ ನೀರು ಅರ್ಧ ಚಮಚ ದಾಲ್ಚಿನ್ನಿ ಪುಡಿ ಮತ್ತು ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಅದನ್ನು ಕೀಲು ನೋವು ಮಂಡಿ ನೋವು ಜಾಯಿಂಟ್ ಪೈನ್ ಆಗುವ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿ ಅದನ್ನು 15 ನಿಮಿಷ ಬಿಟ್ಟು ತೊಳೆದುಕೊಳ್ಳಿ. ಹೀಗೆ ಸತತವಾಗಿ ಒಂದು ತಿಂಗಳು ಕಾಲ ಮಾಡುತ್ತಾ ಬಂದರೆ ನೋವು ತಕ್ಷಣವೇ ನಿವಾರಣೆ ಆಗುತ್ತದೆ.
ಇನ್ನೂ ನೀವು ಹಲ್ಲು ನೋವಿನಿಂದ ಬಳಲುತ್ತಿದ್ದರೆ ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ನಿತ್ಯವೂ ಹಲ್ಲುಗಳನ್ನು ಉಚ್ಚುತ್ತಾ ಬನ್ನಿ ಇದರಿಂದ ನಿಮ್ಮ ಹಲ್ಲು ನೋವು ಒಸಡುಗಳ ಸವೆತ ಇನ್ನಿತರ ಸಮಸ್ಯೆಗಳು ದೂರವಾಗುತ್ತದೆ. ಇನ್ನೂ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ನೀವು ದಾಲ್ಚಿನ್ನಿಯನ್ನು ಬಾಯಲ್ಲಿ ಹಾಕಿಕೊಂಡು ಅದರ ರಸವನ್ನು ಕುಡಿದರೆ ಬಾಯಿಯ ದುರ್ವಾಸನೆಯನ್ನು ತಡೆಯಬಹುದು. ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ ಹಾಗೆಯೇ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ಕೊಬ್ಬನ್ನು ಕರಗಿಸುವಲ್ಲಿ ಈ ಚಕ್ಕೆ ಸಹಾಯ ಮಾಡುತ್ತದೆ. ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮಧುಮೇಹಿಗಳಿಗೆ ಇದು ಒಂದು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ ಜೊತೆಗೆ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಆದರೆ ಉಷ್ಣಕಾರಕ ದೇಹವುಳ್ಳವರು ದಾಲ್ಚಿನ್ನಿ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಸೂಕ್ತ. ಶುಭದಿನ.